ಹೊಸಕೋಟೆ: ಸುಮಾರು ಮೂರು–ನಾಲ್ಕು ದಶಕಗಳ ಕನಸಾಗಿದ್ದ ಚನ್ನಬೈರಗೌಡ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಇದೀಗ ಕಾಲ ಕೂಡಿ ಬಂದಿದ್ದು, ಮೊದಲ ಹಂತದಲ್ಲಿ ಸುಮಾರು ೩.೫ ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು
ಹೊಸಕೋಟೆ: ಸುಮಾರು ಮೂರು–ನಾಲ್ಕು ದಶಕಗಳ ಕನಸಾಗಿದ್ದ ಚನ್ನಬೈರಗೌಡ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಇದೀಗ ಕಾಲ ಕೂಡಿ ಬಂದಿದ್ದು, ಮೊದಲ ಹಂತದಲ್ಲಿ ಸುಮಾರು ೩.೫ ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ 3.5ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ತಾವು ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಕ್ರೀಡಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ಚನ್ನಬೈರಗೌಡ ಕ್ರೀಡಾಂಗಣವನ್ನು ಮಾದರಿ ಕ್ರೀಡಾಂಗಣವನ್ನಾಗಿ ರೂಪಿಸುವ ಆಲೋಚನೆ ಹೊಂದಿದ್ದೆ. ಕಳೆದ ಆರು–ಎಂಟು ವರ್ಷಗಳಿಂದ ಮನಸ್ಸಿನಲ್ಲಿದ್ದ ಯೋಜನೆ ಇದೀಗ ಅನುಷ್ಠಾನಗೊಳ್ಳುತ್ತಿದೆ. ಕ್ರೀಡಾಪಟುಗಳೊಂದಿಗೆ ಕಳೆದ ಮೂರು ತಿಂಗಳಿAದ ಸಮಾಲೋಚನೆ ನಡೆಸಿ, ಅವರ ಅಗತ್ಯಗಳನ್ನು ಆಧರಿಸಿ ಕ್ರೀಡಾಂಗಣದ ವಿನ್ಯಾಸ ರೂಪಿಸಲಾಗಿದೆ. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲು ಅನುಕೂಲವಾಗುವಂತೆ 400 ಮೀಟರ್‌ನ ೮ ಟ್ರ‍್ಯಾಕ್‌ಗಳ ಆಸ್ಫಾಲ್ಟ್ ಟ್ರ‍್ಯಾಕ್ ನಿರ್ಮಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಇದೇ ಟ್ರ‍್ಯಾಕ್‌ಗೆ ಸಿಂಥೆಟಿಕ್ ಮೇಲ್ಮೈ ಅಳವಡಿಸುವ ಉದ್ದೇಶವಿದೆ. 400 ಮೀಟರ್ ಟ್ರ‍್ಯಾಕ್‌ನ ಒಳಭಾಗ ಮತ್ತು ಹೊರಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಕ್ರೀಡಾಪಟುಗಳ ಅನುಕೂಲಕ್ಕಾಗಿ ಸುಮಾರು ೮ ಅಡಿ ಅಗಲದ ಪೇವರ್ ವಾಕಿಂಗ್ ಟ್ರ‍್ಯಾಕ್ ನಿರ್ಮಿಸಲಾಗುತ್ತಿದೆ. ಕ್ರೀಡಾಂಗಣದ ಸುತ್ತಲೂ ಸುಮಾರು 419 ಮೀಟರ್ ವಾಕಿಂಗ್ ಟ್ರ‍್ಯಾಕ್ ಇರಲಿದೆ ಎಂದರು.
ಮುಖ್ಯ ರಸ್ತೆಯಿಂದ ಕ್ರೀಡಾಂಗಣಕ್ಕೆ ಆಕರ್ಷಕ ಪ್ರವೇಶ ದ್ವಾರ ಹಾಗೂ ಆರ್ಚ್ ನಿರ್ಮಿಸುವ ಜೊತೆಗೆ, ಹಳೆಯ ಗ್ಯಾಲರಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು. ಹಳೆಯ ಶೀಟ್‌ಗಳನ್ನು ತೆರವುಗೊಳಿಸಿ, ಹೊಸ ಆಸನ ವ್ಯವಸ್ಥೆ, ಗ್ರಾನೈಟ್ ಹಾಗೂ ಪೇಂಟಿAಗ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.ಮುಂದಿನ ಹಂತಗಳಲ್ಲಿ ಕ್ರೀಡಾಂಗಣದ ಸುತ್ತಲೂ ಜರ್ಮನ್ ಟೆಂಟ್‌ಗಳನ್ನು ಅಳವಡಿಸುವುದು ಸೇರಿದಂತೆ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈಗ ೩.೫ ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು 3.5 ಕೋಟಿ ಅನುದಾನ ತಂದು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕ್ರೀಡಾಪಟುಗಳಿಗೆ ಮೂಲಸೌಕರ್ಯ ಕೊರತೆ:ದೇಶದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಆದರೆ ಪ್ರತಿಭೆ ಇದ್ದರೂ ಸೂಕ್ತ ಶೂ, ಕ್ರೀಡಾ ಪರಿಕರ, ಪೌಷ್ಟಿಕ ಆಹಾರ, ತರಬೇತಿ ಹಾಗೂ ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಗತ್ಯ ಆರ್ಥಿಕ ನೆರವಿನ ಕೊರತೆ ಕಾಡುತ್ತಿದೆ. ಈ ಕೊರತೆಯನ್ನು ನಿವಾರಿಸಲು ಮೂಲಸೌಕರ್ಯ ಕಲ್ಪಿಸುವುದು ಅಗತ್ಯ. ಅದರ ಸಣ್ಣ ಹೆಜ್ಜೆಯಾಗಿ ಚನ್ನಬೈರಗೌಡ ಕ್ರೀಡಾಂಗಣಕ್ಕೆ ೩.೫ ಕೋಟಿ ಅನುದಾನ ವಿನಿಯೋಗಿಸಲಾಗಿದೆ ಎಂದು ಹೇಳಿದರು.
ಇತ್ತೀಚಿನ ಏಷ್ಯನ್ ಗೇಮ್ಸ್ನಲ್ಲಿ ಭಾರತ ಉತ್ತಮ ಸಾಧನೆ ಮಾಡಿರುವುದನ್ನು ಉಲ್ಲೇಖಿಸಿದ ಶಾಸಕರು, ಕ್ರೀಡಾಪಟುಗಳ ಸಾಧನೆ ದೇಶಕ್ಕೆ ಹೆಮ್ಮೆ ತರುವಂತಹದ್ದು. ಇದೇ ರೀತಿಯಲ್ಲಿ ಹೊಸಕೋಟೆ ಭಾಗದ ಕ್ರೀಡಾಪಟುಗಳಿಗೂ ಉತ್ತಮ ಅವಕಾಶಗಳು ದೊರೆಯಬೇಕು. ಸ್ಥಳೀಯ ಪ್ರತಿಭೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವುದು ನಮ್ಮ ಉದ್ದೇಶ ಎಂದರು.ಬಿಎAಆರ್ ಡಿಎ ಮಾಜಿ ಅಧ್ಯಕ್ಷ ಸಿ. ಜಯರಾಜ್ ಮಾತನಾಡಿ ಕ್ರೀಡಾಂಗಣ ಎಂದರೆ ಒಂದು ರೀತಿ ತಾಯಿ ಇದ್ದ ಹಾಗೆ. ಇಲ್ಲಿ ವಾಕಿಂಗ್ ಮಾಡುವ ಕ್ರೀಡೆಗಳನ್ನು ಆಡುವವರು ಮಕ್ಕಳಿದ್ದ ಹಾಗೆ. ಇಂತಹ ಕ್ರೀಡಾಂಗಣದಲ್ಲಿ ದಶಕಗಳಿಂದಲೂ ಕ್ರೀಡಾಪಟುಗಳು ತರಬೇತಿ ಪಡೆದು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯ ಮಾಡಿದ್ದಾರೆ. ಕ್ರೀಡಾಂಗಣದ ಅಭಿವೃದ್ಧಿಗೆ ಭೂಮಿ ಪೂಜೆ ಜೊತೆಗೆ ರಾಜ್ಯದ ವಿವಿಧ ಮೂಲೆಗಳಲ್ಲಿ ವಾಸವಿರುವ ಆ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸಿ ಗೌರವಿಸುವ ಕೆಲಸ ಮಾಡುವ ಅವಕಾಶ ದೊರೆತಿದೆ ಎಂದರು.
ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಬೈರೇಗೌಡ, ಬಿ ಎಂ ಆರ್ ಡಿ ಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾಜು, ಮಾಜಿ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.ಫೋಟೋ : 5 ಹೆಚ್ ಎಸ್ ಕೆ 1
ಹೊಸಕೋಟೆ ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದ ೩ ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ಶರತ್ ಬಚ್ಚೆಗೌಡ ಭೂಮಿ ಪೂಜೆ ನೆರವೇರಿಸಿದರು.