ಗಮಕ ವಾಚನ, ಗೀತಗಾಯನ, ಕವಿಗೋಷ್ಠಿ: ವಿರಾಟ ಪರ್ವದ ಗಮಕ ವಾಚನವನ್ನು ಪುಟ್ಟಸ್ವಾಮಿಗೌಡ (ಡಿಪಿಎಸ್) ನಡೆಸಿಕೊಟ್ಟರು. ನಿವೃತ್ತ ಮುಖ್ಯೋಪಾಧ್ಯಾಯ ನಂ. ಶಿವಲಿಂಗಯ್ಯ ವ್ಯಾಖ್ಯಾನ ಮಾಡಿದರು. ಚೌ. ಪು.ಸ್ವಾಮಿ, ವೆಂಕಟಾಚಲ, ಚಂದ್ರಿಕಾ ಗಿರೀಶ್, ಮಾಲತಿ ಸುರೇಶ್ ಹಾಗೂ ಶಾರದ ನಾಗೇಶ್ ಗೀತಗಾಯನ ನಡೆಸಿಕೊಟ್ಟರು. ಕವಿಗೋಷ್ಠಿಯಲ್ಲಿ ಆಶಾಲತಾ, ಕೂರಣಗೆರೆ ಕೃಷ್ಣಪ್ಪ, ಪ್ರಮೀಳಮ್ಮ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ ಹಾಗೂ ಚ. ಸಿ. ವೆಂಕಟೇಗೌಡ ಕವನ ವಾಚಿಸಿದರು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ದಸರಾ ಹಬ್ಬದ ಪ್ರಯುಕ್ತ ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಹಾಗೂ ಬೊಂಬೆನಾಡು ಗಮಕ ಪರಂಪರೆ ಸಂಸ್ಕೃತಿ ಟ್ರಸ್ಟ್ನಿಂದ ವಿರಾಟ ಪರ್ವದ ಗಮಕ ವಾಚನ, ವ್ಯಾಖ್ಯಾನ, ಗೀತಗಾಯನ ಹಾಗೂ ಕವಿಗೋಷ್ಠಿ ಪಟ್ಟಣದ ಕುವೆಂಪುನಗರದಲ್ಲಿರುವ ಮಮತಾ ಯೋಗಾನಂದ ಅವರ ಮನೆಯಂಗಳದಲ್ಲಿ ನಡೆಯಿತು.ಸಂಸ್ಕೃತಿ ಚಿಂತಕಿ ವಿನೋದಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಮಕ ಕಲೆಯು ಕಾವ್ಯದ ಭಾವ ಮತ್ತು ಅರ್ಥವನ್ನು ಜನರಿಗೆ ತಲುಪಿಸುವ ವಿಶಿಷ್ಟ ಕಲಾಪ್ರಕಾರವಾಗಿದ್ದು, ಇಂತಹ ಕಾರ್ಯಕ್ರಮಗಳು ಕನ್ನಡದ ಬಗ್ಗೆ ಅಭಿಮಾನ ಮೂಡಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾ.ವಿ.ಪ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್) ಮಾತನಾಡಿ, ಮಹಾಭಾರತದ ವಿರಾಟ ಪರ್ವವು ಧೈರ್ಯ, ತಾಳ್ಮೆ, ಕರ್ತವ್ಯಪ್ರಜ್ಞೆ ಹಾಗೂ ಜೀವನಮೌಲ್ಯಗಳನ್ನು ಸಾರುವ ಮಹತ್ವದ ಕಾವ್ಯಭಾಗವಾಗಿದೆ. ಗಮಕ ವಾಚನ ಮತ್ತು ವ್ಯಾಖ್ಯಾನದ ಮೂಲಕ ಕಾವ್ಯದ ಅಂತರಂಗವನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಭಾರತ ವಿಕಾಸ ಪರಿಷತ್ತಿನ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಗಮಕ ವಾಚನ, ಗೀತಗಾಯನ ಮತ್ತು ಕವಿಗೋಷ್ಠಿಯಂತಹ ಕಾರ್ಯಕ್ರಮಗಳು ಕನ್ನಡದ ಶ್ರೀಮಂತ ಕಲಾಪ್ರಕಾರಗಳನ್ನು ಪರಿಚಯಿಸುವುದರೊಂದಿಗೆ ಸಾಂಸ್ಕೃತಿಕ ಜಾಗೃತಿಗೂ ಸಹಕಾರಿಯಾಗುತ್ತವೆ ಎಂದರು.
ಭಾ.ವಿ.ಪ ಪ್ರಾಂತ್ಯ ಅಧ್ಯಕ್ಷ ಗುರುಮಾದಯ್ಯ ಮಾತನಾಡಿ, ಗಮಕದಂತಹ ಸಾಂಪ್ರದಾಯಿಕ ಕಲೆಗಳು ನಾಡಿನ ಸಾಂಸ್ಕೃತಿಕ ಸಂಪತ್ತಾಗಿವೆ. ಇವುಗಳನ್ನು ಜನಪ್ರಿಯಗೊಳಿಸಲು ಸಂಘಟಿತ ಪ್ರಯತ್ನ ಅಗತ್ಯವಾಗಿದ್ದು, ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.ಭಾ.ವಿ.ಪ ಪ್ರಾಂತ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮಾತನಾಡಿದರು.
ಗಮಕ ವಾಚನ, ಗೀತಗಾಯನ, ಕವಿಗೋಷ್ಠಿ: ವಿರಾಟ ಪರ್ವದ ಗಮಕ ವಾಚನವನ್ನು ಪುಟ್ಟಸ್ವಾಮಿಗೌಡ (ಡಿಪಿಎಸ್) ನಡೆಸಿಕೊಟ್ಟರು. ನಿವೃತ್ತ ಮುಖ್ಯೋಪಾಧ್ಯಾಯ ನಂ. ಶಿವಲಿಂಗಯ್ಯ ವ್ಯಾಖ್ಯಾನ ಮಾಡಿದರು. ಚೌ. ಪು.ಸ್ವಾಮಿ, ವೆಂಕಟಾಚಲ, ಚಂದ್ರಿಕಾ ಗಿರೀಶ್, ಮಾಲತಿ ಸುರೇಶ್ ಹಾಗೂ ಶಾರದ ನಾಗೇಶ್ ಗೀತಗಾಯನ ನಡೆಸಿಕೊಟ್ಟರು. ಕವಿಗೋಷ್ಠಿಯಲ್ಲಿ ಆಶಾಲತಾ, ಕೂರಣಗೆರೆ ಕೃಷ್ಣಪ್ಪ, ಪ್ರಮೀಳಮ್ಮ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ ಹಾಗೂ ಚ. ಸಿ. ವೆಂಕಟೇಗೌಡ ಕವನ ವಾಚಿಸಿದರು.ಬೊಂಬೆ ನಾಡು ಗಮಕ ಪರಂಪರೆ ಸಂಸ್ಕೃತಿ ಟ್ರಸ್ಟ್ನ ಸಂಚಾಲಕರಾದ ಮಮತಾ ಮತ್ತು ಯೋಗಾನಂದ, ಭಾರತ ವಿಕಾಸ ಪರಿಷತ್ತಿನ ಉಪಾಧ್ಯಕ್ಷ ಕರಿಯಪ್ಪ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಗೋವಿಂದಯ್ಯ, ಕಾರ್ಯದರ್ಶಿ ಕಾಡಯ್ಯ, ತಿಪ್ರೇಗೌಡ, ಸೇರಿದಂತೆ ಹಲವರು ಇದ್ದರು.