ಅಗ್ನಿಶಾಮಕ ಸಿಬ್ಬಂದಿಯಿಂದ ವಸೂಲಿ: ಆರೋಪ

| Published : Nov 17 2023, 06:45 PM IST

ಸಾರಾಂಶ

ಕುರುಗೋಡಿನ ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುವ ಎಂ. ಪ್ರಭಾಕರ ಸ್ವಾಮಿ ಎಂಬ ಫೈರ್‌ಮ್ಯಾನ್‌ ವಸೂಲಿ ಮಾಡಿದ್ದಾನೆ ಎಂದು ಹೇಳಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಭಾಕರ ಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯಅಗ್ನಿಶಾಮಕ ಮತ್ತು ತುರ್ತು ಸೇವೆಯ ಹಿರಿಯ ಅಧಿಕಾರಿಗಳಿಗೆ ಇಲಾಖೆಯ ವಾಹನದ ಚಾಲಕ ಶಾಂತಪ್ಪ ಹಾಗೂ ಸಾರ್ವಜನಿಕರು ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕುರುಗೋಡು

ದೀಪಾವಳಿ ಹಾಗೂ ದಸರಾ ಹಬ್ಬದ ನೆಪ ಹೇಳಿ ಇಲಾಖೆಯ ಹೆಸರಿನಲ್ಲಿ ಪಟ್ಟಣದ ಪ್ರತಿ ಅಂಗಡಿಗಳಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಯೊಬ್ಬರು ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕುರುಗೋಡಿನ ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುವ ಎಂ. ಪ್ರಭಾಕರ ಸ್ವಾಮಿ ಎಂಬ ಫೈರ್‌ಮ್ಯಾನ್‌ ವಸೂಲಿ ಮಾಡಿದ್ದಾನೆ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಭಾಕರ ಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯಅಗ್ನಿಶಾಮಕ ಮತ್ತು ತುರ್ತು ಸೇವೆಯ ಹಿರಿಯ ಅಧಿಕಾರಿಗಳಿಗೆ ಇಲಾಖೆಯ ವಾಹನದ ಚಾಲಕ ಶಾಂತಪ್ಪ ಹಾಗೂ ಸಾರ್ವಜನಿಕರು ಪತ್ರ ಬರೆದಿದ್ದಾರೆ.

ಆರೋಪವೇನು?

ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಭಾಕರ ಸ್ವಾಮಿ ಅವರು ಹಬ್ಬದ ನೆಪದಲ್ಲಿ ಅಂಗಡಿಗಳು, ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧ ಕಡೆ ತಲಾ ₹500ರಿಂದ ₹1000ದ ವರೆಗೆ ವಸೂಲಿ ಮಾಡಿದ್ದಾನೆ.

ಕರ್ತವ್ಯದ ಸಂದರ್ಭದಲ್ಲಿ ಇಲಾಖೆಯಲ್ಲಿ ಪ್ರಭಾಕರ ಸ್ವಾಮಿ ಇರುವುದಿಲ್ಲ. ಈಗಾಗಲೇ ಇಲಾಖೆ ಹೆಸರು ಹೇಳಿ ಚಂದಾ ವಸೂಲಿ ಮಾಡುತ್ತಿದ್ದಾನೆ ಎಂದು ಅಗ್ನಿಶಾಮಕ ದಳದ ವಾಹನ ಚಾಲಕ ಶಾಂತಪ್ಪ ಆರೋಪಿಸಿದ್ದಾರೆ. ಅಲ್ಲದೇ ಪ್ರಭಾಕರ ಸ್ವಾಮಿಯ ಚಂದಾ ವಸೂಲಿಗೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ.