ಸಾರಾಂಶ
ಪ್ರಾದೇಶಿಕತೆ, ಕೋಮುವಾದ ಮತ್ತು ಭಾಷೆಗೆ ಸಂಬಂಧಿಸಿದಂತೆ ಎಷ್ಟೇ ಗೊಂದಲಗಳಿದ್ದರೂ ಸಂವಿಧಾನದ ಮೌಲ್ಯಗಳ ಪೈಕಿ ಒಂದಾಗಿರುವ ಭ್ರಾತೃತ್ವ ಮನೋಭಾವ ಎತ್ತಿ ಹಿಡಿದಾಗ ನಮ್ಮ ಎಲ್ಲ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರ ಲಭಿಸುತ್ತದೆ ಎಂದು ಕಲಬುರಗಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ಎಂ. ಶಾಮ್‌ಪ್ರಸಾದ ಪ್ರತಿಪಾದಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಾದೇಶಿಕತೆ, ಕೋಮುವಾದ ಮತ್ತು ಭಾಷೆಗೆ ಸಂಬಂಧಿಸಿದಂತೆ ಎಷ್ಟೇ ಗೊಂದಲಗಳಿದ್ದರೂ ಸಂವಿಧಾನದ ಮೌಲ್ಯಗಳ ಪೈಕಿ ಒಂದಾಗಿರುವ ಭ್ರಾತೃತ್ವ ಮನೋಭಾವ ಎತ್ತಿ ಹಿಡಿದಾಗ ನಮ್ಮ ಎಲ್ಲ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರ ಲಭಿಸುತ್ತದೆ ಎಂದು ಕಲಬುರಗಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ಎಂ. ಶಾಮ್‌ಪ್ರಸಾದ ಪ್ರತಿಪಾದಿಸಿದರು.ಗಣರಾಜ್ಯೋತ್ಸವ ನಿಮಿತ್ತ ಹೈಕೋರ್ಟ್ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ತಜ್ಞರ ಪ್ರಕಾರ ಕಳೆದ ೭೪ ವರ್ಷಗಳಲ್ಲಿ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ‍್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ, ಸಂವಿಧಾನದ ಪ್ರಮುಖ ಆಶಯಗಳ ಪೈಕಿ ಒಂದಾಗಿರುವ ಭ್ರಾತೃತ್ವ ಮನೋಭಾವದ ಕುರಿತು ಹೆಚ್ಚಿನ ಚರ್ಚೆ ಆಗಿಲ್ಲ ಎಂದರು.
ಗೌರವಾನ್ವಿತ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್, ಗೌರವಾನ್ವಿತ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್, ಹೈಕೋರ್ಟಿನ ರಿಜಿಸ್ಟಾರ್‌ಗಳಾದ ಮರುಳಸಿದ್ದರಾಧ್ಯ, ದಯಾನಂದ ವಿ.ಎಚ್. ವಕೀಲರ ಸಂಘದ ಅಧ್ಯಕ್ಷರು ಗುಪ್ತಲಿಂಗ ಎಸ್. ಪಾಟೀಲ, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಸೇರಿದಂತೆ ಸಂಘದ ಸದಸ್ಯರು ಸಿಬ್ಬಂದಿ ವರ್ಗದವರು ಹಾಜರಿದ್ದರು.