ಸಾರಾಂಶ
ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ನಿಯಮಿತ 72ನೇ ವಾರ್ಷಿಕ ಮಹಾಸಭೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸದಸ್ಯರು, ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ನಿಯಮಿತ (ಫೇಡರೇಶನ್) 2023-24 ನೇ ಸಾಲಿನ 72 ನೇ ವಾರ್ಷಿಕ ಮಹಾಸಭೆಯು ಫೆಡರೇಶನ್ ನ ಅಧ್ಯಕ್ಷರಾದ ವಾಟೇರಿರ ಪಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ನಿಯಮಿತ (ಫೇಡರೇಶನ್) 2023-24 ನೇ ಸಾಲಿನ 72 ನೇ ವಾರ್ಷಿಕ ಮಹಾಸಭೆಯು ವಿರಾಜಪೇಟೆ ನಗರದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಕೊಡಗು ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ವಾಟೇರಿರ ಪಿ. ಬೋಪಣ್ಣ ಅವರು ಸಂಘವು 2023-24 ನೇ ಸಾಲಿನಲ್ಲಿ 12.76 ಕೋಟಿ ರು. ವ್ಯಾಪಾರ ವಹಿವಾಟು ಮಾಡಿದೆ. ಅದರೆಲ್ಲಿ ವ್ಯಾಪಾರ ಲಾಭ 85.31 ಲಕ್ಷ ರು. ಗಳಿಸಿರುತ್ತೇವೆ. ಇದರಲ್ಲಿ ಕಾಯ್ದಿರಿಸಿದ ಬಾಬ್ತು ಕಳೆದು 25.27 ಲಕ್ಷ ರು. ನಿವ್ವಳ ಲಾಭವನ್ನು ಗಳಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಹೆಚ್ಚಿನ ವಹಿವಾಟುಗಳು ಮಾಡಲು ಸಂಸ್ಥೆಯು ಮುಂದಾಗಿದೆ. ಕಳೆದ ಸಾಲಿನಲ್ಲಿ ನೂತನ ಅಕ್ಕಿಗಿರಣಿಯನ್ನು ಅಳವಡಿಸಲಾಗಿದ್ದು ರೈತಾಪಿ ವರ್ಗ ಮತ್ತು ಸದಸ್ಯರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ತಿಳಿಸಿದರು.ಸಭೆಯ ಆರಂಭದಲ್ಲಿ ಸಂಸ್ಥೆಯ ಸದಸ್ಯತ್ವನ್ನು ಹೊಂದಿ ಕಣ್ಮರೆಯಾದ ಸದಸ್ಯ ಬಂದುಗಳಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ನೆರೆವೇರಿಸಿದರು.
ಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷರಾದ ತಾತಂಡ ಎಂ ಬಿಪಿನ್ ಕಾವೇರಪ್ಪ, ಸಹ ಕಾರ್ಯದರ್ಶಿಗಳಾದ ಕೆ.ಎಂ. ಚಂದ್ರಕಾಂತ್, ನಿರ್ದೇಶಕರಾದ ಕಂಜಿತಂಡ ಮಂದಣ್ಣ, ಮುಲ್ಲೇಂಗಡ ಎಂ.ಕುಟ್ಟಪ್ಪ, ಮಾಚಿಮಂಡ ಬಿ.ವಸಂತ್, ಕೊಕ್ಕಂಡ ಎ.ಬಿದ್ದಪ್ಪ, ಚೇನಂಡ ಈ ಗೀರಿಶ್ ಪೂಣಚ್ಚ, ಮೂಕೊಂಡ ಶಶಿ ಸುಬ್ರಮಣಿ, ಕುಂಬೇರ ಮನುಕುಮಾರ್, ಅಂಜಪರವಂಡ ಎಂ ಮಂದಣ್ಣ, ಕೂತಂಡ ಸಚೀನ್ ಕುಟ್ಟಯ್ಯ, ಪುಲಿಯಂಡ ಎ. ಪೊನ್ನಣ್ಣ, ಕೆ.ಆರ್. ವಿನೋದ್, ಕರ್ತಚ್ಚಿರ ಲತಾ, ಪುಟ್ಟಿಚಂಡ ವೀಣಾ ಮಹೇಶ್, ಎಚ್.ಎನ್. ಶೇಖರ್, ಎಚ್.ಜಿ. ಆನಂದ ಉಪಸ್ಥಿತರಿದ್ದರು.ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ನಿಯಮಿತ (ಫೆಡರೇಶನ್) ನ ಅಧ್ಯಕ್ಷರಾದ ವಾಟೇರಿರ ಪಿ. ಬೋಪಣ್ಣ ಸ್ವಾಗತಿಸಿದರು. ಉಪಾಧ್ಯಕ್ಷರಾದ ತಾತಂಡ ಎಂ. ಬಿಪಿನ್ ಕಾವೇರಪ್ಪ ಅವರು ವಂದಿಸಿದರು.
ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ನಿಯಮಿತ (ಫೆಡರೇಶನ್)ನ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿ ಮಹಾಸಭೆಯಲ್ಲಿ ಹಾಜರಿದ್ದರು.