ಸಾರಾಂಶ
ಡಾ. ಉಮೇಶ್ ಭಟ್ ಅವರು ರಚಿಸಿದ ‘ಫೂಟ್‌ಪ್ರಿಂಟ್ ಆನ್ ದ ಸ್ಯಾಂಡ್ಸ್ ಆಫ್ ಟೈಮ್’ ಕೃತಿಯು ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡಿತು.
ಕನ್ನಡಪ್ರಭ ವಾರ್ತೆ ಮಣಿಪಾಲ್
ಇಲ್ಲಿನ ಮಾಹೆಯ ಅಂಗಸಂಸ್ಥೆ ಮಣಿಪಾಲ್ ಯೂನಿವರ್ಸಲ್ ಪ್ರೆಸ್ (ಎಂ.ಯು.ಪಿ.) ಪ್ರಕಟಿಸಿದ ಡಾ. ಉಮೇಶ್ ಭಟ್ ಅವರು ರಚಿಸಿದ ‘ಫೂಟ್‌ಪ್ರಿಂಟ್ ಆನ್ ದ ಸ್ಯಾಂಡ್ಸ್ ಆಫ್ ಟೈಮ್’ ಕೃತಿಯು ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡಿತು. ಇದು ಎಂ.ಯು.ಪಿ.ನ 281ನೇ ಪ್ರಕಟಣೆಯಾಗಿದೆ.ಮಂಗಳೂರಿನ ಪ್ರಸಿದ್ಧ ದಂತವೈದ್ಯರಾದ ಡಾ. ಮುರಲಿ ಮೋಹನ್ ಕೃತಿ ಲೋಕಾರ್ಪಣೆಗೊಳಿಸಿ, ಡಾ.ಉಮೇಶ್ ಭಟ್ ಅವರು ತಮ್ಮ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇದು ಓದುಗರ ಅನುಭವವನ್ನು ವಿಸ್ತರಿಸುವ ಅಪೂರ್ವ ಕೃತಿ ಎಂದರು.
ಮಣಿಪಾಲ ಕೆಎಂಸಿಯ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ. ರಾಜಗೋಪಾಲ್ ಶೆಣೈ, ಮಲೇಷ್ಯಾದ ಮಲೇಕಾ ಮಣಿಪಾಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಸಂತೋಷ್ ಪೈ, ಕುಂದಾಪುರದ ಪ್ರಸಿದ್ಧ ಉದ್ಯಮಿ ಜಲಜಾ ತೋಳಾರ್, ಕುಂದಾಪುರದ ವಿವೇಕ ಬಾಲಕಿಯರ ಪ್ರೌಢಶಾಲೆಯ ಅಧ್ಯಾಪಕಿ ಮಹಾಲಕ್ಷ್ಮೀ ಸೋಮಯಾಜಿ, ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್ ಪುಸ್ತಕ ಪರಿಚಯಿಸಿದರು. ಎಂ.ಯು.ಪಿ. ವ್ಯವಸ್ಥಾಪಕ ಸಂಪಾದಕ ಅರವಿಂದ ಎನ್. ಅವರು ಲೇಖಕರನ್ನು ಅಭಿನಂದಿಸಿದರು.