ಶ್ರೀ ಶಂಕರಾಚಾರ್ಯರ ಶ್ಲೋಕ ಹೇಳಿಕೊಳ್ಳುವುದು ಪವಿತ್ರ ಕಾರ್ಯ: ಆರ್.ಎನ್.ಶ್ರೀನಿವಾಸ್

| Published : May 14 2024, 01:11 AM IST

ಶ್ರೀ ಶಂಕರಾಚಾರ್ಯರ ಶ್ಲೋಕ ಹೇಳಿಕೊಳ್ಳುವುದು ಪವಿತ್ರ ಕಾರ್ಯ: ಆರ್.ಎನ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಶ್ರೀ ಶಂಕರಾಚಾರ್ಯರು ರಚಿಸಿರುವ ಶ್ಲೋಕಗಳನ್ನು ಹೇಳಿಕೊಳ್ಳುವುದು ಪವಿತ್ರವಾದ ಕಾರ್ಯವಾಗಿದೆ ಎಂದು ಬ್ರಾಹ್ಮಣ ಸೇವಾ ಸಮಿತಿ ಮಾಜಿ ಅಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಆರ್.ಎನ್.ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆಯಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ಶಂಕರಾಚಾರ್ಯರು ರಚಿಸಿರುವ ಶ್ಲೋಕಗಳನ್ನು ಹೇಳಿಕೊಳ್ಳುವುದು ಪವಿತ್ರವಾದ ಕಾರ್ಯವಾಗಿದೆ ಎಂದು ಬ್ರಾಹ್ಮಣ ಸೇವಾ ಸಮಿತಿ ಮಾಜಿ ಅಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಆರ್.ಎನ್.ಶ್ರೀನಿವಾಸ್ ಹೇಳಿದ್ದಾರೆ.ಭಾನುವಾರ ಬ್ರಾಹ್ಮಣ ಸೇವಾ ಸಮಿತಿಯಿಂದ ಪಟ್ಟಣದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಏರ್ಪಡಿಸಿದ್ದ ಶ್ರೀ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಶ್ರೀ ಶಂಕರರು ಸಾಕ್ಷಾತ್ ಈಶ್ವರನ ಅವತಾರವೇ ಆಗಿದ್ದಾರೆ. ಶ್ರೀ ಶಂಕರರು ತಾಯಿಯ ಸಮ್ಮತಿ ಪಡೆದು ಬಾಲ್ಯದಲ್ಲಿಯೇ ಸನ್ಯಾಸ ಸ್ವೀಕರಿಸಿದರು. ನಾಲ್ಕು ವೇದಗಳನ್ನು ಆಧ್ಯಯನ ಮಾಡಿದರು. ಸನಾತನ ಧರ್ಮ ಪುನರ್ ಸ್ಥಾಪನೆಗೆ ದೇಶಾದ್ಯಂತ ನಾಲ್ಕು ಬಾರಿ ಪರ್ಯಟನೆ ಮಾಡಿದರು, ಹಾವು, ಕಪ್ಪೆಗೆ ಆಶ್ರಯ ನೀಡಿದ ಅಪರೂಪದ ಪ್ರಸಂಗದ ಸ್ಥಳವನ್ನು ಪರಮ ಪವಿತ್ರವಾದ ಸ್ಥಳವೆಂದು ಶ್ರೀ ಶಂಕರಾಚಾರ್ಯರು ಶ್ರೀ ಶೃಂಗೇರಿಯಲ್ಲಿ ದಕ್ಷಿಣಾಮ್ನಾಯ ಶ್ರೀ ಶಾರದ ಪೀಠವನ್ನು ಸ್ಥಾಪಿಸಿದರು. ಶ್ರೀ ಶಂಕರಾ ಚಾರ್ಯರು ರಚಿಸಿದ ಶ್ರೀ ಸೌಂದರ್ಯ ಲಹರಿ ಮತ್ತು ಕನಕಧಾರಾ ಸ್ತೋತ್ರಗಳು ಮಹಾನ್ ಕೃತಿಗಳಾಗಿದ್ದು, ಅವರಿಗೆ ನಾವುಗಳು ಋಣಿಯಾಗಿರಬೇಕು ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಇಂದು ಶ್ರೀ ಶಂಕರಾಚಾರ್ಯ ಮತ್ತು ಶ್ರೀರಾಮಾನುಜಾಚಾರ್ಯರ ಜಯಂತ್ಯುತ್ಸವ. ಧರ್ಮದ ಪರಂಪರೆಯಲ್ಲಿರುವ ನಾವುಗಳು ಆಚಾರ ವಿಚಾರಗಳನ್ನು ಅನುಷ್ಠಾನ ಮಾಡಬೇಕು, ಗುರುವಾಕ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು.ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.ಬ್ರಾಹ್ಮಣ ಸೇವಾ ಸಮಿತಿ ಉಪಾಧ್ಯಕ್ಷ ಸಿ.ಎಸ್. ಅನಂತಪದ್ಮನಾಭ, ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸಮೂರ್ತಿ, ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದ ಅಧ್ಯಕ್ಷ ಭಾಮಾ ಸುಬ್ರಹ್ಣಣ್ಯ, ಬಾಲಶಂಕರ ವೇಷ ಧರಿಸಿದ ಎಂ.ಜಿ.ಎಸ್..ಪ್ರದ್ಯುಮ್ನ, ಸಮಿತಿ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸಮೂರ್ತಿ ಸ್ವಾಗತಿಸಿದರು. ಗುರು ಪ್ರಾರ್ಥನೆ ನಡೆಯಿತು. ಮಧುಸೂಧನ್ ರಾಯಸ ಅವರಿಂದ ವೇದಘೋಷ ಏರ್ಪಡಿಸಲಾಗಿತ್ತು. ಶ್ರೀ ಶಂಕರ ಜಯಂತಿ ಅಂಗವಾಗಿ ಪಟ್ಟಣದ ರಾಜಬೀದಿಗಳಲ್ಲಿ ಶ್ರೀ ಶಂಕರಾಚಾರ್ಯರ ಉತ್ಸವ ನೇರವೇರಿತು.

13ಕೆಟಿಆರ್.ಕೆ.3ಃ

ತರೀಕೆರೆಯಲ್ಲಿ ಬ್ರಾಹ್ಮಣ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಶ್ರೀ ಶಂಕರ ಜಯಂತಿಯಲ್ಲಿ ಹಿರಿಯ ಲೆಕ್ಕ ಪರಿಶೋಧಕ ಆರ್.ಎನ್.ಶ್ರೀನಿವಾಸ್ ಮಾತನಾಡಿದರು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್, ಉಪಾಧ್ಯಕ್ಷ ಸಿ.ಎಸ್.ಅನಂತಪದ್ಮನಾಭ, ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸಮೂುರ್ತಿ, ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದ ಅಧ್ಯಕ್ಷ ಭಾಮಾ ಸುಬ್ರಹ್ಣಣ್ಯ, ಬಾಲಶಂಕರ ವೇಷ ಧರಿಸಿದ ಎಸ್.ಪ್ರದ್ಯುಮ್ನ ಇದ್ದಾರೆ.