ಚಿಂತನೆಯತ್ತ ಕರೆದೊಯ್ಯುವುದೇ ನೈಜ ಶಿಕ್ಷಣ: ವಾಣಿಜ್ಯ ತೆರಿಗೆ ಇಲಾಖೆಯ ನರಸಿಂಹಮೂರ್ತಿ

| Published : Sep 07 2024, 01:44 AM IST

ಚಿಂತನೆಯತ್ತ ಕರೆದೊಯ್ಯುವುದೇ ನೈಜ ಶಿಕ್ಷಣ: ವಾಣಿಜ್ಯ ತೆರಿಗೆ ಇಲಾಖೆಯ ನರಸಿಂಹಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನನ್ನು ಚಿಂತನೆಯತ್ತ ಕರೆದೊಯ್ಯುವುದೇ ಶಿಕ್ಷಣ. ಈ ಶಿಕ್ಷಣದಿಂದ ಮಾತ್ರ ಮನುಷ್ಯನನ್ನು ಬದಲಾಯಿಸಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ನರಸಿಂಹಮೂರ್ತಿ ಹೇಳಿದರು. ದೊಡ್ಡಬಳ್ಳಾಪುರದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯದಲ್ಲಿ ಪ್ರತಿಭಾ ಪುರಸ್ಕಾರಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಮನುಷ್ಯನನ್ನು ಚಿಂತನೆಯತ್ತ ಕರೆದೊಯ್ಯುವುದೇ ಶಿಕ್ಷಣ. ಈ ಶಿಕ್ಷಣದಿಂದ ಮಾತ್ರ ಮನುಷ್ಯನನ್ನು ಬದಲಾಯಿಸಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ನರಸಿಂಹಮೂರ್ತಿ ಹೇಳಿದರು.

ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಬ್ಬ ವಿದ್ಯಾರ್ಥಿಯು ತುಂಬಾ ಚಿಂತನಾತ್ಮಕವಾಗಿ, ಸೃಜನಶೀಲವಾಗಿ ಯೋಚಿಸಿದರೆ, ಎಲ್ಲ ಬದಲಾವಣೆಗಳು ಕಣ್ಣ ಮುಂದೆ ಬರುತ್ತವೆ, ಇದಕ್ಕೆ ಕೂತೂಹಲ ಬೇಕು‌. ಈ ಕುತೂಹಲದಿಂದ ನಿಮ್ಮನ್ನು ನೀವು ದೊಡ್ಡ ವ್ಯಕ್ತಿಗಳಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಏನೂ ಗೊತ್ತಿಲ್ಲದ ವಿದ್ಯಾರ್ಥಿಯು ಸಹ ಸಾಧನೆ ಮಾಡಬಹುದು, ಇದಕ್ಕೆ ಪ್ರಯತ್ನ ತುಂಬಾ ಮುಖ್ಯ. ಪಠ್ಯದ ಜೊತೆಗೆ ದೇಶದ ಈಗಿನ ವಾಸ್ತವಿಕ ಅಂಶಗಳನ್ನು ಹೊರಗಿನ ಜ್ಞಾನವನ್ನು ಪಡೆದಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸಬಹುದು ಎಂದರು.

ಡಾ. ಇಂದಿರಾ ಶ್ಯಾಮ್ ಪ್ರಸಾದ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿದ್ದಾರೆ. ಅದರಲ್ಲಿನ ಹಲವು ಸಕಾರಾತ್ಮಕ ಅಂಶಗಳನ್ನು ಅನುಸರಿಸಬೇಕು. ಏನನ್ನಾದರೂ ಸಾಧಿಸುವ ಶಕ್ತಿ ಯುವ ಜನತೆಗೆ ಇದೆ. ಎಲ್ಲಾ ಅವಕಾಶಗಳಿವೆ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಗುರಿ ಇಟ್ಟುಕೊಂಡರೆ ಸಾಲದು, ಅ ಗುರಿಗಾಗಿ ಸತತ ಪರಿಶ್ರಮಪಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಟಿ.ಎಲ್.ಎಸ್.ಪ್ರೇಮ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ಮೊದಲು ನಾನೇನಾಗಬೇಕು ಎಂಬುದನ್ನು ಅರಿಯಬೇಕು ಎಂದರು.

ನಿಲಯದಲ್ಲಿ ಪಿಯುಸಿ ವಿಭಾಗದಲ್ಲಿ ಮನೋಜ್.ಕೆ ಮತ್ತು ಬಾಲಾಜಿ ಹಾಗೂ ಪದವಿ ವಿಭಾಗದಲ್ಲಿ ಹೇಮಂತ್ ಕುಮಾರ್.ಎಂ.ಎಂ ರವರನ್ನು ಉತ್ತಮ ಅಂಕ ಗಳಿಸಿದ್ದಕ್ಕಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಇಲಾಖೆಯ ಉಮಾಪತಿ, ಮಂಜುನಾಥ್.ಎಂ.ಎಸ್, ಯೋಗೇಶ್, ನಿಲಯದ ವಾರ್ಡನ್ ರಾಧಾಮಣಿ.ಬಿ, ಹರೀಶ್.ಎಚ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.