ಕರ್ನಾಟಕದಲ್ಲಿ ತುಳು ಭಾಷೆಗೆ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ನಾಪೋಕ್ಲು ಬಿಲ್ಲವ ಸಮಾಜ ವತಿಯಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರನ್ನು ಸಮಾಜದ ವತಿಯಿಂದ ಗೌರವಿಸಿ ಧನ್ಯವಾದ ಅರ್ಪಿಸಲಾಯಿತು. ನಾಪೋಕ್ಲು ಬಿಲ್ಲವ ಸಮಾಜ ಅಧ್ಯಕ್ಷರಾದ ಬಿ.ಎಂ. ಪ್ರತೀಪ್ ಅವರ ನೇತೃತ್ವದ ನಿಯೋಗವು ತೆರಳಿ ಅಭಿನಂದಿಸಿತು.

ನಾಪೋಕ್ಲು : ಕರ್ನಾಟಕದಲ್ಲಿ ತುಳು ಭಾಷೆಗೆ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ನಾಪೋಕ್ಲು ಬಿಲ್ಲವ ಸಮಾಜ ವತಿಯಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರನ್ನು ಸಮಾಜದ ವತಿಯಿಂದ ಗೌರವಿಸಿ ಧನ್ಯವಾದ ಅರ್ಪಿಸಲಾಯಿತು. ನಾಪೋಕ್ಲು ಬಿಲ್ಲವ ಸಮಾಜ ಅಧ್ಯಕ್ಷರಾದ ಬಿ.ಎಂ. ಪ್ರತೀಪ್ ಅವರ ನೇತೃತ್ವದ ನಿಯೋಗವು ತೆರಳಿ ಅಭಿನಂದಿಸಿತು. ನಾಪೋಕ್ಲುವಿನಲ್ಲಿ ಬಿಲ್ಲವ ಸಮಾಜದ ಸಮುದಾಯ ಭವನ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ಮತ್ತು ನೆರವು ನೀಡುವಂತೆ ಅಧ್ಯಕ್ಷರಾದ ಬಿ.ಎಂ. ಪ್ರತೀಪ್ ಅವರು ಶಾಸಕರಾದ ಎ.ಎಸ್.

ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ಪೊನ್ನಣ್ಣ ಅವರು, ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ರು ರವೀಂದ್ರ , ಬಾಚಮಾಡ ಲವ ಚಿನ್ನಪ್ಪ , ಬಿಲ್ಲವ ಸಮಾಜ ನಾಪೋಕ್ಲು ಅಧ್ಯಕ್ಷರಾದ ಉಪಾಧ್ಯಕ್ಷರಾದ ಬಿ.ಎಂ. ವಸಂತ , ಜಗನ್ನಾಥ, ಪ್ರಧಾನ ಕಾರ್ಯದರ್ಶಿ ಲೋಹಿತ್ ಕೆ.ಎಸ್., ಮಹಿಳಾ ಘಟಕದ ಅಧ್ಯಕ್ಷೆ ರಮ್ಯ ಬಿ.ಎಸ್ , ಹಾಗೂ ಪದಾಧಿಕಾರಿಗಳು-ಸದಸ್ಯರಾದ ಬಾಬು ಬಿ.ಎಸ್, ಪ್ರಕಾಶ ನಾಗರಾಜು , ವಿಠಲ ಬಿ.ಬಿ., ಧನಂಜಯ ಬಿ.ಜಿ., ಲವ ಬಿ.ಕೆ., ನಾರಾಯಣ ಬಿ.ಎಸ್., ಬಿ.ಬಿ. ನವೀನ್, ಕವಿತಾ ಬಿ.ಎ., ನಿರನ್ ಬಿ.ಡಿ., ಲಿಖಿತ್ ಕೆ.ಎಸ್. ಸೇರಿದಂತೆ ಪ್ರಮುಖರು ಇದ್ದರು.