ಸಾರಾಂಶ
ಕೂಡಲಸಂಗಮ ಪೀಠ ಸ್ಥಾಪನೆಯಾದಾಗಿನಿಂದಲೂ ಸಮಾಜದವರಿಗೆ 2ಎ ಹಾಗೂ ಒಬಿಸಿ ಮೀಸಲಾತಿ ಪಡೆಯುವ ಸಲುವಾಗಿ ಸರ್ಕಾರದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೊಡಲಸಂಗಮ ಪೀಠ ಸ್ಥಾಪನೆಯಾದಾಗಿನಿಂದಲೂ ಸಮಾಜದವರಿಗೆ 2ಎ ಹಾಗೂ ಒಬಿಸಿ ಮೀಸಲಾತಿ ಪಡೆಯುವ ಸಲುವಾಗಿ ಸರ್ಕಾರದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಸರ್ಕಾರಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ನಮ್ಮ ಹಕ್ಕು ಪಡೆಯಲು ರಾಜ್ಯ ಲಿಂಗಾಯತ ಪಂಚಮಸಾಲಿ ವಕೀಲರ ಮಹಾಪರಿಷತ್ ಸ್ಥಾಪಿಸಿದ್ದು, ಸೆ.22ರಂದು ಬೆಳಗಾವಿಯಲ್ಲಿ ಸಭೆ ನಡೆಸಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.ಗುರುವಾರ ತಾಲೂಕು ಅಧ್ಯಕ್ಷ ಎಂ.ಬಿ. ದ್ಯಾಮನಗೌಡರ ನಿವಾಸದಲ್ಲಿ ನಡೆದ ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರ ಷರಿಷತ್ತಿನ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಸಭೆಯಲ್ಲಿ ಸೆ.22ರಂದು ಬೆಳಗಾವಿಯ ಗಾಂಧಿಭವನದಲ್ಲಿ ಪಂಚಮಶಾಲಿ ಮಲೆಗೌಡ ಲಿಂಗಾಯತ ಗೌಡ ದಿಕ್ಷೆ ಹಾಗೂ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಕಾನೂನಾತ್ಮಕ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.
ಹಿರಿಯ ವಕೀಲ ಬಿ.ವಿ. ಮಲಗೌಡರ ಅಧ್ಯಕ್ಷತೆ ವಹಿಸಿದ್ದರು. ಸವದತ್ತಿ ಯಲ್ಲಮ್ಮ ಪುರಸಭೆ ನೂತನ ಅಧ್ಯಕ್ಷೆ ಚಿನ್ನಮ್ಮ ಹುಚ್ಚನ್ನವರ, ಪಂಚಮಶಾಲಿ ಮುಖಂಡರಾದ ಬಸವರಾಜ ಕಾರದಗಿ, ಬಸವರಾಜ ಪುಟ್ಟಿ ಲಿಂಗಾಯತ ಪಂಚಮಶಾಲಿ ವಕೀಲರ ಪರಿಷತ್ತಿನ ಅಧ್ಯಕ್ಷ ಎಂ.ಬಿ. ದ್ಯಾಮನಗೌಡರ, ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರ ಷರಿಷತಿನ ಸದಸ್ಯರು ಪಾಲ್ಗೊಂಡಿದ್ದರು.ಇದೇ ವೇಳೆ ಜಗದ್ಗುರುಗಳು, ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ ತಾಲೂಕು ಅಧ್ಯಕ್ಷ ಎಂ.ಬಿ. ದ್ಯಾಮನಗೌಡರ ಅವರನ್ನು ಸನ್ಮಾನಿಸಲಾಯಿತು. ವಕೀಲರಾದ ಬಿ.ಕೆ. ಕಡಕೋಳ ನಿರೂಪಿಸಿದರು. ಎಂ.ಬಿ. ದ್ಯಾಮನಗೌಡರ ವಂದಿಸಿದರು