ಸೌಲಭ್ಯಕ್ಕಾಗಿ ರೆಡ್ಡಿ ಜನಾಂಗ ಒಗ್ಗಟ್ಟಾಗಬೇಕು

| Published : Aug 05 2024, 12:34 AM IST

ಸಾರಾಂಶ

ರೆಡ್ಡಿ ಸಮುದಾಯ ಸರ್ಕಾರದ ಸವಲತ್ತು ಪಡೆದುಕೊಳ್ಳುವಲ್ಲಿ ವಂಚಿರಾಗುತ್ತಿದೆ. ಒಗ್ಗಟ್ಟಿನ ಕೊರತೆಯಿಂದ ಸವಲತ್ತು ಪಡೆಯಲಾಗದೆ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದೇವಂತಾಗಿದೆ, ಜೊತೆಗೆ ರೆಡ್ಡಿ ಸಮುದಾಯದ ಮುಂದಿನ ಪೀಳಿಗೆ ಸಹ ಸಮಸ್ಯೆ ಎದುರಿಸುವ ಪರಿಸ್ಥಿತಿ ಎದುರಾಗಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರೆಡ್ಡಿ ಸಮುದಾಯ ಸಾಕಷ್ಟು ಸಂಖ್ಯೆಯಲ್ಲಿದ್ದರೂ ಸಂಘಟನೆ ಕೊರತೆಯಿಂದ ಹಿಂದೆ ಉಳಿದಿರುವುದರಿಂದ ರಾಜಕೀಯವಾಗಿ ಸ್ಥಾನಮಾನಗಳನ್ನು ಕಳೆದುಕೊಳ್ಳುವಂತಾಗಿದೆ ಎಂದು ರೆಡ್ಡಿ ಜನಸಂಘದ ರಾಜ್ಯ ಸಂಘಟನಾ ಅಧ್ಯಕ್ಷ ಪ್ರಭಾಕರರೆಡ್ಡಿ ಹೇಳಿದರು.

ತಾಲೂಕಿನ ಕಾಮಸಮುದ್ರ ಗ್ರಾಮದ ಕೆಸಿಆರ್ ಕಲ್ಯಾಣ ಮಂಟಪದಲ್ಲಿ ನಡೆದ ರೆಡ್ಡಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿಯೂ ಸಾವಿರಾರು ಮಂದಿ ಕುಲ ಬಾಂಧವರಿದ್ದೂ ಒಗ್ಗಟ್ಟಿನ ಕೊರತೆಯಿಂದ ಸಮುದಾಯ ಒಡೆಯುತ್ತಿದೆ ಎಂದರು.

ಸೌಲಭ್ಯ ವಂಚಿತ ಜನಾಂಗ

ನಮ್ಮ ಸಮುದಾಯ ಸರ್ಕಾರದ ಸವಲತ್ತು ಪಡೆದುಕೊಳ್ಳುವಲ್ಲಿ ವಂಚಿರಾಗುತ್ತಿದ್ದೇವೆ. ಸಂಘಟನೆಯಲ್ಲಿ ಒಗ್ಗಟ್ಟಿನ ಕೊರತೆಯಿಂದ ಸವಲತ್ತುಗಳನ್ನು ಪಡೆದುಕೊಳ್ಳದೆ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದೇವಂತಾಗಿದೆ, ಜೊತೆಗೆ ರೆಡ್ಡಿ ಸಮುದಾಯ ಮುಂದಿನ ಪೀಳಿಗೆ ಸಮಸ್ಯೆ ಎದುರಿಸುವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.

ಸಮುದಾಯವನ್ನು ಸಂಘಟನೆ ಮಾಡುವ ಸಲುವಾಗಿ ರಾಜ್ಯ ಪ್ರವಾಸ ಮಾಡುತ್ತಿರುವಾಗ ಸಮುದಾಯ ತಳಮಟ್ಟದಲ್ಲಿರುವುದು ಕಾಣುತ್ತಿದ್ದೆ. ಎಲ್ಲಾ ಸಮುದಾಯಗಳಿಗೂ ನಿಗಮ ಮಂಡಳಿ ನೀಡಿರುವ ಸರ್ಕಾರ ರೆಡ್ಡಿ ಸಮುದಾಯದ ನಿಗಮ ಮಂಡಳಿ ರಚಿಸಿಲ್ಲ. ಇದಕ್ಕೆ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ ಕಾರಣ. ನಮ್ಮದೇ ನಾಯಕತ್ವ, ಮುಖಂಡತ್ವ ಇದ್ದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.

ಓಟ್‌ ಬ್ಯಾಂಕ್‌ ಆಗಿ ಬಳಕೆ

ರೆಡ್ಡಿ‌ ಸಂಘದ ರಾಜ್ಯ ನಿರ್ದೇಶಕ ಕೆ.ಚಂದ್ರಾರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯ ಸಂಘಟನಾ ಸಭೆ ರಾಜಕೀಯವಾಗಿ ಶೈಕ್ಷಣಿಕವಾಗಿ ಸಮಾಜಿಕವಾಗಿ ಮತ್ತು ರಾಜಕೀಯವಾಗಿ ಬೆಳೆಯಬೇಕು. ನಮ್ಮಲ್ಲಿನ ಸಂಘಟನೆ ಕೊರತೆಯಿಂದ ರಾಜಕೀಯ ಪಕ್ಷಗಳು ರೆಡ್ಡಿ ಸಮುದಾಯವನ್ನು ಬರೀ ಮತ ಬ್ಯಾಂಕ್‌ಕಾಗಿ ಮಾತ್ರ ಬಳಸಿಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ರೆಡ್ಡಿ ಸಂಘದ ತಾಲೂಕು ಅಧ್ಯಕ್ಷ ತಿಪ್ಪಾರೆಡ್ಡಿ,ಮಾಲೂರು ಅಧ್ಯಕ್ಷ ರಾಮಸ್ವಾಮಿರೆಡ್ಡಿ, ಜಿ.ರಾಜಾರೆಡ್ಡಿ, ರಾಮಚಂದ್ರರೆಡ್ಡಿ, ಆರ್.ವೆಂಕಟೇಶ್ರೆಡ್ಡಿ, ಮಂಜುನಾಥರೆಡ್ಡಿ, ರಾಧಮ್ಮ, ವಿಕಯಲಕ್ಷ್ಮಿ, ಮಲ್ಲಿಕಾರ್ಜುನರೆಡ್ಡಿ, ಶಿವಾರೆಡ್ಡಿ ಇದ್ದರು.