ತರೀಕೆರೆ ತಾಪಂನಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ತರೀಕೆರೆಪರಿಷ್ಕರಣೆ ವೇಳೆ ಸೂಕ್ತ ದಾಖಲಾತಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಾತ್ರಿ ಪಡಿಸಿ ಕೊಳ್ಳಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಸೋಮವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಬಿ.ಎಲ್.ಒಗಳು ಎನ್ಯುಮರೇಟರ್ ಫಾರಂ ನೊಂದಿದೆ ಮನೆ ಮನೆಗೆ ಭೇಟಿ ನೀಡಲಿದ್ದು ಆ ಸಂದರ್ಭದಲ್ಲಿ ಅರ್ಜಿಯೊಂದಿಗೆ ಸೂಕ್ತ ದಾಖಲಾತಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ನೋಂದಣಿ ಖಾತ್ರಿಪಡಿಸಿಕೊಳ್ಳಬೇಕು ಎಂದ ಅವರು ತರೀಕೆರೆ ತಾಲೂಕಿನ ಮೆಸ್ಕಾಂನ ವಿವಿಧ ಕಚೇರಿಗಳಲ್ಲಿ ಉಂಟಾಗಿರುವ ಸಿಬ್ಬಂದಿ ಕೊರತೆಯನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸದಸ್ಯ ಮಳಿಕಂಠ ಮಾತನಾಡಿ ಗೋಪಾಲ ಕಾಲೋನಿಯಲ್ಲಿ ಬೀದಿ ದೀಪಗಳು ಹಗಲಲ್ಲಿ ಕೂಡ ಲೈಟ್ ಆನ್ ಆಗಿರುತ್ತದೆ, ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಆಗಬೇಕು ಎಂದು ಸಭೆಯಲ್ಲಿ ತಿಳಿಸಿದರು.
ತರೀಕೆರೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಹೇಮಲತಾ ರೇವಣ್ಣ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿರಬೇಕು. ಈ ಕುರಿತು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಭೆ ನಡೆಸಿ ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.
ಸದಸ್ಯ ಜ್ಞಾನಮೂರ್ತಿ ಮಾತನಾಡಿ ಬಳ್ಳಿಗನೂರಿನಲ್ಲಿ ಪ್ರೌಢಶಾಲೆ ಇದ್ದು ಮುಂಡ್ರೆ ಗ್ರಾಮದಿಂದ ವಿದ್ಯಾರ್ಥಿ ಗಳು ಬಳ್ಳಿಗನೂರು ಗ್ರಾಮಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಸಭೆ ಗಮನಕ್ಕೆ ತಂದಾಗ ಮುಂಡ್ರೆ ಗ್ರಾಮದಿಂದ ವಿದ್ಯಾರ್ಥಿಗಳು ಬಳ್ಳಿಗನೂರು ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಸಂಚರಿಸಲು ಮತ್ತು ಲಿಂಗದಹಳ್ಳಿ ಹಾಗೂ ನಂದಿ ಗ್ರಾಮಗಳಿಂದ ವಿವಿಧ ಶಾಲಾ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿ ಗಳಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೇಮಲತಾ ರೇವಣ್ಣ ಸೂಚಿಸಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚರಣ್ ರಾಜ್ ಮಾತನಾಡಿ ಗೃಹಲಕ್ಷ್ಮಿ ಯೋಜನೆಯಡಿ ತರೀಕೆರೆ ತಾಲೂಕಿನಲ್ಲಿ ಫೆಬ್ರವರಿ 2026ರ ಮಾಹೆವರೆಗೆ ಒಟ್ಟು29 ಕಂತುಗಳಲ್ಲಿ ₹187 ಕೋಟಿ 81, ಲಕ್ಷ 8 ಸಾವಿರ ಫಲಾನುಭವಿಗಳಿಗೆ ಸಂದಾಯವಾಗಿದ್ದು. ತಾಲೂಕಿನಲ್ಲಿ ಒಟ್ಟು 35,500 ನೋಂದಣಿ ಫಲಾನುಭವಿಗಳಿದ್ದು ಅದರಲ್ಲಿ 34,450 ಪಲಾನುಭವಿಗೆಳಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಸಂದಾಯವಾಗಿದೆ. 483 ಫಲಾನುಭವಿಗಳು ಮರಣಹೊಂದಿದವರನ್ನ ಗುರುತಿಸಲಾಗಿದೆ. ಮರಣಾನಂತರ ಪಾವತಿ ಯಾದ ಹಣವನ್ನು ಅವರ ಬ್ಯಾಂಕ್ , ಪೋಸ್ಟ್ ಆಫಿಸ್ ಖಾತೆಯಲ್ಲಿರುವ ಹಣವನ್ನು ಸರ್ಕಾರಕ್ಕೆ ಮರುಪಾವತಿ ಮಾಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಸದಸ್ಯರಾದ ಲಕ್ಷ್ಮೀಬಾಯಿ, ಭಾಗ್ಯಲಕ್ಷ್ಮಿ ಅನಂದ್, ಶ್ರೀಧರ್, ಜ್ಞಾನಮೂರ್ತಿ, ಚಂದ್ರಾನಾಯಕ್ ವಿವಿಧ ಚರ್ಚೆಗಳಲ್ಲಿ ಭಾಗವಹಿಸಿದ್ದರು.ಸದಸ್ಯರಾದ ಪ್ರಸನ್ನ ದೇವರಾಜ್, ಸಂತೋಷ್, ವಿನೋದ್ ರಾಜ್, ಮಹಮದ್ ಕುಟ್ಟಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ಇ.ಒ.ದೇವೇಂದ್ರಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
--15ಕೆಟಿಆರ್.ಕೆ.5ಃ ತರೀಕೆರೆಯ ತಾ.ಪಂ.ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ತರೀಕೆರೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಹೇಮಲತಾ ರೇವಣ್ಣ, ಇ.ಒ.ಡಾ.ಆರ್. ದೇವೇಂದ್ರಪ್ಪ, ಸಿಡಿಪಿಒ ಚರಣ್ ರಾಜ್ ಮತ್ತಿತರರು ಇದ್ದರು.