ಕೀರ್ತನಾ ಎಚ್‌.ಎಸ್‌. ಅವರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಪಾಟೀಲ್‌ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಹುಬ್ಬಳ್ಳಿ:

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಕೀರ್ತನಾ ಎಚ್‌.ಎಸ್‌. ಅವರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಪಾಟೀಲ್‌ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಸಂಸ್ಥೆಯಲ್ಲಿ ಅಧಿಕಾರಿಗಳಿಗೆ ಹಾಗೂ ವಿಶೇಷವಾಗಿ ಘಟಕ ವ್ಯವಸ್ಥಾಪಕರಿಗೆ ಬಡ್ತಿ ಹಾಗೂ ವರ್ಗಾವಣೆಯ ವಿಷಯದಲ್ಲಿ ಆಗುತ್ತಿರುವ ತೊಂದರೆ ಪರಿಹರಿಸಬೇಕು. ಘಟಕ ಹಾಗೂ ವಿಭಾಗಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಜತೆಗೆ ಸರ್ಕಾರಿ ನೌಕರರಿಗೆ ಇರುವ ಸೌಲಭ್ಯಗಳನ್ನು ಸಾರಿಗೆ ಸಂಸ್ಥೆಯ ನೌಕರರಿಗೂ ಒದಗಿಸುವಂತೆ ಸರ್ಕಾರದ ಮಟ್ಟದಲ್ಲಿ ಮನವರಿಕೆ ಮಾಡಬೇಕೆಂದು ಸಂಘದ ಸದಸ್ಯರು ಒತ್ತಾಯಿಸಿದರು.ಕೆಎಸ್‌ಆರ್‌ಟಿಸಿ ನೇಮಕಾತಿ ಮತ್ತು ವೃಂದ ನಿಯಮಾವಳಿ 17/1 ಅನ್ನು ವಾಕರಸಾ ಸಂಸ್ಥೆಯಲ್ಲಿ ಉಲ್ಲಂಘಿಸಿ ಹಲವರನ್ನು ಆಯಕಟ್ಟಿನ ಜಾಗಕ್ಕೆ ನಿಯೋಜಿಸಲಾಗಿದೆ. ಇದನ್ನು ಗಮನಿಸಿ ನಿಯಮ ಉಲ್ಲಂಘಿಸಿ ನೇಮಕಗೊಂಡವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ಸಂಘದ ಪದಾಧಿಕಾರಿಗಳು ಎಂಡಿಯವರಿಗೆ ಮನವರಿಕೆ ಮಾಡಿದರು. ಈ ವೇಳೆ ಶ್ಯಾಮಲಾ ಕೆ.ಎನ್‌., ಟಿ.ಎಲ್‌. ಶ್ರೀನಾಥ, ಕಿರಣಕುಮಾರ, ಬಸಾಪುರ, ಲಕ್ಷ್ಮೀ ನಾರಾಯಣ ಭಟ್‌, ವೈ.ಎಂ. ಶಿವರೆಡ್ಡಿ. ಸುನೀಲ್‌ ಎಂ., ಪಿ.ಆರ್‌. ಕಿರಣಗಿ, ರಾಜೇಂದ್ರ ಆರ್‌.ಎಂ., ಸುನೀಲ್‌ ವಾಡೇಕರ, ಎಲ್‌.ಎಚ್‌. ರಾಠೋಡ, ಜಿ. ಹನುಮೇಗೌಡ. ಪ್ರಶಾಂತ ಪಾನಬುಡೆ. ಅನಿಲಕುಮಾರ ಹಳ್ಳದ, ಸದಾನಂದ ಒಡೆಯರ ಇನ್ನಿತರರಿದ್ದರು.