ರಾಜ್ಯ ದಸರಾ ಕ್ರೀಡಾಕೂಟ ಸಿಎಂ ಕಪ್‌ನಲ್ಲಿ ಮೊದಲ ದಿನ ದಾಖಲೆಗಳ ಸುರಿಮಳೆ

| Published : Sep 24 2025, 01:00 AM IST

ರಾಜ್ಯ ದಸರಾ ಕ್ರೀಡಾಕೂಟ ಸಿಎಂ ಕಪ್‌ನಲ್ಲಿ ಮೊದಲ ದಿನ ದಾಖಲೆಗಳ ಸುರಿಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷರ ಇಂಡಿವಿಷ್ಯುಯಲ್‌ಮಿಡ್ಲೆಯಲ್ಲಿ ಬೆಂಗಳೂರಿನ ಸೂರ್ಯ ಜೊಯಪ್ಪ ಒಡಿಯಾಂದ ರಾಜೇಶ್‌ಚಿನ್ನ, ಬೆಳಗಾವಿಯ ತನುಜ್‌ರಮೇಸ್‌ಸಿಂಗ್‌ಬೆಳ್ಳಿ ಮತ್ತು ಬೆಂಗಳೂರಿನ ಜಿ. ಉಜ್ವಲ್‌ರೆಡ್ಡಿ ತೃತೀಯ. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ವಿ. ಹಿತೈಷಿ ಚಿನ್ನ, ಲಕ್ಷ್ಯಾ ಶಿವಾನಂದ ಬೆಳ್ಳಿ ಮತ್ತು ಬೆಂಗಳೂರು ಗ್ರಾಮಾಂತರದ ಜಿ.ಜೆ. ಲಿಪಿಕಾ ದೇವ್‌ಕಂಚು ಪಡೆದರು.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯ ದಸರಾ ಕ್ರೀಡಾಕೂಟ ಸಿಎಂ ಕಪ್‌ನಲ್ಲಿ ಮೊದಲ ದಿನ ದಾಖಲೆಗಳ ಸುರಿಮಳೆಗರೆಯಿತು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದ ಪುರುಷರ 100 ಮೀ ಓಟದಲ್ಲಿ ಬೆಂಗಳೂರು ಗ್ರಾಮಾಂತರ ಎಂ. ಗೌತಮ್‌ಕೇವಲ 10.74 ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಈ ಹಿಂದಿನ ದಾಖಲೆಯು 10.85 ಸೆ. ಆಗಿತ್ತು. ಉಡುಪಿಯ ಡಿ.ಕೆ. ಧನುಷ್‌ದ್ವಿತೀಯ ಸ್ಥಾನ ಪಡೆದರು.

400 ಮೀ. ಓಟದಲ್ಲಿ ಬೆಂಗಳೂರು ನಗರದ ದಳವಿ ಅವರು 47.78 ಸೆಕೆಂಡುಗಳಲ್ಲಿ ನಿಗದಿತ ಗುರಿ ಮುಟ್ಟಿ ದಾಖಲೆ ನಿರ್ಮಿಸಿದರು. ಈ ಹಿಂದೆ 48.73 ಸೆ.ಗಳಲ್ಲಿತ್ತು. 1500 ಮೀ. ಓಟದಲ್ಲಿ ಬೆಂಗಳೂರು ಗ್ರಾಮಾಂತರ ಎಂ.ಎಸ್‌. ಅಶ್ರಿತ್‌3:57.93 ನಿಮಿಷದಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಈ ಹಿಂದೆ 4:02.28 ನಿಮಿಷದಲ್ಲಿ ಕ್ರಮಿಸಿದ್ದರು. ಬಂಗಳೂರು ಗ್ರಾಮಾಂತರದ ಎಂ. ನಿತಿನ್‌ಗೌಡ ದ್ವಿತೀಯ ಶಿವಮೊಗ್ಗದ ಎಂ.ಡಿ. ದರ್ಶನ್‌ತೃತೀಯ ಸ್ಥಾನ ಪಡೆದರು.

ಎತ್ತರ ಜಿಗಿತದಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ ಸುದೀಪ್‌2. ಮೀಟರ್‌ಜಿಗಿದು ದಾಖಲೆ ಬರೆದರು. ಈ ಹಿಂದೆ 1.95 ಮೀ. ಇತ್ತು. ಮೈಸೂರಿನ ಅಭಿಜ್ಞಾನ್‌ಅನಿಲ್‌ಗೌಡ ದ್ವಿತೀಯ ಮತ್ತು ದಕ್ಷಿಣ ಕನ್ನಡದ ಭವಿತ್‌ಕುಮಾರ್‌ತೃತೀಯ ಸ್ಥಾನ ಪಡೆದರು.

ತಟ್ಟೆ ಎಸೆತದಲ್ಲಿ ದಕ್ಷಿಣ ಕನ್ನಡದ ನಾಗೇಂದ್ರ ಅಣ್ಣಪ್ಪ ನಾಯಕ್‌52.78 ಮೀ. ದೂರ ಎಸೆದರು. ಈ ಹಿಂದಿ ದಾಖಲೆ 50.52 ಮೀ.ಗೆ ಇತ್ತು. ಬೆಂಗಳೂರಿನ ಹೇಮಂತ್‌ದ್ವಿತೀಯ, ಮೋಹಿತನ್‌ರಾಜ್‌ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ನಗರ ವಿಭಾಗದ ನಿಯೋಲ್‌ಅನ್ನ ಕಾರ್ನಾಲಿಯೋ 12 ಸೆಂಕೆಡ್‌ಗಳಲ್ಲಿ 100 ಮೀಟರ್‌ಕ್ರಮಿಸಿ ನೂತನ ಕೂಟ ದಾಖಲೆ ಬರೆದರು. ಈ ಹಿಂದೆ ಅದು 12.24 ಸೆ. ಇತ್ತು. ಮೈಸೂರಿನ ಮಮತಾ ದ್ವಿ,ಈಯ ಬೆಳಗಾವಿಯ ವೈಭವಿ ಬುದ್ರುಕ್‌ತೃತೀಯ ಸ್ಥಾನ ಪಡೆದರು.

ಎತ್ತರ ಜಿಗಿತದಲ್ಲಿ ಮೈಸೂರು ವಿಭಾಗದ ಉಡುಪಿ ಜಿಲ್ಲೆಯ ಎಸ್‌.ಬಿ. ಸುಪ್ರಿಯಾ 1.71 ಮೀ. ನೆಗೆದು ದಾಖಲೆ ನಿರ್ಮಿಸಿದರು. ಉಡುಪಿಯ ಪಲ್ಲವಿ ಪಾಟೀಲ್‌ದ್ವಿತೀಯ, ಬೀದರ್‌ನ ಅಕ್ಷತಾ ಬಿ. ದೊಡ್ಡಮನಿ ತೃತೀಯ ಸ್ಥನ ಪಡೆದರು.

ಭರ್ಜಿ ಎಸೆತದಲ್ಲಿ ಉಡುಪಿಯ ಶ್ರಾವ್ಯಾ 45.53 ಮೀ. ಎಸೆದರು. ಈ ಹಿಂದೆ 40.40 ಮೀ. ಇತ್ತು. ಮೈಸೂರಿನ ಶಹೆಜಹಾನಿ ದ್ವಿತೀಯ ಮತ್ತು ಶಿವಮೊಗ್ಗದ ಪದ್ಮಾವತಿ ತೃತೀಯ ಸ್ಥಾನ ಪಡೆದರು.

ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಕಲಬುರ್ಗಿ ತಂಡದ ವಿರುದ್ಧ ಮೈಸೂರು ತಂಡವು 6 - 1 ಗೋಲ್‌ಗಳ ಅಂತರದಲ್ಲಿ ಜಯಗಳಿಸಿತು. ಮತ್ತೊಂದು ಪಂದ್ಯದಲ್ಲಿ ಬೆಳಗಾವಿ ತಂಡವು ಬೆಂಗಳೂರು ನಗರ ತಂಡವನ್ನು 1-2 ಅಂತರದಲ್ಲಿ ಮಣಿಸಿದರೆ, ಕಲಬುರ್ಗಿ ತಂಡವು ಬೆಂಗಳೂರು ಗ್ರಾಮಾಂತರದ ವಿರುದ್ಧ 1 -6 ಅಂತರದಲ್ಲಿ ಜಯಗಳಿಸಿದೆ.

ಮಹಿಳೆಯರ ವಿಭಾಗದಲ್ಲಿ ಮೈಸೂರು ತಂಡದ ವಿರುದ್ಧ ಬೆಳಗಾವಿ ತಂಡ 0-1 ಅಂತರದಲ್ಲಿ ಜಯಗಳಿಸಿದರೆ, ಮೈಸೂರು ತಂಡವು ಕಲಬುರ್ಗಿ ವಿರುದ್ಧ 12- 0 ಅಂತರದಲ್ಲಿ, ಬೆಂಗಳೂರು ನಗರ ವಿರುದ್ಧ 0 -8 ವಿರುದ್ಧ ಜಯಗಳಿಸಿತು.

ಈಜು ಸ್ಪರ್ಧೆಗಳು:

400 ಮೀ. ಫ್ರೀಸ್ಟೈಲ್‌ಪುರುಷರ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಧೋನೇಶ್‌ಚಿನ್ನ, ಬೆಳಗಾವಿಯ ದರ್ಶನ್‌ವರೂರ್‌ಬೆಳ್ಳಿ ಮತ್ತು ಬೆಂಗಳೂರಿನ ಧ್ರುವ ಕಂಚು, ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರದ ಜಿ.ಜೆ. ಲಿಪಿಕಾ ದೇವ್‌ಚಿನ್ನ, ದಕ್ಷಿಣ ಕನ್ನಡದ ಎಂ. ದೇವಿಕಾ ಬೆಳ್ಳಿ ಮತ್ತು ಬೆಳಗಾವಿಯ ನಿಧಿ ಎಸ್‌. ಮುಚಂದಿ ಕಂಚು.

ಬ್ರೆಸ್ಟ್‌ಸ್ಟ್ರೋಕ್‌400 ಮೀ. ಓಟದ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಸೂರ್ಯ ಜೊಯಪ್ಪ ಒಡಿಯಂಡ ರಾಜೇಶ್‌, ಸಾಯ್ಸ್‌ಕಿನಿ ಬೆಳ್ಳಿ, ಬೆಳಗಾವಿಯ ತನುಜ್‌ರಾಕೇಶ್‌ಸಿಂಗ್‌ಕಂಚು, ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಲಕ್ಷ್ಯಾ ಶಿವಾನಂದ ಚಿನ್ನ, ವಿ. ಹಿತೈಷಿ ಬೆಳ್ಳಿ, ಬೆಂಗಳೂರು ಗ್ರಾಮಾಂತರದ ಜಿ.ಜೆ. ಲಿಪಿಕಾ ದೇವ್‌ಕಂಚು.

ಬ್ಯಾಕ್‌ಸ್ಟ್ರೋಕ್‌200 ಮೀ. ಪುರುಷರ ವಿಭಾಗದಲ್ಲಿ ಬೆಂಗಳೂರಿನ ಜಿ. ಉಜ್ವಲ್‌ರೆಡ್ಡಿ ಚಿನ್ನ, ರಾಘವ್‌ಸ್ವಚ್ಛಂದಮ್‌ಬೆಳ್ಳಿ ಮತ್ತು ದಕ್ಷಿಣ ಕನ್ನಡದ ವಿ.ಎಸ್‌. ದಿಗಂತ್‌ಕಂಚು. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಕೆ.ಆರ್‌. ಶ್ರುತಿ ಚಿನ್ನ, ತನ್ಮಯ್‌ಧರ್ಮೇಶ್‌ಬೆಳ್ಳಿ ಮತ್ತು ವೇದಾ ವೈಭವ್‌ಖಾನೋಲ್ಕರ್‌ಕಂಚು, ಪುರುಷರ 100 ಮೀ. ಬಟರ್‌ಪ್ಲೈ ನಲ್ಲಿ ಬೆಂಗಳೂರಿನ ಅನೀಶ್‌ಅನಿರುದ್ಧ ಖೋರೆ ಚಿನ್ನ, ಬೆಳಗಾವಿಯ ತನುಜ್‌ರಮೇಶ್‌ಸಿಂಗ್‌ಬೆಳ್ಳಿ, ಬೆಂಗಳೂರಿನ ಸೂರ್ಯ ಜೊಯಪ್ಪ ಒಡಿಯಂಡ ರಾಜೇಶ್‌ಕಂಚಿನ ಪದಕಪಡೆದರು. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ವಿ. ಹಿತೈಷಿ ಚಿನ್ನ, ಲಕ್ಷ್ಯಾ ಶಿವಾನಂದ ಬೆಳ್ಳಿ ಮತ್ತು ಬೆಳಗಾವಿಯ ವೇದಾ ವೈಭವ್‌ಖಾನೋಲ್ಕರ್‌ಕಂಚು ಪಡೆದರು.

ಪುರುಷರ ಇಂಡಿವಿಷ್ಯುಯಲ್‌ಮಿಡ್ಲೆಯಲ್ಲಿ ಬೆಂಗಳೂರಿನ ಸೂರ್ಯ ಜೊಯಪ್ಪ ಒಡಿಯಾಂದ ರಾಜೇಶ್‌ಚಿನ್ನ, ಬೆಳಗಾವಿಯ ತನುಜ್‌ರಮೇಸ್‌ಸಿಂಗ್‌ಬೆಳ್ಳಿ ಮತ್ತು ಬೆಂಗಳೂರಿನ ಜಿ. ಉಜ್ವಲ್‌ರೆಡ್ಡಿ ತೃತೀಯ. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ವಿ. ಹಿತೈಷಿ ಚಿನ್ನ, ಲಕ್ಷ್ಯಾ ಶಿವಾನಂದ ಬೆಳ್ಳಿ ಮತ್ತು ಬೆಂಗಳೂರು ಗ್ರಾಮಾಂತರದ ಜಿ.ಜೆ. ಲಿಪಿಕಾ ದೇವ್‌ಕಂಚು ಪಡೆದರು.

ಕತ್ತಿ ವರಸೆ:

ಕತ್ತಿ ವರಸೆಯಲ್ಲಿ ಡಿವೈಇಎಸ್‌ನ ಬೆಂಗಳೂರಿನ ಸಯಿದಾ ಇಫ್ತಾಕೌರ್‌ಬಾನು ಚಿನ್ನ, ಮೈಸೂರಿನ ಪಿ.ಸಿ. ನಿಶಾ ಬೆಳ್ಳಿ ಮತ್ತು ಬೆಂಗಳೂರು ಗ್ರಾಮಾಂತರದ ಅವನಿ ಶೆಟ್ಟಿ ಕಂಚು ಪಡೆದರು. ಮಹಿಳೆಯರ ಸಬ್ರೆ ವೈಯಕ್ತಿಕ ವಿಭಾಗದಲ್ಲಿ ಡಿವೈಇಎಸ್‌ನ ಎಸ್‌. ತಾನ್ವಿ ಚಿನ್ನ, ಸಂಧ್ಯಾಶ್ರೀ ಬೆಳ್ಳಿ ಮತ್ತು ದಿಶಾಲಿ ಶಶಿಕುಮಾರ್‌ಕಂಚಿನ ಪದಕಪಡೆದರು.

ಫೆನ್ಸಿಂಗ್‌ಇಪೀ ವೈಯಕ್ತಿಕ ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಎನ್‌.ಬಿ. ದಿವ್ಯಾ ಚಿನ್ನ, ಬೆಂಗಳೂರು ನಗರದ ಎಲ್‌. ಯುಕ್ತಾ ಸಿರಿ ಬೆಳ್ಳಿ, ಬೆಳಗಾವಿಯ ಸೋನಾ ಕಂಚಿನ ಪದಕಪಡೆದಿದ್ದಾರೆ.

ಪುರುಷರ ಸಬ್ರೆ ವೈಯಕ್ತಿಕ ವಿಭಾಗದಲ್ಲಿ ಬೆಳಗಾವಿಯ ರೋಹಿತ್‌ದದಮತಿ ಚಿನ್ನ, ಬೆಂಗಳೂರು ನಗರದ ರಾಜೇಂದ್ರ ಸಿಂಗ್‌ಬೆಳ್ಳಿ ಮತ್ತು ಮೈಸೂರಿನ ಕೆ ಸಿದ್ದರಾಜು ಕಂಚು ಪಡೆದರು. ಪುರುಷರ ಇಪೀ ವಿಭಾಗದಲ್ಲಿ ಬೆಂಗಳೂರಿನ ಎಸ್‌.ಬಿ. ಚರಣ್‌ಚಿನ್ನ, ಮೈಸೂರಿನ ಎಂ. ಯುವರಾಜ ಬೆಳ್ಳಿ ಮತ್ತು ಬೆಂಗಳೂರು ಗ್ರಾಮಾಂತರದ ಎಲ್‌. ವೈಭವ್‌ಸಿಂಗ್‌ಕಂಚು ಪಡೆದರು.