ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿಯವರ ಆತ್ಮಕಥನ ಬಿಲಾಂಗಿಂಗ್‌ ಎ ಜರ್ನಿ ಆಫ್‌ ಲವ್‌’ ಪುಸ್ತಕ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿಯವರ ಆತ್ಮಕಥನ ‘ಬಿಲಾಂಗಿಂಗ್‌ ಎ ಜರ್ನಿ ಆಫ್‌ ಲವ್‌’ ಪುಸ್ತಕ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಬಿಡುಗಡೆ ಮಾಡಿದರು.

ಪಟ್ಟಣದ ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಮಂಗಳವಾರ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಮಾತನಾಡಿ, ಸೋನಿಯಾ ಗಾಂಧಿಯವರ ಬಾಲ್ಯ, ರಾಜೀವ್‌ ಗಾಂಧಿ ಅವರೊಂದಿಗಿನ ಜೀವನ, ರಾಜಕೀಯ ಜೀವನ, ಕುಟುಂಬದ ವೈಯಕ್ತಿಕ ದುರಂತಗಳು ಹಾಗೂ 2004ರಲ್ಲಿ ಪ್ರಧಾನಿ ಹುದ್ದೆ ತಿರಸ್ಕರಿಸಿದ ಪ್ರಮುಖ ಘಟನೆಗಳು, ಈ ಪುಸ್ತಕದಲ್ಲಿ ವಿವರವಾಗಿ ಬರೆಯಲಾಗಿದೆ. ಹಾಗಾಗಿ ಈ ಪುಸ್ತಕ ಎಲ್ಲರೂ ಓದಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಣೇಶ ಪಾಟೀಲ್‌, ಓಂಕಾರ ತುಂಬಾ, ಶ್ರೀಮಂತ ಪಾಟೀಲ್‌, ದೇವರಾಜ ಪ್ರಭ, ಸೈಯದ್‌ ಯಾಸೀನ್‌ ಅಲಿ, ಶ್ರೀಮಂತ ಹುಮನಾಬಾದ್‌, ಶಿವಾನಂದ ಕಟ್ಟಿಮನಿ, ಉದಯಕುಮಾರ ವಾರದ, ಸೈಯದ್‌ ಜಾಫರ್‌, ವಿಜಯಕುಮಾರ ಪವಾರ, ನೀಲಕಂಠ ಶೆಟ್ಟಿ, ಶ್ರೀನಾಥ ದೇವಣಿ, ವಿಜಯಕುಮಾತ ನಾತೆ ಹಾಗೂ ಮಂಜು ಸ್ವಾಮಿ ಕಲ್ಲೂರ ಸೇರಿ ಅನೇಕರಿದ್ದರು.

ಮಗನ ಪತ್ತೆಗೆ ತಂದೆಯ ಮನವಿ: ದುಬೈಗೆ ಕೆಲಸ ಮಾಡಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿರುವ ಮಗನನ್ನು ಪತ್ತೆ ಹಚ್ಚಿಕೊಡುವಂತೆ ಮಂಗಳವಾರ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರಿಗೆ ಪಂಡಗೇರಾ ತಾಂಡಾದ ನಿವಾಸಿ ಗಣಪತಿ ಚವ್ಹಾಣ್‌ ಮನವಿ ಮಾಡಿದರು.

ಬಸವಕಲ್ಯಾಣ ತಾಲೂಕಿನ ಪಂಡರಗೇರಾ ತಾಂಡಾದ ನಿವಾಸಿ ಶಿವಾಜಿ ಚವ್ಹಾಣ್‌ ನಾಪತ್ತೆಯಾದ ವ್ಯಕ್ತಿ ಎಂದು ಹೇಳಲಾಗು ತ್ತಿದೆ. ಕೆಲ ದಿನಗಳಿಂದ ಮಗನ ಕರೆ ಬಾರದೇ ಇದ್ದ ಸಂದರ್ಭದಲ್ಲಿ ಮಗನ ಪತ್ತೆ ಹಚ್ಚಿಕೊಡುವಂತೆ ತಂದೆ ಗಣಪತಿ ಚವ್ಹಾಣ್‌ ಮನವಿ ಮಾಡಿದ್ದಾರೆ. ಗಣಪತಿ ಚವ್ಹಾಣ್‌ ಅವರ ಮನವಿಗೆ ಸ್ಪಂದಿಸಿ, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರಿಗೆ ಮಾತನಾಡಿ, ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ಭರವಸೆ ನೀಡಿದರು.