ಪಶು ಆಹಾರ ದರ ಇಳಿಸಿ ಹೈನೋದ್ಯಮ ಉಳಿಸಿ

| Published : Jan 01 2025, 12:01 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ರಾಸುಗಳನ್ನು ಸಾಕುವುದು ತುಂಬಾ ಕಷ್ಟವಾಗಿದೆ. ಪಶುಆಹಾರ ಸೇರಿದಂತೆ ಹಿಂಡಿ, ಬೂಸಾಗಳ ಬೆಲೆ ಹೆಚ್ಚಾಗಿದೆ. ಇದರಿಂದ ಹಸು ಸಾಕಾಣಿಕೆಯಲ್ಲಿ ಬಡವರಿಗೆ ತುಂಬಾ ಅನನುಕೂಲವಾಗಿದೆ. ಈ ನಿಟ್ಟಿನಲ್ಲಿ ಒಕ್ಕೂಟದ ಅಧ್ಯಕ್ಷರು ಸರ್ಕಾರದ ಗಮನ ಸೆಳೆದು ಪಶು ಆಹಾರ ಬೆಲೆ ಕಡಿಮೆಗೊಳಿಸಸಲು ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ಪಶು ಆಹಾರದ ಬೆಲೆ ಇಳಿಕೆ ಮಾಡಿ ಬಡವರಿಗೆ ಅನುಕೂಲ ಮಾಡಿಕೊಟ್ಟರೆ ಹೈನ್ಯೋದಮ ಉಳಿಯುವುದರ ಜೊತೆಗೆ ಕೋಲಾರ ಹಾಲು ಒಕ್ಕೂಟಕ್ಕೆ ಹಾಲಿನ ಸರಬರಾಜು ಹೆಚ್ಚಾಗಲಿದೆ ಎಂದು ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಾಕರಹಳ್ಳಿ ಪಿ.ಎಂ.ವೆಂಕಟೇಶ್ ಹೇಳಿದರು.ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಕೋಲಾರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪಶುಆಹಾರ ದರ ಇಳಿಸಿ

ಇತ್ತೀಚಿನ ದಿನಗಳಲ್ಲಿ ರಾಸುಗಳನ್ನು ಸಾಕುವುದು ತುಂಬಾ ಕಷ್ಟವಾಗಿದೆ. ಪಶುಆಹಾರ ಸೇರಿದಂತೆ ಹಿಂಡಿ, ಬೂಸಾಗಳ ಬೆಲೆ ಹೆಚ್ಚಾಗಿದೆ. ಇದರಿಂದ ಹಸು ಸಾಕಾಣಿಕೆಯಲ್ಲಿ ಬಡವರಿಗೆ ತುಂಬಾ ಅನನುಕೂಲವಾಗಿದೆ. ಈ ನಿಟ್ಟಿನಲ್ಲಿ ಒಕ್ಕೂಟದ ಅಧ್ಯಕ್ಷರು ಸರ್ಕಾರದ ಗಮನ ಸೆಳೆದು ಪಶು ಆಹಾರ ಬೆಲೆ ಕಡಿಮೆಗೊಳಿಸಿ ಹಾಲು ಉತ್ಪಾದಕರಿಗೆ ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಿದ್ದೇ ಆದಲ್ಲಿ ಇನ್ನಷ್ಟು ರೈತರು ಹೈನೋದ್ಯಮದತ್ತ ಮುಖ ಮಾಡುವುದರ ಜೊತೆಗೆ ಹಾಲಿನ ಸರಬರಾಜು ತಾನಾಗಿಯೇ ಹೆಚ್ಚಳವಾಗಲಿದೆ. ಇದರಿಂದ ಬಡವರಿಗೆ ತುಂಬಾ ಅನಕೂಲವಾಗಲಿದೆ ಎಂದರು.ರಾಜಕೀಯ ಹಸ್ತಕ್ಷೇಪ ಬೇಡ

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಉರಿಗಿಲಿ ಎಸ್.ಆರ್.ರುದ್ರಸ್ವಾಮಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಬೇಡ. ರಾಜಕಾರಣವನ್ನು ಹೊರಗಿಟ್ಟುಕೊಳ್ಳೋಣ. ಸಂಸ್ಥೆ ಉಳಿಯಬೇಕಾದರೆ ಸಂಘದ ಕಾರ್ಯದರ್ಶಿಗಳ ಪಾತ್ರ ಮುಖ್ಯವಾಗಿರುತ್ತದೆ. ಸಂಸ್ಥೆಗಳಲ್ಲಿ ಸಣ್ಣಪಟ್ಟ ತಪ್ಪುಗಳಾದರೆ ಅದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಖಾಸಗಿ ಸಂಸ್ಥೆಗಳು ತಲೆ ಎತ್ತುತ್ತವೆ. ಅದಕ್ಕೆ ದಾರಿ ಮಾಡಿಕೊಡುವುದು ಬೇಡ ಎಂದರು.ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಎಸ್.ಬಿ.ಬಸವರಾಜಪ್ಪ, ಕರ್ನಾಟಕ ರಾಜ್ಯ ಸಹಕಾರ ಹಾಲು ಮಹಾಮಂಡಳ ಕೇಂದ್ರೀಯ ತರಬೇತಿ ಸಂಸ್ಥೆಯ ನಿವೃತ್ತ ಹಿರಿಯ ಉಪ ನಿರ್ದೇಶಕ ಆರ್.ರಾಜಣ್ಣ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಶಿಬಿರ ಕಛೇರಿಯ ಉಪ ವ್ಯವಸ್ಥಾಪಕ ಡಾ.ಮಹೇಶ್.ಆರ್, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಎನ್.ನಾಗರಾಜ್, ಕೆ.ಎಂ.ವೆಂಕಟೇಶಪ್ಪ, ಶ್ರೀ ಮಾರಿಕಾಂಭ ಮೇವು ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್, ಒಕ್ಕೂಟದ ಸಿಬ್ಬಂದಿಗಳಾದ ಲಕ್ಷ್ಮಿ, ರವಿಕುಮಾರ್ ಇದ್ದರು. ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿ, ನಿರೂಪಿಸಿದರು. ಉಷಾ ಪ್ರಾರ್ಥಿಸಿದರು.