ಧಾರ್ಮಿಕ ಪರಂಪರೆ ಭಾರತೀಯ ಮೂಲ ಸಂಸ್ಕೃತಿ

| Published : Mar 28 2024, 12:53 AM IST

ಸಾರಾಂಶ

ಅಮೀನಗಡ: ಧಾರ್ಮಿಕ ಆಚರಣೆಗಳಿಂದ ಭಾರತೀಯ ಸಂಸ್ಕೃತಿಯ ಅನಾವರಣ ಆಗುತ್ತದೆ. ಇಂದಿನ ಪೀಳಿಗೆ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ತೋರುತ್ತಿರುವುದು ಸ್ವಾಗತಾರ್ಹ ಎಂದು ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಹೇಳಿದರು.

ಕನ್ನಡಪ್ರಭವಾರ್ತೆ ಅಮೀನಗಡ

ಧಾರ್ಮಿಕ ಆಚರಣೆಗಳಿಂದ ಭಾರತೀಯ ಸಂಸ್ಕೃತಿಯ ಅನಾವರಣ ಆಗುತ್ತದೆ. ಇಂದಿನ ಪೀಳಿಗೆ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ತೋರುತ್ತಿರುವುದು ಸ್ವಾಗತಾರ್ಹ ಎಂದು ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಹೇಳಿದರು.

ಪಟ್ಟಣದಲ್ಲಿ ಟೀಮ್ ಮಲ್ಲಯ್ಯ ಬೆಂಗಳೂರು ತಂಡ 10ನೇ ವರ್ಷದ ಶ್ರೀಶೈಲ ಪಾದಾಯತ್ರೆ ನಿಮಿತ್ತ ಸಿದ್ದಪಡಿಸಿದ್ದ 111 ಅಡಿ ಎತ್ತರದ ಮಲ್ಲಯ್ಯನ ಧ್ವಜ ಅನಾವರಣ ಕಾರ್ಯಕ್ರಮ ಹಾಗೂ ಮತದಾನ ಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಂಧ್ರದ ಶ್ರೀಶೈಲ, ಮಂತ್ರಾಲಯ, ಕೇರಳದ ಶಬರಿಮಲೆ ಮುಂತಾದೆಡೆ ಪಾದಯಾತ್ರೆಗಳ ಮೂಲಕ ತೆರಳುವ ಭಕ್ತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದು ಸಂತಸದ ವಿಚಾರ ಎಂದರು ತಿಳಿಸಿದರು.

ಧಾರ್ಮಿಕ ಪರಂಪರೆ ಭರತಭೂಮಿಯ ಜೀವಾಳ. ಸದ್ಯ ಬೆಂಗಳೂರಿನಲ್ಲಿರುವ ಅಮೀನಗಡದ ಮಂಜುನಾಥ ಬಂಡಿಯವರ ತಂಡ ಪ್ರತಿವರ್ಷ ಪಾದಯಾತ್ರೆಯೊಂದಿಗೆ, ವಿವಿಧ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿದೆ. ಅವರ ಸಂಸ್ಥೆಯಿಂದ ಸಹಾಯ, ಸಹಕಾರ ಗಳಂಥಹ ಕಾರ್ಯ ಮಾಡುವ ಮೂಲಕ ಹುಟ್ಟೂರಿನ ಕೀರ್ತಿಯನ್ನು ಹೆಚ್ಚಿಸುತ್ತಿರುವುದು ಸ್ವಾಗತಾರ್ಹ ಎಂದು ಶ್ಲಾಘಿಸಿದರು. ಬೆಂಗಳೂರಿನ ಅಮ್ಮ ಫೌಂಡೇಶನ್‌ ಸಂಸ್ಥಾಪಕ ರೋಹಿತ್ ವಿ.ಕೆ. ಮಾತನಾಡಿ, ದೊಡ್ಡ ಪಟ್ಟಣಗಳಲ್ಲಿರುವ ಐಶಾರಾಮಿ ಹೋಟೆಲ್‌ ಹಾಗೂ ವಿಮಾನದಲ್ಲಿ ಗಗನಸಖಿಯರು ಸ್ವಾಗತ ಕೋರುವುದು, ಅವರಿಗೆ ಬರುವ ಸಂಬಳ ಹಾಗೂ ಭಕ್ಷಿಸಿಗಾಗಿ. ಆದರೆ, ಅಮೀನಗಡದಂತ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಈ ಕಾರ್ಯ ಮೆಚ್ಚಿಕೊಂಡು, ಸ್ವಾಗತಿಸಿ, ಉಪಚರಿಸಿ ಸ್ನೇಹ, ಪ್ರೀತಿ ತೋರುವುದು ಹೃದಯ ವೈಶಾಲ್ಯತೆಯಿಂದ. ಇವರ ಈ ಪ್ರೀತಿ, ವಿಶ್ವಾಸ, ಅಭಿಮಾನಗಳೇ ನಮ್ಮನ್ನು ಬೆಂಗಳೂರಿನಿಂದ ಇಲ್ಲಿಗೆ ಕರೆಸಿ ಪ್ರತಿವರ್ಷ ಇಂಥಹ ಸತ್ಕಾರ್ಯ ಪ್ರೇರೇಪಿಸುತ್ತಿರುವುದು, ಅಮೀನಗಡ ಜನತೆಗೆ ಧನ್ಯೋಸ್ಮಿ ಎಂದರು.

ಈ ವೇಳೆ ಮತದಾನ ಜಾಗೃತಿಯ ಘೋಷವಾಕ್ಯಗಳ ಫಲಕಗಳನ್ನು ಅನಾವರಣ, 111 ಅಡಿ ಎತ್ತರದ ಮಲ್ಲಯ್ಯನ ಧ್ವಜವನ್ನು ಅನಾವರಣಗೊಳಿಸಲಾಯಿತು. ಸಮಾಜದ ಹಿರಿಯರಾದ ಸಂಗಪ್ಪ ಬಂಡಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ ಕುಮಾರ ಕೆ, ಅಂತಾರಾಷ್ಟ್ರೀಯ ಕ್ರೀಡಾಪಟು ಗುರುರೂಪಾ ರವೀಂದ್ರನ್, ರಮೇಶ ಉಮ್ರಾಣಿ, ಮನೋಹರ ನರೋಜ, ರವಿ ಬಂಡಿ, ಸಂಚಾಲಕ ಮಂಜುನಾಥ ಬಂಡಿ ಮುಂತಾವರಿದ್ದರು. ಅಮೀನಗಡ ಸಪ್ತಸ್ವರ ಮೆಲೋಡೀಸ್ ತಂಡದಿಂದ ಪ್ರಾರ್ಥನೆ, ಮಂಜುನಾಥ ಬಂಡಿ ಸ್ವಾಗತಿಸಿ,ನಿರೂಪಿಸಿದರು. 27ಅಮೀನಗಡ.

.

ಫೋಟೋ: ಅಮೀನಗಡದಲ್ಲಿ 111 ಅಡಿ ಅಡಿ ಮಲ್ಲಯ್ಯನ ಧ್ವಜ ಅನಾವರಣ ಕಾರ್ಯಕ್ರಮ. ಮತದಾನ ಜಾಗೃತಿ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ, ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಉದ್ಘಾಟಿಸಿದರು. ಸಂಗಪ್ಪ ಬಂಡಿ ಮುಂತಾದವರಿದ್ದರು.