ಸಾರಾಂಶ
ಹರಪನಹಳ್ಳಿ: ಪ್ರತಿ ಬೂತ್ ಮಟ್ಟದಲ್ಲೂ ಹೆಚ್ಚು ಸದಸ್ಯರನ್ನು ಬಾರತೀಯ ಜನತಾ ಪಕ್ಷಕ್ಕೆ ನೊಂದಾಯಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಹೇಳಿದರು.
ಅವರು ತಾಲೂಕಿನ ಹಿರೇಮ್ಯಾಗಳಗೆರೆ, ಕಂಚಿಕೇರಿ, ಕಡಬಗೇರಿ ಮತ್ತು ಚಿಗಟೇರಿ ಮಹಾಶಕ್ತಿಕೇಂದ್ರ ಗಳಲ್ಲಿ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರತೀ ಬೂತ್ ಮಟ್ಟದಲ್ಲಿ ಹೆಚ್ಚು ಸದಸ್ಯರನ್ನು ನೋಂದಾಯಿಸಬೇಕು. ಯಾವುದೇ ಚುನಾವಣೆಯಲ್ಲಿ ಯಾರೇ ಆದರೂ ಸ್ಪರ್ಧೆಗೆ ಟಿಕೆಟ್ ಬಯಸಿದರೆ ಅವರು ಕನಿಷ್ಠ 100 ಸದಸ್ಯರನ್ನು ನೋಂದಾಯಿಸಿರಬೇಕು. ಇದು ಪಕ್ಷದ ಮಾನದಂಡ ಎಂದು ಹೇಳಿದರು.ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಉನ್ನತ ಮಟ್ಟಕ್ಕೆ ತಂದಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ದದ ಸಂದರ್ಭದಲ್ಲಿ ನಮ್ಮ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ನಮ್ಮ ದೇಶಕ್ಕೆ ಕರೆಸುವ ಸಲುವಾಗಿ ಎರೆಡು ದೇಶಗಳಿಗೆ ಯುದ್ಧ ನಿಲ್ಲಿಸುವಂತೆ ಸೂಚಿಸಿದಾಗ 2 ದಿನ ಯುದ್ಧನಿಲ್ಲಿಸಲಾಯಿತು ಇದು ಮೋದಿಯವರ ತಾಕತ್ತು ಎಂದು ತಿಳಿಸಿದರು.
ಇಂದು ನಮ್ಮ ದೇಶ ಎಲ್ಲ ದೃಷ್ಟಿಯಿಂದ ಬಲಾಢ್ಯವಾಗುತ್ತಿದೆ. ಎಲ್ಲರೂ ಹೆಚ್ಚು ಸದಸ್ಯತ್ವ ನೋಂದಾಯಿಸಿ ಬಿಜೆಪಿಯನ್ನು ಸದೃಢಗೊಳಿಸೋಣ ಈ ಅಭಿಯಾನದಲ್ಲಿ ವಿದ್ಯಾವಂತ ಯುವಕರು ಹೆಚ್ಚು ಭಾಗವಹಿಸಿ ಎಂದು ಕರೆಕೊಟ್ಟರು.ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ, ರಾಜ್ಯ ಸೌಹಾರ್ದ ಬ್ಯಾಂಕ್ ನ ಅಧ್ಯಕ್ಷ ಜಿ.ನಂಜನಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಹರಪನಹಳ್ಳಿ ಮಂಡಲ ಉಸ್ತುವಾರಿ ಬ್ಯಾಲುಹುಣಿಸಿ ರಾಮಣ್ಣ,ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಣಿವಿಹಳ್ಳಿ ಮಂಜುನಾಥ,ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎ, ಉದಯಕುಮಾರ್, ಬಿ ವೈ ವೆಂಕಟೇಶ್ ನಾಯ್ಕ್, ಸಂಚಾಲಕರಾದ ಮುದುಕನವರ್ ಶಂಕರ್, ಸಂಗಮೇಶ , ಕಂಚಿಕೇರಿ ಶಾನಭೋಗರ ಕೆಂಚಪ್ಪ, ಚಂದ್ರಶೇಖರ್ ವಿಜಯ್ ,ಕಡಬಗೆರೆ ನಾಗನಗೌಡ ಪಟೇಲ್, ಹುಣಿಸಿಹಳ್ಳಿ ಪ್ರಕಾಶ್, ಬಾಗಳಿ ಜಗದೀಶ್, ಚಿಗಟೇರಿ ಕೊಂಗಿ ರಮೇಶ್, ನೀಲಪ್ಪ, ಎಸ್ಟಿಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃಂಗಾರತೋಟದ ಗಿರೀಶ್, ಕಣಿವಿಹಳ್ಳಿ ಉಮೇಶ್, ಹಾಗೂ ಹಗರಿ ಗಜಾಪುರದ ರವೀ೦ದ್ರಗೌಡ ಗಂಗಾಧರ,ಮೈದೂರು ಲೋಕೇಶ್,ಹೆಗ್ಗನಗೌಡ ಬಾವಿಹಳ್ಳಿ ಪತ್ರೆಪ್ಪ, ಕೆ ಸಿದ್ದೇಶ್, ವಸಂತ,ಹರಿಯಮ್ಮನಹಳ್ಳಿ ಮಂಜುನಾಥ,ಶಿಂಗ್ರಿಹಳ್ಳಿ ಮರಿಯಪ್ಪ ಹಿರೇಮೆಗಳಗೆರೆ ವಿಜಯ್, ಬೆನ್ನಿಹಳ್ಳಿ ಕರಿಬಸವನಗೌಡ, ಬಸಪ್ಪ, ಸಿದ್ದನಗೌಡ ಇತರರು ಭಾಗವಹಿಸಿದ್ದರು,
ಹರಪನಹಳ್ಳಿ ತಾಲೂಕಿನ ವಿವಿಧೆಡೆ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡರು. ಮಂಡಲ ಅಧ್ಯಕ್ಷ ಲಕ್ಷ್ಮಣ ಇತರರು ಇದ್ದರು.