ಸುಲೋಚನಾ ‘ಸತ್ಯದರ್ಶನ’ ನುಡಿಮುತ್ತುಗಳು, ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ್ ತಾಯಿತಾತ್’ ಕೃತಿ ಬಿಡುಗಡೆ

| Published : Jan 02 2024, 02:15 AM IST

ಸುಲೋಚನಾ ‘ಸತ್ಯದರ್ಶನ’ ನುಡಿಮುತ್ತುಗಳು, ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ್ ತಾಯಿತಾತ್’ ಕೃತಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನ ಉಪತಹಸೀಲ್ದಾರ್ ಆಗಿರುವ ಸುಲೋಚನ ಪಿ.ಕೆ ಅವರ ‘ಸತ್ಯದರ್ಶನ’ ನುಡಿಮುತ್ತುಗಳು ಹಾಗೂ ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ್ ತಾಯಿತಾತ್’ (ಅರೆಭಾಷೆ ಕವನ ಸಂಕಲನ) ಎಂಬ ಎರಡು ಪುಸ್ತಕಗಳನ್ನು ಭಾನುವಾರ ಪುತ್ತೂರಿನ ಮಕ್ಕಳ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರುಪ್ರತಿಯೊಬ್ಬರು ಪುಸ್ತಕಗಳನ್ನು ಓದುವುದರ ಜೊತೆಗೆ ಆ ಓದಿನ ತುಮುಲವನ್ನು ಮಂಥನದಲ್ಲಿ ನಡೆಸಬೇಕು ಎಂದು ಶಿಕ್ಷಣ ಸಿದ್ಧಾಂತಿ ಪುತ್ತೂರಿನ ಮಕ್ಕಳ ಮಂಟಪದ ರುವಾರಿ ಡಾ. ಎನ್.ಸುಕುಮಾರ ಗೌಡ ಅಭಿಪ್ರಾಯಪಟ್ಟರು.

ಅವರು ಪುತ್ತೂರಿನ ಉಪತಹಸೀಲ್ದಾರ್ ಆಗಿರುವ ಸುಲೋಚನ ಪಿ.ಕೆ ಅವರ ‘ಸತ್ಯದರ್ಶನ’ ನುಡಿಮುತ್ತುಗಳು ಹಾಗೂ ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ್ ತಾಯಿತಾತ್’ (ಅರೆಭಾಷೆ ಕವನ ಸಂಕಲನ) ಎಂಬ ಎರಡು ಪುಸ್ತಕಗಳನ್ನು ಭಾನುವಾರ ಪುತ್ತೂರಿನ ಮಕ್ಕಳ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪುತ್ತೂರು ತಹಸೀಲ್ದಾರ್ ಶಿವಶಂಕರ್ ಜೆ. ಸಭಾಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಉದಯೋನ್ಮುಖ ಸಾಹಿತಿಗಳಿಗೆ ನಾವು ಬರೆದದ್ದೇ ಉತ್ಕೃಷ್ಟ ಎಂಬ ಭಾವನೆ ಇರಬಾರದು ಎಂದರು.

ಸಾಹಿತಿ ಹಾಗೂ ನ್ಯಾಯವಾದಿಯಾದ ವಿದ್ಯಾಧರ ಕುಡೆಕಲ್ಲು, ಪುತ್ತೂರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮತ್ತು ಶಿಕ್ಷಣ ಚಿಂತಕ ಗೋಪಾಡ್ಕರ್ ಶುಭ ಹಾರೈಸಿದರು.

ಲೇಖಕಿ ಸುಲೋಚನಾ ಪಿ.ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಗ ತರಂಗದ ಕೃಷ್ಙಪ್ಪ ಬಂಬಿಲ ಸ್ವಾಗತಿಸಿ, ವಂದಿಸಿದರು.

ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು. ಸುಳ್ಯದ ಭೀಮರಾವ್ ವಾಸ್ಟರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ೨೨ ಮಂದಿ ಕವನ ವಾಚನ ನಡೆಸಿದರು.