ಸಾರಾಂಶ
,ಹೊಸದಾಗಿ ನೇಮಕಗೊಂಡ ನಾಯಕರಲ್ಲಿ ಶಾಲೆಯು ನೀಡುವ ಅವಲಂಬನೆ ಮತ್ತು ವಿಶ್ವಾಸವನ್ನು ಸೂಚಿಸುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಿವೇದಿತಾ ನಗರದಲ್ಲಿರುವ ದಿ ಆಕ್ಮೆ ಶಾಲೆಯಲ್ಲಿ 2024-25ರ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವು ಶನಿವಾರ ನಡೆಯಿತು.ಮುಖ್ಯಅತಿಥಿಯಾಗಿದ್ದ ಸಾಲಿಯಾನ್, ಪಿಂಟೋ ಮಾತನಾಡಿ,ಹೊಸದಾಗಿ ನೇಮಕಗೊಂಡ ನಾಯಕರಲ್ಲಿ ಶಾಲೆಯು ನೀಡುವ ಅವಲಂಬನೆ ಮತ್ತು ವಿಶ್ವಾಸವನ್ನು ಸೂಚಿಸುತ್ತದೆ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ಕರ್ತವ್ಯಗಳನ್ನು ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಮಕ್ಕಳ ಕೇಂದ್ರಿತ ವಿಧಾನವು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತದೆ ಮತ್ತು ವಿದ್ಯಾರ್ಥಿ ಯೋಧರಂತೆ ಅವರನ್ನು ಪೋಷಿಸುತ್ತದೆ ಎಂದರು.
ನಂತರ ಆಯ್ಕೆಯಾದ ನಾಯಕರಿಗೆ ಬ್ಯಾಡ್ಜ್ ಮತ್ತು ವಸ್ತ್ರಗಳನ್ನು ನೀಡಿ ಗೌರವಿದರು. ಶಾಲಾ ಧ್ಯೇಯವಾಕ್ಯವನ್ನು ಹೆಚ್ಚು ಗೌರವಿಸುವ ಕುರಿತು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.ಮುಖ್ಯೋಪಾಧ್ಯಾಯಿನಿ ಎಸ್. ಶ್ವೇತಾ ಚವಾಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.