ದಾನದ ಕಾರ್ಯಕ್ರಮಗಳಿಗೆ ಹೊಸ ವ್ಯಾಖ್ಯಾನ: ಮೀರಾ ಶಿವಲಿಂಗಯ್ಯ

| Published : Jun 10 2024, 12:30 AM IST

ಸಾರಾಂಶ

ಸಮಾಜದಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ದಾನದ ಕಾರ್ಯಕ್ರಮಗಳಿಗೆ ಹೊಸ ವ್ಯಾಖ್ಯಾನ ಕೊಡಬೇಕಿದೆ. ದಾನ ಮಾಡುವುದು ಮುಖ್ಯ. ಅವು ಸಮಾಜಕ್ಕೆ ಮಾದರಿಯಾಗಬೇಕು. ಎಲ್ಲರೂ ತಮ್ಮ ಸಂಪಾದನೆ ಬಗ್ಗೆ ಚಿಂತಿಸುತ್ತಾರೆ. ಕೆಲವರು ದಾನವನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ ತನ್ನ ಬೆವರಿನ ಫಲವನ್ನು ಬೇರೆಯವರಿಗೆ ಕೊಡುವುದು ಪುಣ್ಯದ ಕೆಲಸ.

ಕನ್ನಡಪ್ರಭ ವಾರ್ತೆ ಮಂಡ್ಯ

ದಾನ -ಧರ್ಮದ ಕಾರ್ಯಕ್ರಮಗಳಿಗೆ ಹೊಸ ವ್ಯಾಖ್ಯಾನ ಕೊಡಬೇಕಿದೆ. ಒಬ್ಬರಿಂದ ಸಮಾಜ ಸೇವೆ ಮಾಡುವ ಬದಲು ಹತ್ತು ಜನರು ಸೇರಿ ದಾನ ಮಾಡಿದಾಗ ಸಮಾಜದಲ್ಲಿ ಕ್ರಿಯೇಟಿವಿಟಿ ಬರುತ್ತದೆ ಹಾಗೂ ಚೈನ್ ಲಿಂಕ್ ರೀತಿ ಬೆಳೆಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ತಿಳಿಸಿದರು.

ನಗರದ ರೆಡ್‌ಕ್ರಾಸ್ ಭವನದಲ್ಲಿ ಜಿವಿಕೆ ಸಂಸ್ಥೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತ ಲೇಖನ ಸಾಮಗ್ರಿಗಳು ಮತ್ತು ಪೀಠೋಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜದಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ದಾನದ ಕಾರ್ಯಕ್ರಮಗಳಿಗೆ ಹೊಸ ವ್ಯಾಖ್ಯಾನ ಕೊಡಬೇಕಿದೆ. ದಾನ ಮಾಡುವುದು ಮುಖ್ಯ. ಅವು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ವಿಜಯರಾಜ್ ಮಾತನಾಡಿ, ಎಲ್ಲರೂ ತಮ್ಮ ಸಂಪಾದನೆ ಬಗ್ಗೆ ಚಿಂತಿಸುತ್ತಾರೆ. ಕೆಲವರು ದಾನವನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ ತನ್ನ ಬೆವರಿನ ಫಲವನ್ನು ಬೇರೆಯವರಿಗೆ ಕೊಡುವುದು ಪುಣ್ಯದ ಕೆಲಸ ಎಂದರು.

ವಕೀಲ ಮಧುಸೂದನ್ ಮಾತನಾಡಿ, ಜಿವಿಕೆ ಪ್ರತಿಷ್ಠಾನ ಜಿಲ್ಲೆಯ ಕೊನೆಯ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಅವರಿಗೆ ಬೇಕಾದ ಉಪಕರಣಗಳನ್ನು ಕೊಡುತ್ತಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಮುಂದೆ ಸಹಾಯಮಾಡುವ ಮನೋಭಾವ ಬೆಳೆಯಲು ವಿದ್ಯಾರ್ಥಿಗಳಿಗೆ ದಾನದ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಜಿವಿಕೆ ಸಂಸ್ಥೆಯ ಅಧ್ಯಕ್ಷ ಆರ್.ವಾಸು, ಉಪಾಧ್ಯಕ್ಷ ಬಸವರಾಜು, ಸದಸ್ಯ ಸುನೀತ ಮಣಿ, ಯೋಗಾನಂದ ಪಟೇಲ್ ಇತರರು ಭಾಗವಹಿಸಿದ್ದರು.