ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಾಧ್ಯವಿದ್ದು ದೇವರ ಮೇಲೆ ವಿಶ್ವಾಸವಿಟ್ಟು ಧರ್ಮದ ಮೇಲೆ ನಂಬಿಕೆ ಇದ್ದರೆ ಜೀವನದಲ್ಲಿ ಸಾಧಕಾಗಲು ಸಾಧ್ಯವೆಂದು ನಿಟ್ಟೆ ವಿದ್ಯಾಸಂಸ್ಥೆಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಹೇಳಿದ್ದಾರೆ.ಮೂಲ್ಕಿಯ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ವಿಷ್ಣುಮೂರ್ತಿ ಕ್ಷೇತ್ರದ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಳದ ವಠಾರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಎಂ.ಎಚ್ ಅರವಿಂದ ಪೂಂಜ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಆದಿತ್ಯ ಪೂಂಜಾ, ಕೃಷ್ಣ ಶೆಟ್ಟಿ ಅಗ್ಗೊಟ್ಟು, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯರಾದ ಯೋಗೀಶ್ ಕೋಟ್ಯಾನ್, ರಾಧಿಕಾ ಕೋಟ್ಯಾನ್, ಉದ್ಯಮಿ ಧನಂಜಯ ಶೆಟ್ಟಿ ಮುಂಬೈ, , ಉದ್ಯಮಿ ಶರತ್ ಸಾಲ್ಯಾನ್ ಬೆಂಗಳೂರು, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಕುಮಾರ್ ಭಟ್, ರಾಘವೇಂದ್ರ ಟಿ ರಾವ್, ಶಶೀಂದ್ರ ಎಂ ಸಾ, ನೂತನ್ ಕೆ ಶೆಟ್ಟಿ, ಸಮಿತಿಯ ಸುನಿಲ್ ಆಳ್ವ, ಹರಿಹರ ಕ್ಷೇತ್ರ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಶೇಖರ್, ಸಮಿತಿಯ ಕಾರ್ಯದರ್ಶಿ ವೈ. ಎನ್ ಸಾಲ್ಯಾನ್, ಪ್ರವೀಣ್ ಕೋಟ್ಯಾನ್ ಮತ್ತಿತರರು ಇದ್ದರು.
ಸುದರ್ಶನ್ ಭಟ್ ಪ್ರಾರ್ಥಿಸಿದರು.ಎಂ.ಎಚ್ ಅರವಿಂದ ಪೂಂಜ ಸ್ವಾಗತಿಸಿದರು. ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುನೀಲ್ ಅಳ್ವ ವಂದಿಸಿದರು. ಡಾ.ಕಿಶೋರ್ ಕುಮಾರ್ ರೈ ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ವೈ.ಎನ್ ಸಾಲ್ಯಾನ್ ಪ್ರಾಸ್ತಾವಿಕ ಮಾತನಾಡಿದರು.