ಸಾರಾಂಶ
ನಗರದ 11ನೇ ವಾರ್ಡಿನ ವ್ಯಾಪ್ತಿಯ ಸಣ್ಣ ಮಾರುಕಟ್ಟೆಯ ಮರು ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು.
ಸಲಾಂ ಬಳ್ಳಾರಿ ಅಭಿಯಾನ । ಸ್ಥಳೀಯರ ಸಮಸ್ಯೆ ಆಲಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಬಳ್ಳಾರಿನಗರದ 11ನೇ ವಾರ್ಡಿನ ವ್ಯಾಪ್ತಿಯ ಸಣ್ಣ ಮಾರುಕಟ್ಟೆಯ ಮರು ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದೆಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಗುರುವಾರ ಮಧ್ಯಾಹ್ನ ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಅವರು ಮಾತನಾಡಿದರು.ಅಂದಾಜು ₹2 ಕೋಟಿ ವೆಚ್ಚದಲ್ಲಿ ಸಣ್ಣ ಮಾರುಕಟ್ಟೆಯ ಕಟ್ಟಡದ ಮರು ನಿರ್ಮಾಣವನ್ನು ಅತ್ಯಾಧುನಿಕ ಮಾದರಿಯಲ್ಲಿ ಮಾಡಲಾಗುವುದು. ಇದರಿಂದ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
11ನೇ ವಾರ್ಡಿನ ವಿವಿಧ ಪ್ರದೇಶಗಳಿಗೆ ಸಂಚರಿಸಿದ ಅವರು ಸ್ಥಳೀಯರಿಂದ ಸಮಸ್ಯೆ ಆಲಿಸಿದರು. ಮುಖ್ಯವಾಗಿ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ಮಾಡಿದರು. ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಳ್ಳಾರಿಯ ಸಮಗ್ರ ಪ್ರಗತಿಗೆ ಕಾರ್ಯಯೋಜನೆ ರೂಪಿಸಿಕೊಳ್ಳಲಾಗಿದೆ. ಜನರ ನಿರೀಕ್ಷೆಯಂತೆಯೇ ಕೆಲಸ ಮಾಡಿ, ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಭರತ್ ರೆಡ್ಡಿ ಹೇಳಿದರು.ಪಾಲಿಕೆ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಶ್ರೀನಿವಾಸ್, ಎಂ.ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಬಿಆರ್‌ಎಲ್ ಸೀನಾ, ಹಗರಿ ಗೋವಿಂದಪ್ಪ, ಹೊನ್ನಪ್ಪ, ಎಸ್.ವಾಸುದೇವ ರೆಡ್ಡಿ, ಚಂಪಾ ಚವ್ಹಾಣ್, ಕವಿತಾ, ಥಿಯೇಟರ್ ಶಿವು, ಸ್ಥಳೀಯ ಮುಖಂಡರಾದ ರಾಜ, ಪೆಟ್ರೋಲ್ ವಲಿ, ಶಿವಸ್ವಾಮಿ, ಗೋಪಿ, ಮಾಸ್ ಬಸವ, ಸುಧೀರ್, ಲೋಕೇಶ್, ಕೆ.ಎಂ. ಗುರು ಸಿದ್ಧೇಶ್, ಇಸ್ಮಾಯಿಲ್, ನೂರ್ ಮತ್ತಿತರರಿದ್ದರು.