ನಿರ್ಮಲ ಮನಸ್ಸಿನಿಂದ ದೇವರ ಸಾಕ್ಷಾತ್ಕಾರ: ಶಿವಕುಮಾರಯ್ಯ ಹಿರೇಮಠ

| Published : May 25 2024, 12:48 AM IST

ನಿರ್ಮಲ ಮನಸ್ಸಿನಿಂದ ದೇವರ ಸಾಕ್ಷಾತ್ಕಾರ: ಶಿವಕುಮಾರಯ್ಯ ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ಕುಕನೂರು ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜಾದು ಪ್ರದರ್ಶನ, ಸಂಗೀತ ರಸಮಂಜರಿ, ನಗೆಹಬ್ಬ ಕಾರ್ಯಕ್ರಮ ನಡೆಯಿತು.

ಕುಕನೂರು: ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವ ಜತೆಗೆ ಶಾಂತಿ, ನೆಮ್ಮದಿ ಸಿಗುತ್ತದೆ. ನಿರ್ಮಲ ಮನಸ್ಸಿನಿಂದ ದೇವರ ಸಾಕ್ಷಾತ್ಕಾರ ಸಾಧ್ಯ ಎಂದು ಗ್ರಾಮದ ಹಿರಿಯರಾದ ವೇದಮೂರ್ತಿ ಶಿವಕುಮಾರಯ್ಯ ಹಿರೇಮಠ ಹೇಳಿದರು.

ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜರುಗಿದ ಜಾದು ಪ್ರದರ್ಶನ, ಸಂಗೀತ ರಸಮಂಜರಿ, ನಗೆಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಕ್ತಿ ಎಂಬುದು ಮನುಷ್ಯನಲ್ಲಿ ಇದ್ದರೆ ಸಾಕು. ನಿತ್ಯ ಒಳ್ಳೆಯ ಮನಸ್ಸಿನಿಂದ ಪೂಜಿಸಿದರೆ ದೇವರು ಒಲಿಯುತ್ತಾನೆ. ನಾವು ಒಳ್ಳೆಯತನ ರೂಢಿಸಿಕೊಂಡರೆ ಇತರರಿಗೂ ಉತ್ತಮ. ನಮ್ಮಿಂದ ಒಳ್ಳೆತನ ರವಾನೆಯಾದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಜಾತ್ರಾ ಮಹೋತ್ಸವಗಳಿಂದ ಸಮಾನತೆ ನಿರ್ಮಾಣವಾಗುತ್ತದೆ ಎಂದರು.

ಪತ್ರಕರ್ತ ಮಲ್ಲಪ್ಪ ಮಾಟರಂಗಿ ಮಾತನಾಡಿ, ಚಿಕೇನಕೊಪ್ಪ ಗ್ರಾಮ ಧಾರ್ಮಿಕತೆಗೆ ಹೆಸರುವಾಸಿಯಾಗಿದೆ. ಸದಾ ಒಂದಿಲ್ಲೊಂದು ಧಾರ್ಮಿಕ ಕಾರ್ಯಗಳು ಜರುಗುತ್ತಾ ಇರುತ್ತವೆ. ಸಹೋದರತ್ವ, ಸಮಾನತೆಗೆ ಸದಾ ಮುಂದೆ ಇದೆ. ಸಂಗೀತ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದರು.

ಕುಂದಾಪುರದ ಪ್ರಕಾಶ ಹೆಮ್ಮಾಡಿ, ನೇತ್ರಾವತಿ ಹೆಮ್ಮಾಡಿ ಅವರಿಂದ ಜಾದು ಪ್ರದರ್ಶನ ನಡೆಯಿತು. ಹಾಸ್ಯ ಕಲಾವಿದರಾದ ಕೆ. ಕಾಳಿದಾಸ, ಮಿಮಿಕ್ರಿ ಮಾರೇಶ ಅವರಿಂದ ನಗೆ ಹಬ್ಬ ಹಾಗೂ ಸಂಗೀತ ಕಾರ್ಯಕ್ರಮ ಜರುಗಿತು.

ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ, ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ದೇವರಾಜ ತೆಕ್ಕಲಕೋಟಿ ಅವರನ್ನು ಸನ್ಮಾನಿಸಲಾಯಿತು. ಗುತ್ತಿಗೆದಾರ ಈರಪ್ಪ ಬಿಸನಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡರಾದ ಬಸವಲಿಂಗಪ್ಪ ವಕ್ಕಳದ, ತೋಟಯ್ಯ ಹಿರೇಮಠ, ಅಶೋಕ ಅಣಗೌಡ್ರ,, ಸಂಗಪ್ಪ ಅಡಗಿಮನಿ ಇದ್ದರು.ಶ್ರೀಗಳ ಭೇಟಿ: ಶ್ರೀ ಶಿವಶಾಂತವೀರ ಶರಣರು ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮಕ್ಕೆ ಭೇಟಿ ನೀಡಿ ಆರ್ಶೀವಚನ ನೀಡಿದರು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.

ಶ್ರೀದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಸಮಾರಂಭಗಳು ಅದ್ಧೂರಿಯಾಗಿ ಜರುಗಿದವು.

ಕಾತರಕಿ ಹನುಮಂತಪ್ಪ ಪೂಜಾರ, ಹನಕುಂಟಿಯ ಮಂಜುನಾಥ ಪೂಜಾರ್ ಅವರು ಧಾರ್ಮಿಕ ಸಮಾರಂಭಗಳ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಮಹೇಂದ್ರಕುಮಾರ ಗದಗಿನ, ಸದಸ್ಯರಾದ ಚಿದಾನಂದ ಮ್ಯಾಗಳಮನಿ, ಲಲಿತಾ ಅಡಗಿಮನಿ, ವಿಜಯಲಕ್ಷ್ಮಿ ಮಂಗಳೂರು, ಕನಕಪ್ಪ ಚಲವಾದಿ, ಹನುಮಪ್ಪ ಚಲವಾದಿ, ಹನುಮಪ್ಪ ಸಣ್ಣೀರಪ್ಪ ಛಲವಾದಿ, ಶರಣಪ್ಪ ಛಲವಾದಿ, ಈರಪ್ಪ ಚಲವಾದಿ, ರಾಜಪ್ಪ ಛಲವಾದಿ, ಮಹಾದೇವಪ್ಪ ಛಲವಾದಿ, ಬಸಪ್ಪ ಛಲವಾದಿ, ಶಿವಪುತ್ರಪ್ಪ ಚಲವಾದಿ, ಕಳಕಪ್ಪ ಚಲವಾದಿ, ಅಂದಪ್ಪ ಛಲವಾದಿ, ಬಸವರಾಜ ಕಡೇಮನಿ, ಭೀಮೇಶ ಛಲವಾದಿ, ದೇವರಾಜ ಛಲವಾದಿ ಇದ್ದರು.