ಸಾರಾಂಶ
ಔಷಧದ ರೀತಿಯಲ್ಲಿ ನಿತ್ಯವೂ ಎಚ್ಚರಿಕೆಯಿಂದ ನಿಯಮಿತವಾಗಿ ಆಹಾರ ಬಳಕೆ ಮಾಡಿದಲ್ಲಿ ಆಸ್ಪತ್ರೆಗೆ ತೆರಳುವ ಸಂಭವವೇ ಒದಗಿ ಬರುವುದಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯಪಟ್ಟರು. ಶಿಕ್ಷಣದ ಜತೆಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಅಂಗನವಾಡಿಯ ಮೂಲಕ ಪೌಷ್ಟಿಕ ಆಹಾರ ನೀಡುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಆರೋಗ್ಯವಂತ ಮಕ್ಕಳು ದೇಶಕ್ಕೆ ಮುಖ್ಯವಾಗಿದೆ. ಹಾಗಾಗಿ ಪ್ರಧಾನ ಮಂತ್ರಿ ಮೋದಿ ಪೋಷಣ್ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮುಂದಾಗುತ್ತಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಔಷಧದ ರೀತಿಯಲ್ಲಿ ನಿತ್ಯವೂ ಎಚ್ಚರಿಕೆಯಿಂದ ನಿಯಮಿತವಾಗಿ ಆಹಾರ ಬಳಕೆ ಮಾಡಿದಲ್ಲಿ ಆಸ್ಪತ್ರೆಗೆ ತೆರಳುವ ಸಂಭವವೇ ಒದಗಿ ಬರುವುದಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯಪಟ್ಟರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಿ ಹಾಗೂ ದಿಂಡಗೂರು ಅಂಗನವಾಡಿ ವೃತ್ತದಿಂದ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹೊಲ ಗದ್ದೆಯಲ್ಲಿ ಸಾಕಷ್ಟು ಔಷಧಿ ಸಸ್ಯಗಳು ಬೆಳೆಯುತ್ತವೆ, ಕೈತೋಟದಲ್ಲಿಯೂ ಹರಿಸು ತರಕಾರಿ ಇರುತ್ತದೆ ಇದನ್ನು ಸಕಾಲಕ್ಕೆ ಸೇವನೆ ಮಾಡಿದರೆ ಯಾವುದೇ ರೋಗಗಳು ಬರುವುದಿಲ್ಲ ಎಂದರು.
ಶಿಕ್ಷಣದ ಜತೆಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಅಂಗನವಾಡಿಯ ಮೂಲಕ ಪೌಷ್ಟಿಕ ಆಹಾರ ನೀಡುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಆರೋಗ್ಯವಂತ ಮಕ್ಕಳು ದೇಶಕ್ಕೆ ಮುಖ್ಯವಾಗಿದೆ. ಹಾಗಾಗಿ ಪ್ರಧಾನ ಮಂತ್ರಿ ಮೋದಿ ಪೋಷಣ್ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮುಂದಾಗುತ್ತಿದ್ದಾರೆ ಎಂದರು.ತಾಪಂ ಇಒ ಹರೀಶ್ ಮಾತನಾಡಿ, ಹೊಸದಾಗಿ ಅಂಗನ ವಾಡಿ ಸಹಾಯಕಿಯರು ಹಾಗೂ ಕಾರಕರ್ತೆಯರ ಹುದ್ದೆ ಅಲಂಕರಿಸುವವರು ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು. ಮಹಿಳೆಯರು ಪೌಷ್ಟಿಕ ಆಹಾರ ಕಡೆ ಗಮನ ಹರಿಸುವುದಿಲ್ಲ. ಮನೆಯಲ್ಲಿ ಎಲ್ಲರಿಗೂ ಪೌಷ್ಟಿಕ ಆಹಾರ ಕೊಟ್ಟು ತಾವು ಉಳಿಕೆ ಆಹಾರ ಸೇವನೆ ಮಾಡುತ್ತಾರೆ ಇದರಿಂದ ಸ್ತ್ರೀಯರು ಮುಪ್ಪಿನಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಆಪೌಷ್ಟಿಕತೆ ನಿವಾರಣೆ ಮಾಡಲು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಆರೋಗ್ಯ ಇಲಾಖೆ ಸಹಕಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘದವರು ಪಾಲ್ಗೊಂಡು ಸರ್ಕಾರ ಸುತ್ತೋಲೆಯಂತೆ ಯೋಜನೆಗಳನ್ನು ಸಕಾಲಕ್ಕೆ ಪಡೆದುಕೊಳ್ಳಿ ಎಂದರು. ಸುಕನ್ಯಾ ಸಮೃದ್ಧಿ ಯೋಜನೆಯ ಇಬ್ಬರು ಫಲಾನುಭವಿಗಳಿಗೆ ವಾರ್ಷಿಕ ೩೦೦೦ ನೀಡುವ ಅಂಚೆ ಕಚೇರಿ ಪಾಸ್ ಪುಸ್ತಕ ವಿತರಣೆ, ೧೦೦ ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಸರ್ಕಾರದಿಂದ ಟಿವಿ ವಿತರಣೆ, ೩೬ ಅಂಗವಾಡಿ ಕಾರ್ಯಕರ್ತೆಯರು ಹಾಗೂ ೬೯ ಸಹಾಯಕಿಯರು ನೇಮಕಾತಿ ಪತ್ರ ವಿತರಿಸಲಾಯಿತು. ಮಹಿಳಾ ಇಲಾಖೆ ಉಪನಿರ್ದೇಶಕ ಧರಣಿ ಕುಮಾರ್, ಸಿಡಿಪಿಒ ಇಂದ್ರಾ, ಬಿಇಒ ದೀಪಾ, ಮೇಲ್ವಿ ಚಾರಕಿ ಮಮತಾ, ಪಾರ್ವತಮ್ಮ ರತ್ನಮ್ಮ ಇತರರಿದ್ದರು.ಅನುಪಾತ ವ್ಯತ್ಯಾಸ ಅಂಗದಂತೆ ನಿಗಾ ಅಗತ್ಯ:
ತಾಲೂಕಿನಲ್ಲಿ ೮ ಮಕ್ಕಳು ಅಪೌಷ್ಟಿಕತೆ ಇದೆ ಇದನ್ನು ಹೋಗಲಾಡಿಸಲು ಇಲಾಖೆ ಮುಂದಾಗಬೇಕು. ತಾಲೂಕಿನಲ್ಲಿ ಒಂದರಿಂದ ಆರು ವರ್ಷದ ಒಳಗೆ ೫೨೩೭ ಗಂಡು ಮಕ್ಕಳು, ೫೨೬೩ ಹೆಣ್ಣು ಮಕ್ಕಳು ಇದ್ದಾರೆ. ಗಂಡು ಹಾಗೂ ಹೆಣ್ಣು ಅನುಪಾತ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ದೇಶದ ಎಲ್ಲಾ ರಾಜ್ಯಗಳು ಗಮನಹರಿಸಬೇಕಾಗಿದೆ. ಅನುಪಾತದಲ್ಲಿ ವ್ಯತ್ಯಾಸವಾದರೆ ಸಮಾಜಕ್ಕೆ ಮಾರಕವಾಗಿಲಿದೆ ಎಂದರು.೧೧ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ:ತಾಲೂಕಿನಲ್ಲಿ ೧೩೦ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಹಳೆಶಾಲೆಗಳು, ಸಮುದಾಯ ಭವನದಲ್ಲಿ ನಡೆಯುತ್ತಿದೆ. ಸರ್ಕಾರಕ್ಕೆ ಈ ಬಗ್ಗೆ ಒತ್ತಡ ಹಾಕಿದೆ ಮೇಲೆ ೧೧ ಅಂಗನವಾಡಿ ಕೇಂದ್ರಕ್ಕೆ ನೂತನೆ ಕಟ್ಟಡ ಮಂಜೂರು ಮಾಡಿದೆ. ಒಂದು ವಾರದಲ್ಲಿ ಟೆಂಡರ್ ಕರೆದು ಕಾಮಗಾರಿ ಮಾಡಿಸಿ ತಿಂಗಳ ಒಳಗೆ ೧೧ ಅಂಗನವಾಡಿ ನೂತನ ಕಟ್ಟಡ ಲೋಕಾರ್ಪಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.