ಜೈಲಿಗೂ ಸಿದ್ಧ, ಭೂಮಿ ಮಾತ್ರ ಬಿಡೆವು

| Published : Dec 18 2024, 12:47 AM IST

ಸಾರಾಂಶ

ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಜಮೀನು ಭೂಸ್ವಾಧೀನ ವಿರೋಧಿಸಿ ಇದುವರೆಗೂ ಶಾಂತಯುತ ಹೋರಾಟ ಮಾಡುತ್ತಿದೆ. ಹಾಗೊಂದು ವೇಳೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆಯೇ ಹೊರತು ಜಮೀನು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ತಾಲೂಕಿನ ಚನ್ನರಾಯಪಟ್ಟಣ ಭೂಮಿತಾಯಿ ಹೋರಾಟ ಸಮಿತಿಯೊಂದಿಗೆ ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ಭಾಗದ ಎಲ್ಲ ಸಂಘಟನೆಗಳ ಮುಖಂಡರು ಮಾತನಾಡಿ, ಡಿ.30ಕ್ಕೆ ಪ್ರತಿಭಟನೆಗೆ ಒಂದು ಸಾವಿರ ದಿನಗಳು ಪೂರೈಸುತ್ತಿದ್ದು, ಇದುವರೆಗೂ ಹಲವು ಬಗೆಯ ಪ್ರತಿಭಟನೆ ಮತ್ತು ಹೋರಾಟ ಮಾಡಿದ್ದೇವೆ. ಆದರೆ, ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. ಇನ್ನುಮುಂದೆ ಜಿಲ್ಲಾಧಿಕಾರಿಗಳ ಕಚೇರಿ ಮುಂದಕ್ಕೆ ಹೋರಾಟ ಸ್ಥಳಾಂತರಗೊಂಡು ಮುಂದುವರೆಯಲಿದೆ. ಹೋರಾಟಕ್ಕೆ ಜಿಲ್ಲೆಯ ಎಲ್ಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಕಾರಹಳ್ಳಿ ಶ್ರೀನಿವಾಸ್‌ ತಿಳಿಸಿದರು.

ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಚನ್ನರಾಯಪಟ್ಟಣ ಹೋಬಳಿಯ ಮಾರೇಗೌಡ, ನಂಜಪ್ಪ, ಅಶ್ವತ್ಥಪ್ಪ, ಬಿದಲೂರು ರಮೇಶ್‌, ಜಯರಾಮೇಗೌಡ, ಕರವೇ ಪಕ್ಷದ ಚಂದ್ರಶೇಖರ್‌, ಕೆಆರ್‌ಎಸ್‌ ಪಕ್ಷದ ಶಿವಶಂಕರ್‌, ಅಲ್ಲದೆ ದೊಡ್ಡಬಳ್ಳಾಪುರದ ಚಂದ್ರತೇಜಸ್ವಿ, ಸಂಜೀವ್‌ ನಾಯಕ್‌, ಬೆಳವಂಗಲ ಪ್ರಭ, ಹೊಸಕೋಟೆಯ ವಕೀಲರ ಪರಿಷತ್‌ ಅಧ್ಯಕ್ಷ ಹರೀಂದ್ರ ಭಾಗವಹಿಸಿದ್ದರು.