ನದಾಫ್‌-ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಹಣ ನೀಡಿ: ಶಾಬುದ್ದೀನ್‌ ನೂರಪಾಷಾ

| Published : Jul 21 2024, 01:19 AM IST

ನದಾಫ್‌-ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಹಣ ನೀಡಿ: ಶಾಬುದ್ದೀನ್‌ ನೂರಪಾಷಾ
Share this Article
  • FB
  • TW
  • Linkdin
  • Email

ಸಾರಾಂಶ

ನದಾಫ್‌-ಪಿಂಜಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಲಾಗಿದೆಯಾದರೂ ಇದುವರೆಗೂ ಅದು ಕಾರ್ಯಾಗತವಾಗಿಲ್ಲ. ಹೀಗಾಗಿ ಕೂಡಲೇ ಕಾರ್ಯಗತ ಮಾಡಬೇಕು ಮತ್ತು ಅನುದಾನ ನೀಡಬೇಕು ಎಂದು ಪಿಂಜಾರ/ನದಾಫ್ ಸಂಘದ ರಾಜ್ಯ ಕೋಶಾಧ್ಯಕ್ಷ ಶಾಬುದ್ದೀನ್‌ ನೂರಪಾಷಾ ಒತ್ತಾಯಿಸಿದ್ದಾರೆ.

ಕೊಪ್ಪಳ: ರಾಜ್ಯ ಸರ್ಕಾರವು ನದಾಫ್‌-ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಜು. ೨೨ರಂದು ಎಲ್ಲ ಜಿಲ್ಲೆ, ತಾಲೂಕು ಮಟ್ಟದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪಿಂಜಾರ/ನದಾಫ್ ಸಂಘದ ರಾಜ್ಯ ಕೋಶಾಧ್ಯಕ್ಷ ಶಾಬುದ್ದೀನ್‌ ನೂರಪಾಷಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಾಫ್‌-ಪಿಂಜಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಲಾಗಿದೆಯಾದರೂ ಇದುವರೆಗೂ ಅದು ಕಾರ್ಯಾಗತವಾಗಿಲ್ಲ. ಹೀಗಾಗಿ ಕೂಡಲೇ ಕಾರ್ಯಗತ ಮಾಡಬೇಕು ಮತ್ತು ಅನುದಾನ ನೀಡಬೇಕು ಎಂದು ಒತ್ತಾಯಿಸಲಾಗುವುದು. ರಾಜ್ಯಾದ್ಯಂತ ಜು. ೨೨ರಂದು ಏಕಕಾಲಕ್ಕೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮುದಾಯದ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ೨೫ ಲಕ್ಷ ಇರುವ ನದಾಫ್‌ ಸಮುದಾಯದ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ನಮ್ಮ ಸಮುದಾಯಕ್ಕೆ ಯಾವುದೇ ನಿಗಮ ಮಂಡಳಿಯಿಂದಲೂ ಸೌಲಭ್ಯಗಳು ದೊರೆಯುತ್ತಿಲ್ಲ. ನದಾಫ್ ಸಮುದಾಯ ಮುಸ್ಲಿಂ ಧರ್ಮದಲ್ಲಿಯೇ ಇದ್ದು, ಪ್ರವರ್ಗ-೧ರ ಅಡಿಯಲ್ಲಿ ಬರುತ್ತೇವೆ. ಆದರೆ ನಾವು ಅಲ್ಪಸಂಖ್ಯಾತ ನಿಗಮದಲ್ಲಿ ಅರ್ಜಿ ಸಲ್ಲಿಸಿದರೆ ನಿಮಗೆ ಈ ಸೌಲಭ್ಯ ಬರುವುದಿಲ್ಲ ಎಂನ್ನುತ್ತಾರೆ. ನಮ್ಮ ನಿಗಮ ಇನ್ನೂ ಅನುಷ್ಠಾನವಾಗಿಲ್ಲ. ಇದರಿಂದ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಜನತೆಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಇದು ತುಂಬ ತೊಂದರೆಯನ್ನುಂಟು ಮಾಡಿದೆ ಎಂದರು.

ರಾಜ್ಯ ಸರ್ಕಾರವು ೨೦೨೩ರಲ್ಲಿ ನದಾಫ್‌/ಪಿಂಜಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಿದೆ. ಆದರೆ ಅದನ್ನು ಇನ್ನೂ ಅನುಷ್ಠಾನ ಮಾಡಿಲ್ಲ. ಇದರಿಂದಾಗಿ ನಿಗಮಕ್ಕೆ ಅನುದಾನವೂ ಮೀಸಲಿಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ನಾವು ಸರ್ಕಾರಕ್ಕೆ, ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಕೆಲವರು ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನಮ್ಮ ಸಮುದಾಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಪ್ರತ್ಯೇಕ ನಿಗಮದ ಬಗ್ಗೆಯೂ ಪತ್ರ ಬರೆದಿದ್ದು, ತಕ್ಷಣ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನದಾಫ್‌-ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ, ಅಸ್ಮಾನಸಾಬ್ ನದಾಫ್, ವೀರಸಾಬ ಬನ್ನಿಗೋಳ, ಮೃತ್ಯಂಜಸಾಬ ಚುಟ್ಟದ್, ಸಲೀಮಾ ಜಹಾನ್, ಮುಸ್ತಫಾ ಕುದರಿಮೋತಿ, ಸಲೀಮಾ ಜಹಾನ್, ಮುಸ್ತಪಾ ಕುದರಿಮೋತಿ ಇದ್ದರು.