ಸಾರಾಂಶ
ಚನ್ನಪಟ್ಟಣ: ಎಲ್ಲ ಸಂಪತ್ತುಗಳಿಗಿಂದ ಆರೋಗ್ಯ ಸಂಪತ್ತು ತುಂಬಾ ಮುಖ್ಯ. ಉತ್ತಮ ಆರೋಗ್ಯದ ದೃಷ್ಟಿಯಿಂದ ನಿಯಮಿತವಾಗಿ ತಪಾಸಣೆಗೆ ಒಳಪಡುವುದು ಅತ್ಯಗತ್ಯ ಎಂದು ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್‌ನ ಪಾರ್ಥಸಾರಥಿ ತಿಳಿಸಿದರು.
ಚನ್ನಪಟ್ಟಣ: ಎಲ್ಲ ಸಂಪತ್ತುಗಳಿಗಿಂದ ಆರೋಗ್ಯ ಸಂಪತ್ತು ತುಂಬಾ ಮುಖ್ಯ. ಉತ್ತಮ ಆರೋಗ್ಯದ ದೃಷ್ಟಿಯಿಂದ ನಿಯಮಿತವಾಗಿ ತಪಾಸಣೆಗೆ ಒಳಪಡುವುದು ಅತ್ಯಗತ್ಯ ಎಂದು ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್‌ನ ಪಾರ್ಥಸಾರಥಿ ತಿಳಿಸಿದರು.
ತಾಲೂಕಿನ ತಗಚಗೆರೆ ಗ್ರಾಮದಲ್ಲಿ ನಗರದ ಚಂದ್ರು ಡಯಾಗ್ನೋಷ್ಟಿಕ್ ಸೆಂಟರ್, ದೃಷ್ಟಿ ಆಸ್ಪತ್ರೆ, ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್, ಜೀವಾಮೃತ ಬ್ಲಡ್ ಬ್ಯಾಂಕ್ ಹಾಗೂ ತಗಚಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಮಧುಮೇಹ, ರಕ್ತದೊತ್ತಡ, ಕಣ್ಣಿನ ತಪಾಸಣಾ ಶಿಬಿರನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೋಗ ಉಲ್ಭಣಿಸುವ ಮುನ್ನ ಅದನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಆರೋಗ್ಯ ಸಮಸ್ಯೆಯನ್ನು ಪತ್ತೆಹಚ್ಚುವಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗಿವೆ. ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಆರೋಗ್ಯ ಶಿಬಿರಗಳು ವರದಾನವಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಧುಮೇಹ ಕುರಿತು ಜಾಗ್ರತೆ ವಹಿಸುವುದು ಅವಶ್ಯ. ಕಾಯಿಲೆ ಬಂದು ಉಲ್ಭಣಿಸುವುದಕ್ಕಿಂತ ಮುನ್ನ ಪರೀಕ್ಷೆ ಮಾಡಿಸಿಕೊಂಡು ಕಾಯಿಲೆ ಬಾರದಂತೆ ಎಚ್ಚರಿಕೆ ವಹಿಸುವುದು ಉತ್ತಮ. ನಮ್ಮ ಆಹಾರ ಪದ್ಧತಿ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ, ಎಷ್ಟೋ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದರು.ಆರೋಗ್ಯ ತಪಾಸಣಾ ಶಿಬಿರದಲ್ಲಿ 200ಕ್ಕೂ ಹೆಚ್ಚು ಮಂದಿ ವಿವಿಧರೀತಿಯ ತಪಾಸಣೆಗೊಳಪಟ್ಟರು. ಹಾಲು ಉತಪಾದಕರ ಸಹಕಾರ ಸಂಘದ ಪ್ರದೀಪ್, ಮಾಜಿ ಕಾರ್ಯದರ್ಶಿ ದೇವರಾಜು, ಚಂದ್ರು ಡಯಾಗ್ನೋಷ್ಟಿಕ್ ಸೆಂಟರ್‌ನ ಗಂಗಾಧರ್, ಅನಿಲ್ ಇತರರಿದ್ದರು.ಪೊಟೋ26ಸಿಪಿಟಿ2:
ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್‌ನ ಪಾರ್ಥಸಾರಥಿ ಉದ್ಘಾಟಿಸಿದರು.