ಮಂಗಳೂರು ದಸರಾ, ಶಾರದೋತ್ಸವದ ಸಂಧರ್ಭ ನಮ್ಮ ಕುಡ್ಲ ವಾಹಿನಿಯ ನೇರ ಪ್ರಸಾರಕ್ಕೆ ನಿರೂಪಣೆ ಮಾಡಲು ಸಂಗ್ರಹಿಸಿದ ಶ್ರೀ ಶಕ್ತಿ ಆರಾಧನೆಯ ವಿಚಾರಗಳನ್ನು ಕದ್ರಿ ನವನೀತ ಶೆಟ್ಟಿ ಅವರು ಪುಸ್ತಕ ರೂಪದಲ್ಲಿ ರಚಿಸಿದ್ದು, ಅದರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಮಂಗಳೂರು: ಮಂಗಳೂರು ದಸರಾ, ಶಾರದೋತ್ಸವದ ಸಂಧರ್ಭ ನಮ್ಮ ಕುಡ್ಲ ವಾಹಿನಿಯ ನೇರ ಪ್ರಸಾರಕ್ಕೆ ನಿರೂಪಣೆ ಮಾಡಲು ಸಂಗ್ರಹಿಸಿದ ಶ್ರೀ ಶಕ್ತಿ ಆರಾಧನೆಯ ವಿಚಾರಗಳನ್ನು ಕದ್ರಿ ನವನೀತ ಶೆಟ್ಟಿ ಅವರು ಪುಸ್ತಕ ರೂಪದಲ್ಲಿ ರಚಿಸಿದ್ದು, ಅದರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪುಸ್ತಕವನ್ನು ಶತಮಾನ ಪೂರೈಸಿರುವ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಮೂಲಕ ಪ್ರಕಾಶಿಸಲಾಯಿತು. ಪ್ರಕಾಶನಕ್ಕೆ ಸಾಯಿನಾಥ ಭಕ್ತ ಮತ್ತು ಕುಟುಂಬ ಮೂಲ ಪ್ರೇರಣೆಯಾಗಿದ್ದರು.ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಯುವಜನತೆ ವಿಕೃತಿಯ ಮಾರ್ಗವನ್ನು ಅನುಸರಿಸದೆ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಇಂತಹ ಪುಸ್ತಕಗಳು ಸಹಕಾರಿಯಾಗಲಿ ಎಂದರು. ಲೇಖಕ ಕದ್ರಿ ಕಂಬಳ ನವನೀತ್ ಶೆಟ್ಟಿ ಶ್ರೀಶಕ್ತಿ ನವರಾತ್ರಿ ಚರಿತಾಮೃತದ ಬಗ್ಗೆ ಮಾಹಿತಿ ನೀಡಿದರು. ಅರ್ಚಕ ವಿವೇಕ ಭಟ್, ಅಧ್ಯಕ್ಷ ಶ್ರೀನಾಥ್ ಪ್ರಭು, ಕೋಶಾಧಿಕಾರಿ ಶೋಭಾ ಐತಾಳ್, ಮಹಾ ಪೋಷಕರಾದ ಪ್ರಫುಲ್ಲ ನಾಯಕ್, ಸಾಯಿನಾಥ್ ಭಕ್ತ, ಸಂಗೀತ ಎಸ್.ಭಕ್ತ, ಶ್ವೇತಾ ಭಕ್ತ, ಸಂಘಟನಾ ಕಾರ್ಯದರ್ಶಿ ಅಶೋಕ್ಬೋ ಬೊಳೂರ್, ವಾಸವಿ, ಉಷಾ ಶೆಟ್ಟಿ, ಭಾರತಿ ರಾವ್ ಇತರರು ಇದ್ದರು.ಕಾರ್ಯಾಧ್ಯಕ್ಷ ಶಿವಪ್ರಸಾದ್ ಪ್ರಭು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ವಂದಿಸಿದರು.