ಸಾರಾಂಶ
ರಾಮನಗರ: ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಪದಾಧಿಕಾರಿಗಳು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘಟನೆ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ ನೇತೃತ್ವದಲ್ಲಿ ಕಾರ್ಮಿಕ ಅಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡದಿದ್ದರೆ ಹೋರಾಟದ ಹಾದಿ ಹಿಡಿಯುವುದಾಗಿ ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವಾಗಿ ಹಿಂದಿನ ಸರ್ಕಾರ ಘೋಷಣೆ ಮಾಡಿದಂತೆ ಹಣ ನೀಡಬೇಕು. ಕಾರ್ಮಿಕ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಸಿಗಬೇಕು ಎಂಬ ಉದ್ದೇಶದಿಂದ ಅಂದಿನ ಸರ್ಕಾರ ಕಾರ್ಮಿಕರ ಮಕ್ಕಳಿಗೆ ಹೆಚ್ಚಿನ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಿತ್ತು. ಆದರೆ, ಈಗಿನ ಸರ್ಕಾರ ತಮ್ಮ 5 ಗ್ಯಾರಂಟಿಗಳ ನೀಡುವ ಬರದಲ್ಲಿ ಕಾರ್ಮಿಕ ಮಕ್ಕಳಿಗೆ ಅನ್ಯಾಯ ಮಾಡಿ ಶೈಕ್ಷಣಿಕ ಸಹಾಯಧನದಲ್ಲಿ ಬಹಳ ಇಳಿಕೆ ಮಾಡಿದೆ ಎಂದು ದೂರಿದರು.
ಈ ಹಣದಲ್ಲಿ ಕಾರ್ಮಿಕರ ಮಕ್ಕಳು ಉನ್ನತ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಹಿಂದಿನ ಸರ್ಕಾರ ಘೋಷಣೆ ಮಾಡಿದಂತೆ ಹಣವನ್ನ ಬಿಡುಗಡೆ ಮಾಡಬೇಕು. 2022-23ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿಯನ್ನು ಬಿಡುಗಡೆಗೊಳಿಸಬೇಕು ಹಾಗೂ ಆನ್ ಲೈನ್ ತಾಂತ್ರಿಕ ದೋಷವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.ಈಗಿನ ಸರ್ಕಾರ ಕಾರ್ಮಿಕರ ಕಾರ್ಡ್ ಮಾಡಿಸಲು ಮತ್ತು ರಿನಿವಲ್ ಮಾಡಿಸಲು ಮನೆಯ ಖಾತ ನಂಬರ್ ಜೆರಾಕ್ಸ್ ಕೇಳಿರುವುದು ಕಾರ್ಮಿಕರಿಗೆ ಅತಿ ದೊಡ್ಡ ಸಮಸ್ಯೆಯಾಗಿದೆ ಮನೆಯ ಮಾಲೀಕ ಕೆಲಸ ಮಾಡುವ ಕಾರ್ಮಿಕನಿಗೆ ಯಾಕೆ ಖಾತ ನಂಬರ್ ಜೆರಾಕ್ಸ್ ಯಾಕೆ? ಕೊಡಬೇಕೆಂದು ಪ್ರಶ್ನೆ ಮಾಡುವ ಮುಖಾಂತರ ಕಾರ್ಮಿಕರ ಕೆಲಸಕ್ಕೆ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ಖಾತ ನಂಬರ್ ಜೆರಾಕ್ಸ್ ಕೇಳುವುದನ್ನು ನಿಲ್ಲಿಸಬೇಕು. ಹಿಂದಿದ್ದ ದಾಖಲಾತಿಗಳನ್ನೇ ಪಡೆದು ತಕ್ಷಣದಿಂದ ಆನ್‌ಲೈನ್ ಸಮಸ್ಯೆ ಸರಿಪಡಿಸಿ 2022-23ನೇ ಸಾಲಿನ ಶೈಕ್ಷಣಿಕ ಸಹಾಯಧನವನ್ನು, ಬಿಡುಗಡೆಗೊಳಿಸಬೇಕು. 2023-24 ನೇ ಸಾಲಿನ ಶೈಕ್ಷಣಿಕ ಸಹಾಯಧಾನದ ಅರ್ಜಿಯನ್ನು ಬಿಡುಗಡೆಗೊಳಿಸಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಕಿರಣ್ , ಜಿಲ್ಲಾ ಉಪಾಧ್ಯಕ್ಷ ಬೆಟ್ಟಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನಯ್, ಮುಖಂಡರಾದ ರಘು, ಸ್ವಾಮಿ, ಮಲ್ಲೇಶ, ಕಂಚಿಸ್ವಾಮಿ , ಪ್ರತಾಪ್, ಸುನೀಲ್, ಪ್ರಶಾಂತ, ಚಂದನ ಮತ್ತಿತರರು ಹಾಜರಿದ್ದರು.11ಕೆಆರ್ ಎಂಎನ್ 1.ಜೆಪಿಜಿರಾಮನಗರ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಪದಾಧಿಕಾರಿಗಳು ಮನವಿ ಸಲ್ಲಿಸಿದರು.