ಸಾರಾಂಶ
ತರೀಕೆರೆ: ೨೦೨೩-೨೪ನೇ ಸಾಲಿನ ಎಸ್ಎಸ್ಎಲ್ ಸಿ-೧ ಪರೀಕ್ಷೆಗೆ ಸಂಬಂಧಿಸಿದಂತೆ ಮರುಮೌಲ್ಯಮಾಪನದಲ್ಲಿ ಅರ್ಜಿ ಸಲ್ಲಿಸಿದ್ದ ಪಟ್ಟಣದ ಅರುಣೋದಯ ಶಾಲೆ ಕು.ಮೌಲ್ಯ.ಡಿ ಅವರಿಗೆ ಹೆಚ್ಚು ಅಂಕಗಳು ಬಂದಿದ್ದು ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯದಲ್ಲಿ ೫ನೇ ಸ್ಥಾನ ಹಂಚಿಕೊಂಡಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ ಡಾ. ಜಿ.ಎಚ್.ಶ್ರೀ ಹರ್ಷ ಪತ್ರಿಕೆಗೆ ತಿಳಿಸಿದ್ದಾರೆ.

ಕು.ಮೌಲ್ಯ.ಡಿ ಈ ಮೊದಲು ೬೦೮ ಅಂಕಗಳನ್ನು ಪಡೆದಿದ್ದು, ಮರುಮೌಲ್ಯಮಾಪನದಲ್ಲಿ ೧೩ ಅಂಕಗಳನ್ನು ಪಡೆದು, ಒಟ್ಟು ೬೨೧ ಅಂಕಗಳನ್ನು ಗಳಿಸಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿರುತ್ತಾರೆ. ಹಾಗೆಯೇ ಅರುಣೋದಯ ಶಾಲೆಯ ಕು. ಶ್ರಾವ್ಯ. ಟಿ.ಎನ್ ಈ ಮೊದಲು ೬೧೦ ಅಂಕ ಪಡೆದಿದ್ದು ಮರುಮೌಲ್ಯಮಾಪನದಲ್ಲಿ ೮ ಅಂಕಗಳನ್ನು ಪಡೆದು ೬೧೮ ಅಂಕಗಳನ್ನು ಗಳಿಸಿ ತರೀಕೆರೆ ತಾಲೂಕಿನಲ್ಲಿ ಎರಡನೇ ಸ್ಥಾನ ಪಡೆದಿರುತ್ತಾರೆ. ಕು.ಮೌಲ್ಯ.ಡಿ ಅವರ ಪೋಷಕ ಶಿಕ್ಷಕ ವೃತ್ತಿಯ ದೇವೇಂದ್ರಪ್ಪ.ಆರ್ ಮತ್ತು ಲೀಲಾವತಿ.ಕೆ.ಆರ್ ಹಾಗೂ ಕು.ಶ್ರಾವ್ಯ. ಟಿ.ಎನ್ ಅವರ ಪೋಷಕರಾದ ಶಿಕ್ಷಕ ವೃತ್ತಿಯ ನಾಗರಾಜ್. ಟಿ.ಎಸ್ ಮತ್ತು ಶಿಕ್ಷಕ ವೃತ್ತಿಯ ಮಾನಸ.ಎಚ್.ಪಿ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.9ಕೆಟಿಆರ್.ಕೆ.1ಃ ಮೌಲ್ಯ ಡಿ.9ಕೆಟಿಆರ್.ಕೆ.2ಃ ಶ್ರಾವ್ಯ ಟಿ.ಎನ್.