ಬಿಜೆಪಿ ಪದಾಧಿಕಾರಿ ಸ್ಥಾನಕ್ಕಾಗಿ ಕನಿಷ್ಠ 50 ಸದಸ್ಯರ ನೋಂದಣಿ ಕಡ್ಡಾಯ: ಕೃಷ್ಣ

| Published : Nov 17 2024, 01:17 AM IST

ಬಿಜೆಪಿ ಪದಾಧಿಕಾರಿ ಸ್ಥಾನಕ್ಕಾಗಿ ಕನಿಷ್ಠ 50 ಸದಸ್ಯರ ನೋಂದಣಿ ಕಡ್ಡಾಯ: ಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸೆ.2 ರಿಂದ ನ.15 ವರೆಗೂ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲಿ 11 ಕೋಟಿ, ರಾಜ್ಯದಲ್ಲಿ 75 ಲಕ್ಷ ಮತ್ತು ಮಂಡ್ಯ ಜಿಲ್ಲೆಯಲ್ಲಿ 2 ಲಕ್ಷ ಸದಸ್ಯತ್ವ ಮತ್ತು ತಾಲೂಕಿನಲ್ಲಿ 14 ಸಾವಿರಕ್ಕೂ ಹೆಚ್ಚು ಸದಸ್ಯತ್ವ ಪಡೆದಿರುವುದು ಸಂತಸ ವಿಚಾರ. ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರಿಗೂ ಬಿಜೆಪಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿವೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕು ಮತ್ತು ಜಿಲ್ಲಾ ಘಟಕದಲ್ಲಿ ಬಿಜೆಪಿ ಪದಾಧಿಕಾರಿ ಸ್ಥಾನಮಾನ ಪಡೆಯಲು ಕನಿಷ್ಠ 50 ಸದಸ್ಯರನ್ನು ಪಕ್ಷಕ್ಕೆ ನೋಂದಾಯಿಸುವುದು ಕಡ್ಡಾಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕೃಷ್ಣ ತಿಳಿಸಿದರು.

ಪಟ್ಟಣದ ಮೈಸೂರು ರಸ್ತೆಯ ಬಿಜೆಪಿ ಕಚೇರಿಯಲ್ಲಿ ನಡೆದ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಮಾತನಾಡಿ, ಸೆ.2 ರಿಂದ ನ.15 ವರೆಗೂ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲಿ 11 ಕೋಟಿ, ರಾಜ್ಯದಲ್ಲಿ 75 ಲಕ್ಷ ಮತ್ತು ಮಂಡ್ಯ ಜಿಲ್ಲೆಯಲ್ಲಿ 2 ಲಕ್ಷ ಸದಸ್ಯತ್ವ ಮತ್ತು ತಾಲೂಕಿನಲ್ಲಿ 14 ಸಾವಿರಕ್ಕೂ ಹೆಚ್ಚು ಸದಸ್ಯತ್ವ ಪಡೆದಿರುವುದು ಸಂತಸ ವಿಚಾರ ಎಂದು ಮಾಹಿತಿ ನೀಡಿದರು.

ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರಿಗೂ ಬಿಜೆಪಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿವೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸದಸ್ಯತ್ವ ನೋಂದಾಯಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ತಾಲೂಕಿನಲ್ಲಿ ಅತೀ ಹೆಚ್ಚು ಜನರನ್ನು ಸಂಪರ್ಕಿಸಿ ಅವರ ಮನವೊಲಿಸಿ 1534 ಸದಸ್ಯತ್ವ ನೋಂದಾಯಿಸಿದ ಹಲಗೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋದಿ ರವಿ ಅವರನ್ನು ಅಭಿನಂಧಿಸಲಾಯಿತು.

ಈ ವೇಳೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಕೃಷ್ಣ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಮಳವಳ್ಳಿ ಮಂಡಲ ಉಸ್ತುವಾರಿ ನರಸಿಂಹಚಾರ್, ಪ್ರಧಾನ ಕಾರ್ಯದರ್ಶಿ ಆನಂದ್, ನಾಗೇಶ್, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಬ್ಬಣಿ ಬಸವರಾಜು, ಜಾಲತಾಣದ ಅಧ್ಯಕ್ಷ ಉಮೇಶ್, ಮುಖಂಡರಾದ ಆರ್.ಗಂಗಾಧರ್, ರಘು ಸೇರಿದಂತೆ ಹಲವರು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.