ಸಾರಾಂಶ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ಅವರ ಸಣ್ಣ ಕಥೆಗಳ ಸಂಕಲನ ‘ಮುಂಡ್ರು’ ಕೃತಿ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸಾಹಿತ್ಯದ ಓದು ಹೊಸ ಚಿಂತನೆಗಳನ್ನು ಹುಟ್ಟಿಸುವುದರ ಜೊತೆಗೆ ನಿರಂತರ ಓದುವಿಕೆಯು ಜ್ಞಾನಿಯನ್ನಾಗಿಸುತ್ತದೆ ಎಂದು ಸಾಹಿತಿ ಮುರಳೀಧರ ಉಪಾಧ್ಯಾಯ ಹೇಳಿದರು.ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ಅವರ ಸಣ್ಣ ಕಥೆಗಳ ಸಂಕಲನ ‘ಮುಂಡ್ರು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ದೇವು ಹನೆಹಳ್ಳಿ ಮಾತನಾಡಿ ಭಾವನಾತ್ಮಕ ಜೀವನಕ್ಕೆ ಬೆಲೆಯನ್ನು ನೀಡಬೇಕಾಗಿದೆ. ಬರೆಯುವ, ಓದುವ ಸಂಸ್ಕೃತಿ ನಮ್ಮೆಲ್ಲರ ನೋವು ಒತ್ತಡಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಮುಂಡ್ರು ಅಂತಹ ಒಂದು ಉತ್ತಮ ಪ್ರಯತ್ನ ಎಂದರು.
ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ. ನಿವೃತ್ತ ಶಿಕ್ಷಕ ಕಾರಿಯಪ್ಪ ರೈ, ಪ್ರದೀಪ್ ಡಿ.ಎಂ. ಹಾವಂಜೆ, ಚೈತ್ರ ಎಸ್.ಎಸ್., ಉಮೇಶ್ ನೆಂತಿಕಲ್ಲು, ಕಟೀಲು ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಭಟ್, ಸಮಾಜಸೇವಕ ಶೇಖರ್ ಹಾವಂಜೆ ,ಇಂಗ್ಲೀಷ್ ಉಪನ್ಯಾಸಕ ಪೊನ್ನಣ್ಣ, ಮಾಲತಿ, ಉಪನ್ಯಾಸಕ ರೋಹಿತ್ ಕಡಬ ಉಪಸ್ಥಿತರಿದ್ದರು.ದಿಶಾ ಶೆಟ್ಟಿ ಹಾಗೂ ರಂಜನಾ ಭಟ್ ಸಾಹಿತಿ ಮತ್ತು ಲೇಖಕರನ್ನು ಪರಿಚಯಿಸಿದರು. ಕೃತಿಕಾರ ಪ್ರದೀಪ್ ಡಿ.ಎಂ. ಹಾವಂಜೆ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಮರಾಠೆ ನಿರೂಪಿಸಿದರು.