ಸಾರಾಂಶ
ಸಮಾನ ಮನಸ್ಕರ ಸಂಘಟನೆಗಳು, ಜಾತ್ಯತೀತ ಸಂಘಟನೆಗಳು ಮಹಾತ್ಮ ಗಾಂಧೀಜಿ ಹುತಾತ್ಮ ದಿನವನ್ನು ಸೌಹಾರ್ದ ದಿನವಾಗಿ ರಾಜ್ಯಾದ್ಯಂತ ಆಚರಿಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಅಶೋಕ ವೃತ್ತದ ಬಳಿ ಸೇರಿದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸೌಹಾರ್ದ ಮಾನವ ಸರಪಳಿ ರಚಿಸಿದರು.
ಕೊಪ್ಪಳ: ಮನುಷ್ಯನು ಜಾತಿ, ಮತ, ಪಂಥಗಳನ್ನು ಮೀರಿ ಬೆಳೆಯಬೇಕು. ಆಗ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಸಮಾನ ಮನಸ್ಕರ ಸಂಘಟನೆಗಳು, ಜಾತ್ಯತೀತ ಸಂಘಟನೆಗಳು ಮಹಾತ್ಮ ಗಾಂಧೀಜಿ ಹುತಾತ್ಮ ದಿನವನ್ನು ಸೌಹಾರ್ದ ದಿನವಾಗಿ ರಾಜ್ಯಾದ್ಯಂತ ಆಚರಿಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಅಶೋಕ ವೃತ್ತದ ಬಳಿ ಸೇರಿದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸೌಹಾರ್ದ ಮಾನವ ಸರಪಳಿ ರಚಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ಕೋಮುವಾದಿ ಶಕ್ತಿಗಳು ವಿಚಾರವಂತರನ್ನು ಕೊಲ್ಲುತ್ತಿವೆ. ಗೌರಿ ಲಂಕೇಶ್, ಎಂ.ಎಂ. ಕಲ್ಬುರ್ಗಿ, ಪಾನ್ಸರೆ ಮುಂತಾದ ವಿಚಾರವಾದಿಗಳನ್ನು ಹತ್ಯೆಗೈದ ಕೋಮುವಾದಿಗಳು ರಾಜ್ಯದಲ್ಲಿ ಅನಗತ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ನಾವು ಜಾತಿ, ಮತ, ಪಂಥಗಳನ್ನು ಮೀರಿ ಬೆಳೆಯಬೇಕಾಗಿದೆ ಎಂದರು.ನಾವೆಲ್ಲರೂ ಒಗ್ಗಟ್ಟಾದಾಗ ಮಾತ್ರ ದೇಶವನ್ನು ಉಳಿಸಲು ಸಾಧ್ಯ. ಜತೆಗೆ ಡಾ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಸಹ ನಾವು ರಕ್ಷಿಸಬೇಕಾಗಿದೆ. ಸಂವಿಧಾನ ನಾಶ ಮಾಡಲಿಕ್ಕೆ ಬಂದಿದ್ದೇವೆ ಎಂದು ಬಿಜೆಪಿಯವರು ಹೇಳಿರುವುದು ಸ್ಪಷ್ಟವಿದೆ. ಮುಂಬರುವ ದಿನಗಳಲ್ಲಿ ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಕೋಮುವಾದಿಗಳನ್ನು ಮಟ್ಟ ಹಾಕಲು ನಾವುಗಳೆಲ್ಲ ಸಂಘಟಿತ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಹೇಳಿದರು.ಮಾನವ ಸರಪಳಿ ಕಾರ್ಯಕ್ರಮ ಮುಕ್ತಾಯದ ನಂತರ ಸಂಘಟನೆಗಳ ಮುಖಂಡರು ಗಾಂಧಿ ವೃತ್ತಕ್ಕೆ ತೆರಳಿ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಹುತಾತ್ಮ ಗಾಂಧೀಜಿ ಪರವಾಗಿ ಘೋಷಣೆಗಳನ್ನು ಕೂಗಿದರು.ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್, ಮಹಾಂತೇಶ್ ಕೋತಬಾಳ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ, ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರ ಕಾರ್ಮಿಕರ ಹಿತರಕ್ಷಣಾ ಸಂಘ (ಎಐಟಿಯುಸಿ ಸಂಯೋಜಿತ) ಅಧ್ಯಕ್ಷ ಮೌಲಾಸಾಬ್ ಕಪಾಲಿ, ಗೈಬುಸಾಬ್ ಮಾಳೆಕೊಪ್ಪ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಸಿಐಟಿಯು ಜಿಲ್ಲಾ ಮುಖಂಡ ಖಾಸೀಮ್ ಸರ್ದಾರ್,ಜಿ. ನಾಗರಾಜ, ಸುಂಕಪ್ಪ ಗದಗ, ಹನುಮೇಶ ಕಲ್ಮಂಗಿ, ಭಾಸ್ಕರ್ ರೆಡ್ಡಿ, ಮಹೆಬೂಬ್ ದಫೇದಾರ್, ಗೌಸ್ ನದಾಫ್. ಬಸವರಾಜ್ ಕಂಟಿ, ಮೆಹಬೂಬ್ ಮುಲ್ಲಾ, ಕುಮಾರ್ ಹೊಸಕನಕಪುರ, ನಿಂಗು ಬೆಣಕಲ್, ಸಂಜಯ್ ದಾಸ್ ಕೌಜಗೇರಿ, ಸಿದ್ದು ಹಡಪದ, ಎಂ.ಕೆ. ಸಾಹೇಬ್, ಅಭಿಗೌಡ, ಸೈಯದ್ ನಾಸೀರ್ ಕಂಠಿ, ಕೆ.ಬಿ. ಗೋನಾಳ, ಶರಣು ಗಡ್ಡಿ, ಗವಿಸಿದ್ದಪ್ಪ ಹಲಗಿ ಕುಣಿಕೇರಿ, ಭಾಗ್ಯನಗರ ಬಳಿಯ ನವನಗರದ ಇರುವಾತನು ಚರ್ಚಿನ ಫಾ.ಚನ್ನಬಸಪ್ಪ ಅಪ್ಪಣ್ಣವರ್ ಭಾಗವಹಿಸಿದ್ದರು.