ಸಾರಾಂಶ
ಬೈರಶೆಟ್ಟಹಳ್ಳಿ ಕೆರೆ ಹಸ್ತಾಂತರ ಹಾಗೂ ವಿವಿಧ ಸವಲತ್ತು ವಿತರಣೆದಾಬಸ್‌ಪೇಟೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಚಿಂತನೆಗಳು ಗ್ರಾಮೀಣರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಹಕಾರಿಯಾಗಿವೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ಬೈರಶೆಟ್ಟಿಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನಿಂದ ಪುನಃಶ್ಚೇತನಗೊಳಿಸಿದ್ದ ಬೈರಶೆಟ್ಟಹಳ್ಳಿ ಕೆರೆ ಹಸ್ತಾಂತರ ಹಾಗೂ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಾಡು, ದೇಶ ಸನ್ಮಾರ್ಗದಲ್ಲಿ ನಡೆಯಲು ಸಮರ್ಥ ಗುರುವಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಗುರುವಿನ ಸ್ಥಾನದಲ್ಲಿರುವ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯದೆಲ್ಲೆಡೆ ಗ್ರಾಮೀಣ ಭಾಗದ ಕೆರೆಗಳ ಪುನಃಶ್ವೇತನಕ್ಕೆ ಮುಂದಾಗಿರುವುದು ಅಭಿನಂದನೀಯ ಎಂದರು.
ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ, ರಾಜ್ಯಾದ್ಯಂತ ೨.೫ ದಶಕಗಳಿಂದ ಸ್ತ್ರೀಶಕ್ತಿ, ಯುವಕ ಸಂಘ ಸೇರಿದಂತೆ ಸಮಾಜಮುಖಿ ಕೆಲಸಕ್ಕೆ ಟ್ರಸ್ಟ್ ಮೂಲಕ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಗ್ರಾಮೀಣರ ಅನುಕೂಲಕ್ಕಾಗಿ ಶುದ್ಧ ಕುಡಿವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಕೆರೆಗಳನ್ನು ದತ್ತು ಪಡೆದು ಪುನಃಶ್ವೇತನಗೊಳಿಸುತ್ತಿದ್ದು, ಬೈರಶೆಟ್ಟಿಹಳ್ಳಿ ಕೆರೆ 708ನೇ ಹಸ್ತಾಂತರ ಕೆರೆಯಾಗಿದೆ ಎಂದರು.ಇದೇ ವೇಳೆ ಕೆರೆಯ ನಾಮಫಲಕವನ್ನು ಶಾಸಕ ಎನ್.ಶ್ರೀನಿವಾಸ್ ಉದ್ಘಾಟಿಸಿ ಕೆರೆಗೆ ಬಾಗಿನ ಅರ್ಪಿಸಿದರು. ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ, ನಿರ್ಗತಿಕರ ಮಾಸಾಶನ, ವೀಲ್‌ಚೇರ್, ಬಾವಿಕೆರೆ ಹಾಗೂ ಗುಂಡೇನಹಳ್ಳಿ ಡೇರಿ ಕಟ್ಟಡ ನಿರ್ಮಾಣಕ್ಕೆ 2 ಲಕ್ಷ ಸಹಾಯಧನ ಸೇರಿದಂತೆ ವಿವಿಧ ಸವಲತ್ತು ವಿತರಿಸಲಾಯಿತು.ರಾಜ್ಯ ಜನಜಾಗೃತಿ ವೇದಿಕೆ ನಿಕಟಪೂರ್ವ ಟ್ರಸ್ಟಿ ವಿ.ರಾಮಸ್ವಾಮಿ, ಜಿಲ್ಲಾ ಉಪಾಧ್ಯಕ್ಷೆ ವೀಣಾ ರಮೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮರಬ್ಬ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಪಿಡಿಒ ಬಿ.ಪ್ರಶಾಂತ್, ಮುಖಂಡರಾದ ಕೆ.ಕೃಷ್ಣಪ್ಪ, ಮುನಿಯಪ್ಪ, ಹಡಲ್ ಕಿರಣ್, ಕೃಷ್ಣಮೂರ್ತಿ, ಅಂಜನಮೂರ್ತಿ, ನಾಗರಾಜು, ಪುರುಷೋತ್ತಮ್, ಮಂಜುನಾಥ್, ಸುರೇಶ್, ಸಿದ್ದಪ್ಪ ಇತರರಿದ್ದರು.