ಧರ್ಮಸಭೆ, ಜಾತ್ರೆ, ಉತ್ಸವಗಳು ಸಂಸ್ಕೃತಿ ಉಳಿಸಬೇಕು-ತಿರ್ಲಾಪುರ

| Published : Feb 08 2025, 12:31 AM IST

ಧರ್ಮಸಭೆ, ಜಾತ್ರೆ, ಉತ್ಸವಗಳು ಸಂಸ್ಕೃತಿ ಉಳಿಸಬೇಕು-ತಿರ್ಲಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸಭೆ, ಜಾತ್ರೆ, ಉತ್ಸವಗಳು ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ ಉಳಿಸಬೇಕು ಎಂದು ಹಾವೇರಿ ವಿಶ್ವವಿದ್ಯಾಲಯ ಕುಲಸಚಿವೆ ಡಾ. ವಿಜಯಲಕ್ಷ್ಮೀ ತಿರ್ಲಾಪುರ ಹೇಳಿದರು.

ಶಿಗ್ಗಾಂವಿ: ಧರ್ಮಸಭೆ, ಜಾತ್ರೆ, ಉತ್ಸವಗಳು ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ ಉಳಿಸಬೇಕು ಎಂದು ಹಾವೇರಿ ವಿಶ್ವವಿದ್ಯಾಲಯ ಕುಲಸಚಿವೆ ಡಾ. ವಿಜಯಲಕ್ಷ್ಮೀ ತಿರ್ಲಾಪುರ ಹೇಳಿದರು.

ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಅವರು ಮನೆಯಲ್ಲಿ ನಾವು ಯಾವ ಸಂಸ್ಕೃತಿಯನ್ನು ಉಪಯೋಗಿಸುತ್ತೇವೆ ಅದರ ಅನುಸರಣೆಯನ್ನು ನಮ್ಮ ಮಕ್ಕಳು ಮಾಡುತ್ತಾರೆ. ಆದ್ದರಿಂದ ನಾವು ಆಡುವ ಪ್ರತಿಯೊಂದು ಭಾಷೆಯ ಮೇಲೆ ಹಿಡಿತ ಸಾಧಿಸಬೇಕು ಹಾಗೂ ಮನುಷ್ಯನ ಕೆಟ್ಟ ಗುಣಗಳನ್ನು ಇಂತಹ ಧರ್ಮಸಭೆಗಳ ಮೂಲಕ ತ್ಯಜಿಸೋಣ ಎಂದರು.

ಸಮ್ಮುಖವಹಿಸಿ ಬ್ರಹ್ಮಕುಮಾರಿ ಭಾರತಿ ಜೀ ಮಾತನಾಡಿ, ವಿಶ್ವವನ್ನು ನಾವು ಮನೆಯಂದು ಅದರಲ್ಲಿ ಭಾರತ ದೇಶವೇ ಒಂದು ಗುಡಿ. ಭಾರತ ದೇಶದಲ್ಲಿ ದೇವಸ್ಥಾನವಿಲ್ಲದ ಗ್ರಾಮವಿಲ್ಲ. ಶಿಗ್ಗಾಂವಿಗೆ ಪುರಾತನ ಇತಿಹಾಸವಿದೆ. ಎಲ್ಲರೂ ಕೈ ಬಿಟ್ಟರು ಶಿವ ನಮಗೆ ಕೈ ಬಿಡಲ್ಲ, ಹೊಟ್ಟೆಕಿಚ್ಚು ಪಡುವುದನ್ನು ಬಿಡಬೇಕು, ಜೀವನದಲ್ಲಿ ಶಾಂತಿಬೇಕು ಎಂದರೆ ಬೇರೆಯವರ ಬಗ್ಗೆ ಮಾತನಾಡುವುದನ್ನು ಬಿಡಬೇಕು, ನಗಬೇಕು ನಗುವುದನ್ನು ಕೊಟ್ಟಿರುವುದು ಮನುಷ್ಯ ಜೀವಿಗೆ ಮಾತ್ರ, ಗಂಡುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬ್ಯಾಡರಿ, ದೇವರ ಸೇವೆ ಮಾಡಿ ಎಂದರು. ಹುಬ್ಬಳ್ಳಿಯ ರಾಜಶೇಖರ ಶಿವಾಚಾರ್ಯರು, ಕೂಡಲದ ಗುರು ಮಹೇಶ್ವರ ಶಿವಾಚಾರ್ಯರು, ಶಿವಬಸವ ಗುಬ್ಬಿ ಮಠ ಹೆರೂರ, ವಿರಕ್ತಮಠ ಆಕ್ಕಿಆಲೂರ ಶ್ರೀಗಳು ಸಾನಿಧ್ಯವಹಿಸಿ ಆಶೀರ್ವದಿಸಿದರು.

ಯುವ ಮುಖಂಡ ಭರತ ಬೊಮ್ಮಾಯಿ ಮಾತನಾಡಿ, ಮೈಲಾರಲಿಂಗೇಶ್ವರ ದೇವಸ್ಥಾನದ ಮೂಲಕ ಕ್ಷೇತ್ರದ ಜನತೆಗೆ ಒಳಿತಾಗಲಿ ಹಾಗೂ ಮಳೆ ಬೆಳೆ ಚೆನ್ನಾಗಿ ಆಗಿ ಸಮೃದ್ಧವಾಗಲಿ ಈ ಕ್ಷೇತ್ರ ಎಂದರು.

ಸುಶೀಲಕ್ಕ ಪಾಟೀಲ ಮಾತನಾಡಿದರು. ಡಾ.ರಾಜೇಶ್ವರಿ ಚನ್ನಗೌಡ್ರ, ಡಾ.ರಾಣಿ ತಿರ್ಲಾಪುರ, ಶಾಂತಾಬಾಯಿ ಸುಭೇದಾರ, ಅನುರಾಧಾ ಮಾಳವಾದೆ, ರೂಪಾ ಬನ್ನಿಕೊಪ್ಪ, ರೇಖಾ ಕಂಕಣವಾಡ, ಶೇಖವ್ವ ವಡ್ಡರ, ಜ್ಯೋತಿ ನಡೂರ, ಸಂಗೀತಾ ವಾಲ್ಮೀಕಿ, ವಸಂತಾ ಬಾಗೂರ, ಮೆಹಬೂಬಿ ನೀರಲಗಿ, ರೂಪಾ ನಾಯಕ, ಸುಮತಿ ಯಲಿಗಾರ, ಶಾಂತವ್ವ ಮೊರಬದ, ನಾಗಮ್ಮ ಯಲವಿಗಿ, ಕಸ್ತೂರೆವ್ವ ಮಲ್ಲೂರ, ಮೈಲಾರಲಿಂಗೇಶ್ವರ ಸಮಿತಿ ಸದಸ್ಯ ಸಂತೋಷ ಮೊರಬದ ಅಧ್ಯಕ್ಷತೆವಹಿಸಿದ್ದರು.ಪುರಾಣ ಪ್ರವಚನವನ್ನು ಡಾ.ಪ್ರಭಯ್ಯಶಾಸ್ತ್ರೀ ಹಿರೇಮಠ, ಶಿವಾನಂದ ಮಂದೇವಾಲ, ಬಸವರಾಜ ಚಳಗೇರಿ ಸಂಗೀತ ಕಾರ್ಯಕ್ರಮ ಜರುಗಿತು, ವಿವಿಧ ದಾನಿಗಳನ್ನು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ನಟರಾಜ ನಾಟ್ಯ ವಿದ್ಯಾರ್ಥಿನಿಯರಿಂದ ಭರತ ನಾಟ್ಯ ಸದ್ಭಕ್ತರನ್ನು ರಂಜಿಸಿತು. ಶಿಕ್ಷಕಿ ಗಂಗೂಬಾಯಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.