ಏಪ್ರಿಲ್‌ನ ದಾಖಲೆ ಮುರಿದ ಮೇ ಬಿಯರ್‌ ಮಾರಾಟ

| Published : Jun 18 2024, 12:51 AM IST

ಸಾರಾಂಶ

ಏಪ್ರಿಲ್‌ ತಿಂಗಳಿನಲ್ಲಿ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಬಿಯರ್‌ ಮಾರಾಟವಾಗಿ ದಾಖಲೆಯಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಈ ಸಾರ್ವಕಾಲಿಕ ದಾಖಲೆಯೂ ‘ಬ್ರೇಕ್‌’ ಆಗಿದ್ದು ಭಾರೀ ಪ್ರಮಾಣದಲ್ಲಿ ಮದ್ಯ ಬಿಕರಿಯಾಗಿದೆ.

ಮೇ ತಿಂಗಳಿನಲ್ಲಿ 3185 ಕೋಟಿ ಮೌಲ್ಯದ 50.71 ಲಕ್ಷ ಬಾಕ್ಸ್‌ ಬಿಯರ್‌ ಬಿಕರಿ

ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಹೊಸ ಮೈಲುಗಲ್ಲು

ಕಳೆದ ಏಪ್ರಿಲ್‌-ಮೇ ಮಾಹೆಗೆ ಹೋಲಿಸಿದರೆ ಮದ್ಯ ಮಾರಾಟ ಶೇ.30.63 ಹೆಚ್ಚಳ

ಎರಡು ತಿಂಗಳಲ್ಲೇ 5450 ಕೋಟಿ ರು. ರಾಜಸ್ವ ಸಂಗ್ರಹಿಸಿದ ಇಲಾಖೆ

ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರುಏಪ್ರಿಲ್‌ ತಿಂಗಳಿನಲ್ಲಿ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಬಿಯರ್‌ ಮಾರಾಟವಾಗಿ ದಾಖಲೆಯಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಈ ಸಾರ್ವಕಾಲಿಕ ದಾಖಲೆಯೂ ‘ಬ್ರೇಕ್‌’ ಆಗಿದ್ದು ಭಾರೀ ಪ್ರಮಾಣದಲ್ಲಿ ಮದ್ಯ ಬಿಕರಿಯಾಗಿದೆ.ಪ್ರಸಕ್ತ 2024ರ ಏಪ್ರಿಲ್‌ ತಿಂಗಳಿನಲ್ಲಿ 48.72 ಲಕ್ಷ ಬಾಕ್ಸ್‌ ಬಿಯರ್‌ (ಒಂದು ಬಾಕ್ಸ್‌ನಲ್ಲಿ 7.8 ಲೀ.) ಅಂದರೆ, 3.80 ಕೋಟಿ ಲೀ. ಬಿಯರ್‌ ಮಾರಾಟವಾಗಿತ್ತು. ಅಬಕಾರಿ ಇಲಾಖೆಯ ‘ಇತಿಹಾಸ’ದಲ್ಲೇ ಒಂದು ತಿಂಗಳಿನಲ್ಲಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಬಿಯರ್‌ ಮಾರಾಟವಾಗಿರಲಿಲ್ಲ. ಆದ್ದರಿಂದ ಇದು ಸಾರ್ವತ್ರಿಕ ದಾಖಲೆಯಾಗಿತ್ತು. ಆದರೆ ಮೇ ಮಾಹೆಯಲ್ಲಿ ಬರೋಬ್ಬರಿ 50.71 ಲಕ್ಷ ಬಾಕ್ಸ್‌ ಬಿಯರ್‌, ಅಂದರೆ 3.95 ಕೋಟಿ ಲೀ. ಬಿಯರ್‌ ಮಾರಾಟವಾಗಿ ಏಪ್ರಿಲ್‌ ದಾಖಲೆ ಮುರಿದು ಬಿದ್ದಿದೆ.ಶೇ.30.63 ಬೆಳವಣಿಗೆ:2023 ರ ಏಪ್ರಿಲ್‌-ಮೇ ತಿಂಗಳಿನಲ್ಲಿ ಒಟ್ಟಾರೆ 115.25 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ(ಒಂದು ಬಾಕ್ಸ್‌ನಲ್ಲಿ 8.64 ಲೀ.), 76.88 ಲಕ್ಷ ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿದ್ದು ಅಬಕಾರಿ ಇಲಾಖೆಯು 4915.59 ಕೋಟಿ ರು. ರಾಜಸ್ವ ಸಂಗ್ರಹಿಸಿತ್ತು. 2024 ರ ಏಪ್ರಿಲ್‌-ಮೇ ನಲ್ಲಿ 118.27 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ, 100.43 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿ 5449.80 ಕೋಟಿ ರು. ರಾಜಸ್ವ ಸಂಗ್ರಹಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 534.21 ಕೋಟಿ ರುಪಾಯಿ ಅಧಿಕ ರಾಜಸ್ವ ಸಂಗ್ರಹವಾಗಿದ್ದು ಬಿಯರ್‌ ಮಾರಾಟದಲ್ಲಿ ಶೇ.30.63 ಬೆಳವಣಿಗೆಯಾಗಿದೆ.ಬಿಯರ್‌ ಮಾತ್ರವಲ್ಲ ಐಎಂಎಲ್‌ ಮದ್ಯ ಮಾರಾಟವೂ ಕಳೆದ ಏಪ್ರಿಲ್‌-ಮೇ ತಿಂಗಳಿಗೆ ಹೋಲಿಸಿದರೆ ಪ್ರಸ್ತಕ ಸಾಲಿನಲ್ಲಿ ಹೆಚ್ಚಳವಾಗಿದೆ. 2023 ಏಪ್ರಿಲ್‌ನಲ್ಲಿ 52.90 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದರೆ, 2024 ಏಪ್ರಿಲ್‌ನಲ್ಲಿ 54.46 ಲಕ್ಷ ಬಾಕ್ಸ್‌ ಬಿಕರಿಯಾಗಿ ಮಾರಾಟ ಶೇ.2.95 ರಷ್ಟು ಅಧಿಕವಾಗಿತ್ತು. 2023 ಮೇ ತಿಂಗಳಿನಲ್ಲಿ 62.35 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದರೆ, 2024 ಮೇ ಮಾಹೆಯಲ್ಲಿ 63.81 ಲಕ್ಷ ಬಾಕ್ಸ್‌ ಮಾರಾಟವಾಗಿದೆ.ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದುದು ಮೇ ತಿಂಗಳಿನಲ್ಲಿ ಬಿಯರ್‌ ಮಾರಾಟ ಅಧಿಕವಾಗಲು ಕಾರಣವಾದರೆ, ಮತ್ತೊಂದೆಡೆ, ಲೋಕಸಭೆಗೆ ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ನಡೆದಿದ್ದು, ಚುನಾವಣೆಯ ಹಿನ್ನೆಲೆಯೂ ಬಿಯರ್‌ ಮಾರಾಟ ಅಧಿಕವಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

==ವರ್ಷ ಮೇ ತಿಂಗಳುರಾಜಸ್ವ ಸಂಗ್ರಹ(ಕೋಟಿ ರು.)

2012951.23

20131039.97

20141381.83

20151469.18

20151404.05

20171470.53

20181703.46

20192052.54

20201403.02

20211474

20222339.09

20232607.41

20243185.57