ನೌಕದಳದ ಎಂಟು ಅಧಿಕಾರಿಗಳ ಬಿಡುಗಡೆ: ಮೋದಿಗೆ ಅಭಿನಂದನೆ

| Published : Feb 16 2024, 01:52 AM IST

ಸಾರಾಂಶ

ಕತಾರ್ ದೇಶದ ಬೇಹುಗಾರಿಕೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾದಳದ ಎಂಟು ಮಾಜಿ ಅಧಿಕಾರಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ (ಭಾರತಕ್ಕೆ) ಕರೆತರುವುದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ಚಾಣಾಕ್ಷತನ ಕಾರಣ ಎಂದು ರಾಜ್ಯ ಮಾನವ ಹಕ್ಕುಗಳ ಸಮಿತಿಯ ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಲ್.ತುಳಸಿಧರ್ ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಈ ಎಲ್ಲಾ ಎಂಟು ಭಾರತೀಯರಿಗೆ ಕಳೆದ ವರ್ಷ ಆಗಸ್ಟ್ 26ರಂದು ಮರಣದಂಡನೆ ವಿಧಿಸಲಾಯಿತು. ಡಿಸೆಂಬರ್ 1 ರಂದು ಸಿಒಪಿ 28ರ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕತಾರ್‌ ದೇಶದ ರಾಜ ಏಮಿರ್ ಎಂಬುವರಲ್ಲಿ ವೈಯಕ್ತಿಕವಾಗಿ ಈ 8 ಜನರ ಬಿಡುಗಡೆಗೆ ಬಗ್ಗೆ ಮನವಿ ಮಾಡಿಕೊಂಡಿದ್ದರು.

ಡಿ.3ರಂದು ಭಾರತ ಹಾಗೂ ಕತಾರ್ ದೇಶದ ಅಧಿಕಾರಿಗಳ ತುರ್ತು ಸಭೆ ನಡೆಸಲಾಯಿತು. ಡಿ.7ರಂದು ನ್ಯಾಯಾಲಯದಲ್ಲಿ ಕೇಸ್ ಓಪನ್ ಆಗಿ ಈ ವರ್ಷದ ಜ.12ರಲ್ಲಿ ಈ ಎಂಟು ಜನ ಅಪರಾಧಿಗಳನ್ನು ಜೀವಾವಧಿ ಶಿಕ್ಷೆಗೆ ಪರಿವರ್ತನೆಯಾಗಿದ್ದ ಇವರನ್ನು ನರೇಂದ್ರ ಮೋದಿಯವರು ತಮ್ಮ ರಾಜಕೀಯ ಚಾಣಾಕ್ಷತನದಿಂದ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಜೊತೆಗೆ 2014ರಲ್ಲಿ ಕೇರಳದ 46 ದಾದಿಯರನ್ನು ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರ ನೇತೃತ್ವದಲ್ಲಿ ಕರೆತಂದ ಸಂದರ್ಭದಲ್ಲಿಯೂ ಕೂಡ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರ ಪಾತ್ರವಿತ್ತು. ಹಾಗಾಗಿ ಯುದ್ಧ ಮಾಡದೆ, ರಕ್ತ ಹರಿಸದೆ ರಾಜ ತಾಂತ್ರಿಕ ಮಾರ್ಗದಿಂದ ನಮ್ಮ ದೇಶದ ಯೋಧರನ್ನು ಸುರಕ್ಷಿತವಾಗಿ ಮರಳಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ.