ಪ್ರವಚನದಿಂದ ಧಾರ್ಮಿಕ, ವೈಚಾರಿಕ ಜಾಗೃತಿ: ಕಲಕೇರಿ

| Published : Oct 14 2024, 01:15 AM IST

ಸಾರಾಂಶ

ಮನುಷ್ಯನ ಅಜ್ಞಾನದ ಅಂಧಕಾರ ಕಳೆದು ಸುಜ್ಞಾನದ ಬೆಳಕಿನೆಡೆಗೆ ಮುನ್ನಡೆಸುವಲ್ಲಿ ಪುರಾಣ ಪ್ರವಚನಗಳು ರಾಜಮಾರ್ಗ

ಗದಗ: ಭಕ್ತರಲ್ಲಿ ಧಾರ್ಮಿಕ, ವೈಚಾರಿಕ ಮತ್ತು ಸಾಮಾಜಿಕವಾಗಿ ಜಾಗೃತಿ ಮೂಡಿಸುವುದೇ ಪುರಾಣ ಪ್ರವಚನದ ಮುಖ್ಯ ಉದ್ದೇಶವಾಗಿದೆ ಎಂದು ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಹೇಳಿದರು.

ಅವರು ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆದ ಶ್ರೀದೇವಿ ಪುರಾಣ, ಪ್ರವಚನದಲ್ಲಿ ಮಾತನಾಡಿ, ಮನುಷ್ಯನ ಅಜ್ಞಾನದ ಅಂಧಕಾರ ಕಳೆದು ಸುಜ್ಞಾನದ ಬೆಳಕಿನೆಡೆಗೆ ಮುನ್ನಡೆಸುವಲ್ಲಿ ಪುರಾಣ ಪ್ರವಚನಗಳು ರಾಜಮಾರ್ಗವಾಗಿವೆ ಎಂದರು.

ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಮಾತನಾಡಿ, ಅಡವೀಂದ್ರ ಸ್ವಾಮಿ ಮಠದಲ್ಲಿ ಕಳೆದ 44 ವರ್ಷಗಳಿಂದ ಶ್ರೀದೇವಿಯ ಪುರಾಣ ಪ್ರವಚನ ನಡೆಸುತ್ತ ಬಂದಿದ್ದು, ಇದರಿಂದ ಭಕ್ತ ಸಮೂಹದಲ್ಲಿ ಭಕ್ತಿ, ಧಾರ್ಮಿಕ ಪ್ರಜ್ಞೆ ಮೂಡಿದೆ ಎಂದರು.

ಈ ವೇಳೆ ಪ್ರಕಾಶ ವೈಲಾಯ್, ವಿದ್ಯಾ ವೈಲಾಯ್, ಜಯಶ್ರೀ ಹುಣಶಿಕಟ್ಟಿ, ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಲ್ಲೇದ, ಮಹಿಳಾ ಸಮಿತಿಯ ಅಧ್ಯಕ್ಷೆ ಲೀಲಾವತಿ ಬಿಳೆಯಲಿ ಇದ್ದರು.

ಭಕ್ತಿ ಸೇವೆಯನ್ನು ಎಸ್.ಎಂ. ಶಿವಾನಂದಮಠ, ಜೆ.ಎ .ಮುಧೋಳ, ವೆಂಕಟೇಶ ಜಾಡರ, ವಿ.ಕೆ. ಮರಾಠಿ, ಎನ್.ವಿ.ಸವಡಿ, ಸಿದ್ಧು ಜಾಧವ ವಹಿಸಿದ್ದರು. ಜ. ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠ ಶಾಲೆಯ ವಟುಗಳಿಂದ ವೇದಘೋಷ ಜರುಗಿತು. ಚನ್ನಬಸಯ್ಯ ಶಾಸ್ತ್ರೀ ಹೇಮಗಿರಿಮಠ ಪುರಾಣ ಪಠಣ ಮಾಡಿದರು. ಸುಕ್ರುಸಾಬ್‌ ಮುಲ್ಲಾ, ಜಗನ್ನಾಥ ಕಲಬುರ್ಗಿ, ಗುರುನಾಥ ಸುತಾರ, ಎಸ್.ಬಿ. ಭಜಂತ್ರಿ ಅವರಿಂದ ಸಂಗೀತ ಜರುಗಿತು. ಬಿ.ಬಿ. ತೋಟಗೇರ ಸ್ವಾಗತಿಸಿದರು. ಯು.ಆರ್. ಭೂಸನೂರಮಠ ನಿರೂಪಿಸಿದರು. ಎ.ಕೆ. ಮುಧೋಳ ವಂದಿಸಿದರು.