ಸಾರಾಂಶ
ಹೊಸಕೋಟೆ: ಕಂಬಳಿಪುರ ಗ್ರಾಮದಲ್ಲಿರುವ ಶ್ರೀ ಅಮ್ಮ ಶಕ್ತಿ ಪೀಠದ ಕಾಟೇರಮ್ಮ ದೇವಿ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುವ ಆಧ್ಯಾತ್ಮಿಕ ಕೇಂದ್ರವಾಗಿ ರೂಪುಗೊಂಡಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕಿನ ಸೂಲಿಬೆಲೆ ಹೋಬಳಿಯ ಕಂಬಳಿಪುರ ಗ್ರಾಮದಲ್ಲಿರುವ ಶ್ರೀ ಅಮ್ಮ ಶಕ್ತಿ ಪೀಠ ಕಾಟೇರಮ್ಮ ದೇವಿ ದೇವಾಲಯಕ್ಕೆ ಬಿಎಂಟಿಸಿ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.ಸಾಮಾಜಿಕ ಜಾಲತಾಣಗಳಲ್ಲಿ ದೇವಾಲಯದ ಪವಾಡ ವೀಕ್ಷಿಸಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಹೊಸಕೋಟೆಯಿಂದ ದೇವಾಲಯಕ್ಕೆ ತೆರಳಲು ಯಾವುದೇ ರೀತಿಯ ಬಸ್ ಸೇವೆ ಇಲ್ಲದೆ ಭಕ್ತರು ಆಟೋಗಳಲ್ಲಿ ಹೆಚ್ಚಿನ ಹಣವನ್ನ ಕೊಟ್ಟು ಸಂಚಾರ ಮಾಡಬೇಕಿತ್ತು. ಆದ್ದರಿಂದ ಭಕ್ತಾದಿಗಳ ಸಮಸ್ಯೆಯನ್ನ ಅರಿತು ಎರಡು ಬಿಎಂಟಿಸಿ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಶಕ್ತಿ ಯೋಜನೆಯನ್ನು ಬಳಸಿಕೊಂಡು ಮಹಿಳೆಯರು ಉಚಿತವಾಗಿ ದೇವಾಲಯಕ್ಕೆ ಸಂಚರಿಸಬಹುದು ಎಂದರು.ಬಸ್‌ಗಳು ಬೆಳಿಗ್ಗೆ 7 ಗಂಟೆಯಿಂದ ಸಂಜೆ ೫ ಗಂಟೆವರೆಗೆ ಪ್ರತಿ ಅರ್ಧ ಗಂಟೆಗೊಮ್ಮೆ ಸಂಚಾರ ಮಾಡಲಿದೆ. ರಾಷ್ಟ್ರೀಯ ಹೆದ್ದಾರಿ 207ರ ಹಸಿಗಾಳ ಮೂಲಕ ಕಂಬಳೀಪುರಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದರು.ತಹಸೀಲ್ದಾರ್ ಸೋಮಶೇಖರ್, ಬಿಎಂಆರ್‌ಡಿಎ ಸದಸ್ಯ ಡಾ.ಹೆಚ್.ಎಂಸುಬ್ಬರಾಜ್, ಮಾಜಿ ಅದ್ಯಕ್ಷ ವಿಜಯ್ ಕುಮಾರ್, ವಕ್ತ್ ಬೋರ್ಢ್ ಮಾಜಿ ಆದ್ಯಕ್ಷ ನಿಸಾರ್, ಮುಖಂಢರಾದ ಉಪ್ಪಾರಹಳ್ಳಿ ಮುನಿಯಪ್ಪ, ಆರ್‌ಟಿಸಿ ಗೋವಿಂದರಾಜ್, ರಾಕೇಶ್, ನವಾಜ್ ಹಾಜರಿದ್ದರು.