ತೇರದಾಳ(ರ-ಬ): ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಪಟ್ಟಣದ ಎಸ್‌ಡಿಎಂ ಟ್ರಸ್ಟ್ ನ ದಾನಿಗೊಂಡ ನರ್ಸಿಂಗ್ ಕಾಲೇಜಿನ ೪ನೇ ವರ್ಷದ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ಪಡೆದಿದ್ದಾರೆ.ಒಟ್ಟು ೩೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೩೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ಇಬ್ಬರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರೇಮಾ ಕುಮಟಳ್ಳಿ ಪ್ರಥಮ ರ‍್ಯಾಂಕ್, ಚೇತನ ಕಾಲತಿಪ್ಪಿ ಎರಡನೇ ರ‍್ಯಾಂಕ್, ಹಣಮಂತ ಅಹಿರಸಂಗ ಹಾಗೂ ಸೀಮಾ ಶಿರಹಟ್ಟಿ ತೃತೀಯ ರ‍್ಯಾಂಕ್ ಗಳಿಸಿದ್ದಾರೆ. ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷ ಡಾ.ಮಹಾವೀರ ದಾನಿಗೊಂಡ, ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ದಾನಿಗೊಂಡ, ಕಾಲೇಜು ಪ್ರಾಚಾರ್ಯೆ ಡಾ.ಎಸ್. ಅನ್ನಪೂರ್ಣ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.
.ದಾನಿಗೊಂಡ ನರ್ಸಿಂಗ್ ಕಾಲೇಜು ದಾಖಲೆಯ ಫಲಿತಾಂಶ!
ತೇರದಾಳ(ರ-ಬ): ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಪಟ್ಟಣದ ಎಸ್‌ಡಿಎಂ ಟ್ರಸ್ಟ್ ನ ದಾನಿಗೊಂಡ ನರ್ಸಿಂಗ್ ಕಾಲೇಜಿನ ೪ನೇ ವರ್ಷದ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ಪಡೆದಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.