ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಸಿಎಸ್‌ಇ-ಎಐಎಂಎಲ್ ವಿಭಾಗದಿಂದ ಶನಿವಾರ ಕೃತಕ ಬುದ್ದಿಮತ್ತೆ ವಲಯದ ಸಮಕಾಲೀನ ಬೆಳವಣಿಗೆಗಳ ಕುರಿತ ಒಂದು ದಿನದ ಪ್ರಾಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ ನಡೆಯಿತು.
ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಸಿಎಸ್‌ಇ-ಎಐಎಂಎಲ್ ವಿಭಾಗದಿಂದ ಶನಿವಾರ ಕೃತಕ ಬುದ್ದಿಮತ್ತೆ ವಲಯದ ಸಮಕಾಲೀನ ಬೆಳವಣಿಗೆಗಳ ಕುರಿತ ಒಂದು ದಿನದ ಪ್ರಾಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಅಮೆಜಾನ್ ಇಂಡಿಯಾ ಅಭಿವೃದ್ದಿ ಕೇಮದ್ರದ ಹಿರಿಯ ವ್ಯವಸ್ಥಾಪಕ ಡಾ.ಕಪಿಲ್ ತಿವಾರಿ ಮಾತನಾಡಿ, ಕೃತಕ ಬುದ್ದಿಮತ್ತೆ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಅವಿಭಾಜ್ಯ ಪ್ರಕ್ರಿಯೆಯಾಗಿ ಅಭಿವೃದ್ದಿ ಹೊಂದಲಿದೆ. ಎಲ್ಲ ವಲಯಗಳಲ್ಲಿ ವ್ಯಾಪಕಗೊಳ್ಳುತ್ತಿರುವ ಎಐ ಬಳಕೆ ಜಗತ್ತನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವ ಸಾಮರ್ಥ್ಯ ಪಡೆದಿದೆ. ಹೆಚ್ಚುತ್ತಿರುವ ಎಐ ಬಳಕೆ ಸಾಮಾಜಿಕ ವಲಯದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳೆರಡನ್ನೂ ಹೊಂದಿದ್ದು, ಧನಾತ್ಮಕ ಆಲೋಚನೆಯಿಂದ ಮಾತ್ರ ಅಭಿವೃದ್ದಿಯ ಹೊಸ ಮಾದರಿಗಳನ್ನು ಸ್ವೀಕರಿಸುವ ಮನೋಧರ್ಮ ಬೆಳೆಯಬೇಕು ಎಂದರು.ಶೈಕ್ಷಣಿಕ ವಲಯದಲ್ಲಿ ಕೃತಕ ಬುದ್ದಿಮತ್ತೆ ಹಲವು ಬದಲಾವಣೆಗಳಿಗೆ ದಿಕ್ಸೂಚಿಯಾಗಲಿದ್ದು, ಸಾಂಪ್ರದಾಯಿಕ ಮಾದರಿಗಳ ಮುಂದುವರಿಕೆಗೆ ದೊಡ್ಡ ಸವಾಲು ಎದುರಾಗಲಿದೆ. ಈ ಹಂತದಲ್ಲಿ ಗುಣಾತ್ಮಕ ಕೌಶಲ್ಯದಿಂದ ಮಾತ್ರ ಪರಿಣಾಮಕಾರಿ ಅಸ್ತಿತ್ವವನ್ನು ಪ್ರತಿಪಾದಿಸುವುದು ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಕಾರ್ತಿಕ್ ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ.ಶ್ರೀನಿವಾಸರೆಡ್ಡಿ, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಎಐಎಂಎಲ್ ವಿಭಾಗ ಮುಖ್ಯಸ್ಥ ಡಾ.ಬಿ.ಎನ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.ಫೋಟೋ-
13ಕೆಡಿಬಿಪಿ4- ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಎಐಎಂಎಲ್ ವಿಭಾಗದಿಂದ ನಡೆದ ಪ್ರಾಧ್ಯಾಪಕರ ಅಭಿವೃದ್ದಿ ಕಾರ್ಯಾಗಾರಕ್ಕೆ ಡಾ.ಕಪಿಲ್ ತಿವಾರಿ ಚಾಲನೆ ನೀಡಿದರು.