ಸಾರಾಂಶ
ಬರೀ ಆಧುನಿಕ ಜೀವನದ ಬೆನ್ನು ಬಿದ್ದಿದೆ.ಇದರಿಂದ ಸಂಬಂಧಗಳು ಹಳಸಿ ಹೋಗುತ್ತಿರುವುದು ಬೇಸರದ ಸಂಗತಿ
ಧಾರವಾಡ: ಪ್ರಸ್ತುತ ಯವ ಜನಾಂಗ ಬರೀ ಮೊಬೈಲ್ ಗೀಳಿಗೆ ಸಿಲುಕಿಕೊಂಡಿದೆ.ಇದರಿಂದ ಜೀವನದ ಮೌಲ್ಯ ಗಾಳಿ ತೂರಿ ಸಂಬಂಧಗಳಿಂದ ದೂರ ಸರಿಸುತ್ತಿರುವುದು ಆತಂಕದ ಸಂಗತಿ ಎಂದು ಜಾನಪದ ಕಲಾವಿದ ಶಂಬಯ್ಯ ಹಿರೇಮಠ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಿ.ಎಸ್.ವಾಣಿಜ್ಯ ಕಾಲೇಜು ಜಂಟಿಯಾಗಿ ಏರ್ಪಡಿಸಿದ್ದ ಬಸಪ್ಪ ಅಂದಾನೆಪ್ಪ ಉಪ್ಪಿನ,ನಿರ್ಮಲಾ ದೇವಿ ಉಪ್ಪಿನ, ನಿಂಗಪ್ಪ ಅರಳಿಕಟ್ಟಿ, ರಾಮಣ್ಣ ಸಿದ್ದಪ್ಪ ದಂಡಿನ, ಬಸಪ್ಪ ಕಲ್ಲೂರ ಹಾಗೂ ಪ್ರೊ. ಭೂಪಾಲಪ್ಪ ಬಾಗಿ ದತ್ತಿಯಲ್ಲಿ ಮಾತನಾಡಿ, ಆಯಾ ಪ್ರದೇಶದ ಸಂಸ್ಕೃತಿ ಯುವ ಪೀಳಿಗೆ ಮರೆಯುತ್ತಿದ್ದು, ಬರೀ ಆಧುನಿಕ ಜೀವನದ ಬೆನ್ನು ಬಿದ್ದಿದೆ.ಇದರಿಂದ ಸಂಬಂಧಗಳು ಹಳಸಿ ಹೋಗುತ್ತಿರುವುದು ಬೇಸರದ ಸಂಗತಿ ಎಂದರು.ನಂತರ ಶಂಭಯ್ಯ ಹಿರೇಮಠ ಹಾಗೂ ಸಂಗಡಿಗರು ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಪ್ರಾಚಾರ್ಯ ಡಾ. ಕಮಲಾ ಢವಳೆ ಅಧ್ಯಕ್ಷತೆ ವಹಿಸಿದ್ದರು. ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿಗಳಿದ್ದರು. ಡಾ. ಪರಿಮಳಾ ಕೋಟಿ ಸ್ವಾಗತಿಸಿದರು. ಡಾ. ಎಸ್.ವಿ. ಹೆಗಡಾಳ ವಂದಿಸಿದರು.