ಹೆಚ್ಚುವರಿ ನ್ಯಾಯಬೆಲೆ ಅಂಗಡಿ ತೆರೆಯಲು ಶಿಫಾರಸು

| Published : Aug 30 2025, 01:00 AM IST

ಹೆಚ್ಚುವರಿ ನ್ಯಾಯಬೆಲೆ ಅಂಗಡಿ ತೆರೆಯಲು ಶಿಫಾರಸು
Share this Article
  • FB
  • TW
  • Linkdin
  • Email

ಸಾರಾಂಶ

ಪದವಿ ಮುಗಿಸಿರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವರೆಗೂ ಸರ್ಕಾರ ಯುವನಿಧಿ ಯೋಜನೆಯಲ್ಲಿ ಪ್ರತಿ ತಿಂಗಳು ಮೂರು ಸಾವಿರ ಗೌರವ ದನ ನೀಡುತ್ತಿದೆ, ಆದರೆ ತಾಲೂಕಿನಲ್ಲಿ ಪದವಿಧರ ನಿರುದ್ಯೋಗಿಗಳು ಯಾರೂ ಅಷ್ಟಾಗಿ ಹೆಸರುಗಳನ್ನು ನೋಂದಣಿ ಮಾಡಿಸಿಕೊಂಡಿಲ್ಲ,ಇದರಿಂದ ಸರ್ಕಾರದ ಯೋಜನೆ ತಾಲೂಕಿನಲ್ಲಿ ವ್ಯರ್ಥವಾಗುತ್ತಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನಲ್ಲಿ ಒಂದು ಸಾವಿರ ಪಡಿತರ ಚೀಟಿ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಒತ್ತಡ ನಿವಾರಿಸಲು ಮತ್ತೊಂದು ಅಂಗಡಿ ತೆರೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ 5 ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ಎಲ್ಲೆಲ್ಲಿ ಒಂದು ನ್ಯಾಯಬೆಲೆ ಅಂಗಡಿಯಲ್ಲಿ ಸಾವಿರಕ್ಕಿಂತಲೂ ಹೆಚ್ಚಿನ ಪಡಿತರ ಚೀಟಿಗಳಿವೆಯೋ ಅಲ್ಲಿ ಅಕ್ಕಿ ವಿತರಣೆಗೆ ಒತ್ತಡ ಹೆಚ್ಚಿರುತ್ತದೆ, ಆದ್ದರಿಂದ ಅಂತಹ ಸ್ಥಳದಲ್ಲಿ ಮತ್ತೊಂದು ಅಂಗಡಿ ತೆರೆಯುವಂತೆ ಸಮಿತಿ ಇಲಾಖೆಗೆ ಹಾಗೂ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಯುವನಿಧಿಗೆ ನಿರಾಸಕ್ತಿ

ಪದವಿ ಮುಗಿಸಿರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವರೆಗೂ ಸರ್ಕಾರ ಯುವನಿಧಿ ಯೋಜನೆಯಲ್ಲಿ ಪ್ರತಿ ತಿಂಗಳು ಮೂರು ಸಾವಿರ ಗೌರವ ದನ ನೀಡುತ್ತಿದೆ, ಆದರೆ ತಾಲೂಕಿನಲ್ಲಿ ಪದವಿಧರ ನಿರುದ್ಯೋಗಿಗಳು ಯಾರೂ ಅಷ್ಟಾಗಿ ಹೆಸರುಗಳನ್ನು ನೋಂದಣಿ ಮಾಡಿಸಿಕೊಂಡಿಲ್ಲ,ಇದರಿಂದ ಸರ್ಕಾರದ ಯೋಜನೆ ತಾಲೂಕಿನಲ್ಲಿ ವ್ಯರ್ಥವಾಗುತ್ತಿದೆ, ಕೇವಲ ೬೪೦ ವಿದ್ಯಾರ್ಥಿಗಳು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ, ಇನ್ನು ಡಿಪ್ಲೋಮಾ ವಿದ್ಯಾರ್ಥಿಗಳೂ ಸಹ ಯುವ ನಿಧಿ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಕೇವಲ ೬ ವಿದ್ಯಾರ್ಥಿಗಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆಂದು ಅಸಮಧಾನವ್ಯಕ್ತಪಡಿಸಿದರು.ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳೂ ೨ಸಾವಿರ ರುಗಳು ಅವರ ಖಾತೆಗೆ ಜಮಾ ಆಗುತ್ತಿದೆ, ಜೂನ್ ತಿಂಗಳಿನವರೆಗೂ ಹಣ ಸಂದಾಯವಾಗಿದೆ, ಆದರೆ ಶೇ.೧೦೦ರಷ್ಟು ಇದರಲ್ಲಿ ಪ್ರಗತಿ ಸಾಧಿಸಲು ಸಾದ್ಯವಾಗಿಲ್ಲ ೬೮ ಫಲಾನುಭವಿಗಳಿಗೆ ಇನ್ನೂ ಹಣ ಜಮಾವಾಗುತ್ತಿಲ್ಲ ಅವರ ಆಧಾರ್ ಕಾರ್ಡ್ ಸಿಡಿಂಗ್ ಆಗದ ಕಾರಣ ವಿಫಲವಾಗಿದೆ, ಶಕ್ತಿ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ಜೂನ್ ಅಂತ್ಯದವರೆಗೂ ೨೨೪೮೬೯೯೪ ಮಹಿಳೆಯರೂ ಉಚಿತ ಬಸ್ ಪ್ರಯಾಣವನ್ನು ಬಳಸಿಕೊಂಡಿದ್ದಾರೆಂದು ಪಾರ್ಥಸಾರಥಿ ತಿಳಿಸಿದರು.ಬಸ್‌ಡಿಪೊ ಸ್ಥಾಪಿಸುವ ಭರವಸೆ

ತಾಲೂಕಿನಲ್ಲಿ ಎಲ್ಲಾ ೫ ಗ್ಯಾರಂಟಿ ಯೋಜನೆಗಳು ಯಾವುದೇ ಲೋಪವಿಲ್ಲದಂತೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅಲ್ಲದೆ ತಾಲೂಕಿನಲ್ಲೆ ಬಸ್ ಡಿಪೋ ಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದು ಅದೂ ಸಹ ಬಗೆಹರಿಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆಂದು ತಿಳಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ರಫೀಕ್,ತಾಪಂ ಇಒ ರವಿಕುಮಾರ್,ಸದಸ್ಯರಾದ ಹರೀಶ್ ಕುಮಾರ್, ವಿವೇಕಾನಂದ, ಬೀರಪ್ಪ, ನಾರಾಯಣಸ್ವಾಮಿ, ಸುಜಾತಮ್ಮ, ಲಕ್ಷ್ಮಮ್ಮ, ಸಿಡಿಪಿಒ ಮುನಿರಾಜು, ಆಹಾರ ನಿರೀಕ್ಷಕರಾದ ಬಲರಾಂಸಿಂಗ್, ಬೆಸ್ಕಾಂ ಎಇಇ ಸುಕುಮಾರರಾಜು ಇತರರು ಇದ್ದರು.