ಸಾರಾಂಶ
ಪಾಲಡ್ಕ ಸಂತ ಇಗ್ನೇಷಿಯಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ, ಪಾಲಕರ ಸಭೆ ಶುಕ್ರವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪಾಲಡ್ಕ ಸಂತ ಇಗ್ನೇಷಿಯಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ, ಪಾಲಕರ ಸಭೆ ಶುಕ್ರವಾರ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಫಾಸ್ಟ್ ಫುಡ್ ಬಿಟ್ಟು ಆರೋಗ್ಯಕರ ಮನೆಯ ಆಹಾರವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ತಿನ್ನುವ ತಿನಿಸುಗಳನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಬಿಸಾಡಿ ಏನೂ ತಿಳಿಯದ ಪಕ್ಷಿ, ಪ್ರಾಣಿಗಳ ಹತ್ಯೆಗೆ ಕಾರಣರಾಗದಂತೆ ಕರೆ ನೀಡಿದರು.
ಮೊಬೈಲ್‌ನಲ್ಲಿ ಕಳೆದು ಹೋಗದೇ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಧ್ಯಯನ ಮಾಡಬೇಕು. ಒಂದು ವೇಳೆ ಅಂಕ ಕಡಿಮೆ ಬಂದರೂ ಎದೆಗುಂದದೆ ಡಿಪ್ಲೊಮಾ, ಪ್ಯಾರಾ ಮೆಡಿಕಲ್ ನಂತಹ ವೈವಿಧ್ಯಮಯ ಕೋರ್ಸ್ ಕಲಿತು ಇತರರಿಗಿಂತ ಬೇಗ ಉದ್ಯೋಗ ಪಡೆಯಲು ಸಾಧ್ಯ ಎಂದು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದರು.ಧರ್ಮಗುರು ಇಲ್ಯಾಸ್ ಡಿಸೋಜ ಅಧ್ಯಕ್ಷತೆ ವಹಿಸಿ, ಹಿತವಚನ ನುಡಿದರು. ಶಾಲಾ ಮುಖ್ಯಶಿಕ್ಷಕಿ ಜೆಸಿಂತಾ ಸಿಕ್ವೇರಾ, ಶಾಲಾ ನಿಯಮಗಳನ್ನು ಪ್ರಕಟಿಸಿದರು. ಶಿಕ್ಷಕಿ ಸುನೀತಾ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಪಾಲನಾ ಸಮಿತಿಯ ರೊನಾಲ್ಡ ಲೋಬೋ, ಮೈಕೆಲ್ ಸಿಕ್ವೇರಾ, ಓಸ್ವಾಲ್ಡ್ ಪಿಂಟೋ, ಅನ್ಸಿಲ್ಲಾ ಮೆಟಿಲ್ಡಾ ಕರ್ಡೋಸಾ, ರೆನಿಟಾ ಸೆರಾವೋ, ಸೆಟುರ್ನೈನ್ ಡಿಸಿಲ್ವಾ ಹಾಜರಿದ್ದರು.