ಸಾರಾಂಶ
ಕರ್ನಾಟಕ ಸರ್ಕಾರ ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್. ರವಿಕುಮಾರ್, ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ (ಭೋವಿ ನಿಗಮ) ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಭೋವಿ ಮುಖಂಡರೊಂದಿಗೆ ಜಾತಿ ಪ್ರಮಾಣ ಪತ್ರ, ಕಲ್ಲು ಕೋರೆ ಅನುಮತಿಗಳಲ್ಲಿನ ತೊಂದರೆ ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರದ ಭರವಸೆಯನ್ನಿತ್ತರು.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ಸರ್ಕಾರ ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್. ರವಿಕುಮಾರ್, ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ (ಭೋವಿ ನಿಗಮ) ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಭೋವಿ ಮುಖಂಡರೊಂದಿಗೆ ಜಾತಿ ಪ್ರಮಾಣ ಪತ್ರ, ಕಲ್ಲು ಕೋರೆ ಅನುಮತಿಗಳಲ್ಲಿನ ತೊಂದರೆ ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರದ ಭರವಸೆಯನ್ನಿತ್ತರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಾರಾಯಣಸ್ವಾಮಿ, ನಿಗಮದ ಅಧಿಕಾರಿಗಳಾದ ಶಂಕರ್ ಮಲ್ಲಾರ್ ಉಪಸ್ಥಿತರಿದ್ದರು.ಭೋವಿ ಸಂಘ ಉಡುಪಿ ಜಿಲ್ಲಾಧ್ಯಕ್ಷ ಆನಂದ ಸಾಯಿಬ್ರಕಟ್ಟೆ, ಮುಖಂಡರಾದ ಶಿವಕುಮಾರ್ ಪರ್ಕಳ, ಜಗದೀಶ ಪರ್ಕಳ, ರಾಜ್ ಕುಮಾರ್, ಈಶ್ವರ್ ಸಾಲಿಗ್ರಾಮ, ಕೆ.ಪಿ. ಈಶ್ವರ್, ಶರಣ್ ಸಾಯಿಬ್ರಕಟ್ಟೆ, ಗಣೇಶ್ ಉಳ್ಳೂರು, ಶ್ರೀನಿವಾಸ್ ನಿಟ್ಟೆ, ನಾರಾಯಣ ಪರ್ಕಳ, ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂದರ್ಭ ರವಿಕುಮಾರ್ ಅವರನ್ನು ಭೋವಿ ಜನಾಂಗದ ಪರವಾಗಿ ಅಭಿನಂದಿಸಲಾಯಿತು. ಆನಂದ ಸಾಯಿಬ್ರಕಟ್ಟೆ ಸ್ವಾಗತಿಸಿದರು. ಜಗದೀಶ್ ಪರ್ಕಳ ವಂದಿಸಿದರು.