ಸಾರಾಂಶ
ಶಿಗ್ಗಾಂವಿ: ಟಿಕೆಟ್ ವಂಚಿಸಿದ್ದಕ್ಕೆ ದುಃಖವಿದ್ದು, ನಮಗೆ ಸಿಕ್ಕಿರುವ ಸಂವಿಧಾನಿಕ ಹುದ್ದೆ ಕುರಿತು ಬಸವರಾಜ ಬೊಮ್ಮಾಯಿ ಮಾತನಾಡುತ್ತಿದ್ದು, ಸಾಮಾನ್ಯ ಕಾರ್ಯರ್ತರಿಗೆ ಬೊಮ್ಮಾಯಿ ಟಿಕೆಟ್ ಕೊಡಿಸಿದರೆ ಅವರು ಕೊಡಿಸಿರುವ ಸಾಂವಿಧಾನಿಕ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ನಾವು, ನೀವು ಬೇರಲ್ಲಾ ಎಂದು ಹೇಳುತ್ತ ನಮ್ಮ ಅಂತರಾಳದ ಆಶೆಗಳಿಗೆ ನೀರೆರೆದು ಬೆಳೆಸಿ, ವಂಚನೆ ಮಾಡಿದ್ದು ಬಸವರಾಜ ಬೊಮ್ಮಾಯಿಯವರಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಟಿಕೆಟ್ ವಂಚಿತ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಅವರು ಗುರುವಾರ ಸಂಜೆ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.ನಂತರ ಸಭೆಯಲ್ಲಿದ್ದ ಅನೇಕರ ಅಭಿಪ್ರಾಯವನ್ನು ಸಂಗ್ರಹಿಸಿದ ಹಿರಿಯರು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ ಸಂಗಮೇಶ ಕಂಬಾಳಿಮಠ ಹಿರಿಯರ ತೀರ್ಮಾನವನ್ನು ಸಭೆಗೆ ತಿಳಿಸಿದರು. ಶಿಗ್ಗಾಂವಿಯಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಶ್ರೀಕಾಂತ ದುಂಡಿಗೌಡ್ರ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದೆ ತಟಸ್ಥವಾಗಿದ್ದು, 30ನೇ ತಾರೀಖಿನ ನಂತರ ಮುಂದಿನ ರಾಜಕೀಯ ನಡೆಯ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಟಿ.ವಿ. ಸೂರ್ಗಿಮಠ, ತಿಪ್ಪಣ್ಣಾ ಸಾತಣ್ಣವರ, ಹನುಮರೆಡ್ಡಿ ನಡುವಿನಮನಿ, ರಮೇಶ ಸಾತಣ್ಣವರ, ಎಮ್.ಎನ್. ವೆಂಕೋಜಿ, ಬಸವರಾಜ ನಾರಾಯಣಪುರ, ಬಾಪುಗೌಡ ಪಾಟೀಲ, ಮಲ್ಲೇಶಪ್ಪಾ ಚೋಟಪ್ಪನವರ, ಭರ್ಮಜ್ಜಿ ನವಲಗುಂದ, ಬಸಲಿಮಗಪ್ಪಾ ನರಗುಂದ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))