ತುಂಗಭದ್ರಾ ಎಡದಂಡೆ 62 ರಿಂದ 74ನೇ ಉಪ ಕಾಲುವೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಸಮೀಪದ ಹಾಲಾಪುರ ಗ್ರಾಮದಲ್ಲಿ ಉಟಕನೂರು ಮಠದ ಮರಿಬಸವರಾಜ ಸ್ವಾಮೀಜಿಗಳ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕವಿತಾಳ

ತುಂಗಭದ್ರಾ ಎಡದಂಡೆ 62 ರಿಂದ 74ನೇ ಉಪ ಕಾಲುವೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಸಮೀಪದ ಹಾಲಾಪುರ ಗ್ರಾಮದಲ್ಲಿ ಉಟಕನೂರು ಮಠದ ಮರಿಬಸವರಾಜ ಸ್ವಾಮೀಜಿಗಳ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಸ್ವಾಮೀಜಿ ಮಾತನಾಡಿ ಈ ವರ್ಷ ಮಳೆ ಬಾರದೆ ಬರಗಾಲ ಉಂಟಾಗಿದೆ ಕಾಲುವೆಯ ನೀರು ನಂಬಿಕೊಂಡು ಹಾಲಾಪುರ, ಮರಕಂದಿನ್ನಿ, ಮಲ್ಕಾಪುರು, ತೋರಣದಿನ್ನಿ, ಹಿರೇದಿನ್ನಿ, ಚಕ್ಕದಿನ್ನಿ, ಗೂಗೆಬಾಳ, ಬಸಾಪುರ, ಊಟಕನೂರು, ಯದ್ದಲದಿನ್ನಿ, ಸುಂಕನೂರು, 73 ಕ್ಯಾಂಪ್, 74 ಕ್ಯಾಂಪ್ ಸೇರಿದಂತೆ ಈ ಭಾಗದ ರೈತರು ಬತ್ತ ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಬೆಳೆ ನೀರಿನ ಕೊರತೆಯಿಂದ ಒಣಗುತ್ತಿದ್ದು, ಅಧಿಕಾರಿಗಳು ರೈತರಿಗೆ ಸಹಕಾರ ನೀಡಿ ಉತ್ತಮ ರೀತಿಯಲ್ಲಿ ನೀರು ಹರಿಸಬೇಕು ಎಂದು ಮನವಿ ಮಾಡಿದರು.

ಇಇ ವಿಜಯಲಕ್ಷ್ಮಿ ಪಾಟೀಲ್ ಮಾತನಾಡಿ, ಇಲಾಖೆ ನಿಗದಿಪಡಿಸಿದಂತೆ ನೀರನ್ನು ಬಿಡಲಾಗುತ್ತಿದೆ. ಕೆಳಭಾಗದ ರೈತರಿಗೆ ನೀರು ತಲುಪಿಸಬೇಕು ಮತ್ತು ಕುಡಿಯುವ ನೀರಿನ ಕೆರೆಗೆ ನೀರು ತುಂಬಿಸಬೇಕಿದೆ ಹೀಗಾಗಿ ಹೆಚ್ಚಿಗೆ ನೀರು ಬಿಡಲಾಗುವುದಿಲ್ಲ ಎಂದು ಹೇಳಿದರು.

ತಹಸೀಲ್ದಾರ್ ಮಂಜುನಾಥ ಭೋಗಾವತಿ,ಶರಣಪ್ಪ ಗೌಡ ತೋರಣದಿನ್ನಿ, ಮಸ್ತಾನ್ ನಾಯಕ್ ಪೂಜಾರಿ ಮಾತನಾಡಿದರು.

ಎಇಇ ಈಶ್ವರ, ಸಿಪಿಐ ಶಶಿಕಾಂತ್ ಎಂ, ಮರೀಗೌಡ ಮಾಲಿ ಪಾಟೀಲ್, ಜಗದೀಶ ತಾತ, ಸಿದ್ದಾರ್ಥ ಪಾಟೀಲ್, ವೆಂಕಟರಡ್ಡಿ, ಬಿ.ಕರಿಯಪ್ಪ, ಲಿಂಗರಾಜ ಪಾಟೀಲ್, ರಾಘವೇಂದ್ರ ನಾಯಕ, ಮೃತ್ಯುಂಜಯ ಸ್ವಾಮಿ, ನರಸಪ್ಪ ವಕೀಲ, ಯರಿತಾತ, ಶಿವಕುಮಾರ ಪಾಟೀಲ್ ವಟಗಲ್, ಹುಸೇನಪ್ಪ, ವಿರೇಶ ಗೌಡ ಹಾಲಾಪುರ, ಮರಕಂದಿನ್ನಿ, ಮಲ್ಕಪುರು, ತೋರಣದಿನ್ನಿ, ಹಿರೇದಿನ್ನಿ, ಚಕ್ಕದಿನ್ನಿ, ಗುಗೆಬಾಳ, ಬಸಾಪುರು, ಊಟಕನೂರು, ಯದ್ದಲದಿನ್ನಿ, ಸುಂಕನೂರು, 73 ಕ್ಯಾಂಪ್, 74 ಕ್ಯಾಂಪ್ ಇನ್ನಿತರ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

---

06ಕೆಪಿಕೆವಿಟಿ01: ಕವಿತಾಳ ಹಾಲಾಪುರ ಗ್ರಾಮದಲ್ಲಿ ಟಿಎಲ್‌ಬಿಸಿ ನೀರಿಗಾಗಿ ಉಟಕನೂರು ಮಠದ ಮರಿಬಸವರಾಜ ಸ್ವಾಮೀಜಿಗಳ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.