ಸಾರಾಂಶ
ರಾಮನಗರ: ಎಚ್‌ಐವಿ/ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಮತ್ತು ರೋಟರಿ ಸಿಲ್ಕ್ ಸಿಟಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಭಾಗಿತ್ವದಲ್ಲಿ ಶುಕ್ರವಾರ ಬೆಳಗ್ಗೆ ರೆಡ್ ರನ್ ಮ್ಯಾರಥಾನ್ ಓಟ ನಡೆಯಿತು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಕ್ಯಾಪ್ಟನ್ ಲಕ್ಷ್ಮಿ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿದರು. ಅಲ್ಲಿಂದ ಹೊರಟ ಮ್ಯಾರಥಾನ್ ಓಟ ರೋಟರಿ ವೃತ್ತ, ಐಜೂರು ವೃತ್ತ, ಕೆಂಗಲ್ ಹನುಮಂತಯ್ಯ ಸರ್ಕಲ್, ರೈಲ್ವೆ ನಿಲ್ದಾಣದ ಮೂಲಕ ಮತ್ತೆ ಕಾಲೇಜುವರೆಗೆ ಆಯೋಜನೆಗೊಂಡಿತ್ತು.ರೆಡ್‌ರನ್ ಮ್ಯಾರಥಾನ್ 5 ಕಿ.ಮೀಟರ್ ಓಟದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 200ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ವೇಳೆ ಆರೋಗ್ಯ ಇಲಾಖೆಯ ಡಾ.ನಳಿನಿ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ವಿ.ಪ್ರಕಾಶ್. ಕಾರ್ಯದರ್ಶಿ ಎಂ.ಬಿ.ಪರಮೇಶ್, ಮಾಜಿ ಅಧ್ಯಕ್ಷ ರವಿಕುಮಾರ್ ಹಾಜರಿದ್ದರು. ಮ್ಯಾರಥಾನ್‌ನಲ್ಲಿ ಭಾಗವಹಿ ಸಿದ್ದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ಜೊತೆಗೆ ಭಾಗವಹಿಸಿದ್ದ ಎಲ್ಲರಿಗೂ ಪ್ರಶಸ್ತಿಪತ್ರ ವಿತರಿಸಲಾಯಿತು.
ಬಾಲಕಿಯರ ವಿಭಾಗ: ರಾಮನಗರದ ವಿ.ಜಿ. ಲಕ್ಷ್ಮಿ (ಪ್ರಥಮ), ಮಾಗಡಿಯ ಟಿ.ಸಿ.ಹೇಮಲತಾ (ದ್ವಿತೀಯ), ಕನಕಪುರದ ಆರ್.ಸಿಂದೂರ (ತೃತೀಯ) ,ರಾಮನಗರದ ವರಲಕ್ಷ್ಮಿ ಮತ್ತು ಚನ್ನಪಟ್ಟಣದ ಶ್ರುತಿ ಹೆಚ್.ಆರ್ ಅವರು ಸಮಾಧಾನಕರ ಬಹುಮಾನಕ್ಕೆ ಭಾಜನರಾದರು.ಬಾಲಕರ ವಿಭಾಗ:
ಮಾಗಡಿಯ ಎಲ್.ಅರುಣ್‌ಕುಮಾರ್ (ಪ್ರಥಮ), ವಿಕಾಸ್ (ದ್ವಿತೀಯ), ಕನಕಪುರದ ಚಂದನ್ (ತೃತೀಯ), ಹಾಗೂ ಚನ್ನಪಟ್ಟಣದ ಆಕಾಶ್ ಮತ್ತು ಜೀವನ್ ಅವರು ಸಮಾಧಾನಕರ ಬಹುಮಾನ ಪಡೆದರು.22ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಕಾಲೇಜು ಪ್ರಾಂಶುಪಾಲರಾದ ಕ್ಯಾಪ್ಟನ್ ಲಕ್ಷ್ಮಿರವರು ರೆಡ್ ರನ್ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿದರು.