18ರಿಂದ ದೊಡ್ಡೆತ್ತಿನಹಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮ, ಶ್ರೀ ಅಡ್ಡಪಲ್ಲಕ್ಕಿ ಉತ್ಸವ

| Published : Apr 16 2025, 12:42 AM IST

18ರಿಂದ ದೊಡ್ಡೆತ್ತಿನಹಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮ, ಶ್ರೀ ಅಡ್ಡಪಲ್ಲಕ್ಕಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ದೊಡ್ಡೆತ್ತಿನಹಳ್ಳಿಯಲ್ಲಿ ವಿವಿಧ ದೇವರುಗಳ ದೇವಸ್ಥಾನ ಮಹಾದ್ವಾರ ಪ್ರವೇಶ, ಪ್ರಾಣ ಪ್ರತಿಷ್ಠಾಪನೆ, ಶ್ರೀ ಚೌಡಮ್ಮದೇವಿ ದೇವಸ್ಥಾನ ಕಳಸಾರೋಹಣ ಹಾಗೂ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮಗಳು ಏ.18ರಿಂದ 26ರವರೆಗೆ ಜರುಗಲಿವೆ.

- ಮಹಾದ್ವಾರ ಪ್ರವೇಶ, ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ

- - -

ನ್ಯಾಮತಿ: ತಾಲೂಕಿನ ದೊಡ್ಡೆತ್ತಿನಹಳ್ಳಿಯಲ್ಲಿ ವಿವಿಧ ದೇವರುಗಳ ದೇವಸ್ಥಾನ ಮಹಾದ್ವಾರ ಪ್ರವೇಶ, ಪ್ರಾಣ ಪ್ರತಿಷ್ಠಾಪನೆ, ಶ್ರೀ ಚೌಡಮ್ಮದೇವಿ ದೇವಸ್ಥಾನ ಕಳಸಾರೋಹಣ ಹಾಗೂ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮಗಳು ಏ.18ರಿಂದ 26ರವರೆಗೆ ಜರುಗಲಿವೆ.

ನ್ಯಾಮತಿ ಕೋಹಳ್ಳಿ ಹಿರೇಮಠ ಎನ್‌.ಕೆ. ವಿಶ್ವಾರಾಧ್ಯ ಶಾಸ್ತ್ರಿ ಮತ್ತು ಸಂಗಡಿಗರ ಪೌರೋಹಿತ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿದೆ. 18ರಂದು ಮಧ್ಯಾಹ್ನ ಶ್ರೀ ಭದ್ರಕಾಳಮ್ಮ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಉಡಸಲಮ್ಮ ದೇವಿ, ಶ್ರೀ ಮಾತಂಗ್ಯಮ್ಮ ದೇವಿ, ಶ್ರೀ ಗುಳ್ಳಮ್ಮ ದೇವಿ ಶಿಲಾ ಮೂರ್ತಿಗಳ ರಾಜಬೀದಿ ಉತ್ಸವ ನಡೆಯಲಿದೆ. ಏ.19ರಿಂದ 23ರವರೆಗೆ ಬೆಳಿಗ್ಗೆ ಜಲಾದಿವಾಸ, ಧಾನ್ಯದಿವಾಸ, ತೈಲಾದಿವಾಸ, ಪುಷ್ಪಾದಿವಾಸ, ವಸ್ತ್ರಾದಿವಾಸ ಕಾರ್ಯಕ್ರಮಗಳಿವೆ. ಏ.24ರಂದು ಬೆಳಗ್ಗೆ ಗಂಗಾಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

24ರಂದು ಸಂಜೆ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. 25ರಂದು ಬೆಳಿಗ್ಗೆ ಶ್ರೀಗಳಿಂದ ಶ್ರೀ ವೀರಭದ್ರ ಸ್ವಾಮಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ, ಇಷ್ಟಲಿಂಗ ಪೂಜೆ, ಶ್ರೀ ಭದ್ರಕಾಳಮ್ಮ ದೇವಿ, ಶ್ರೀ ಮಾತಂಗ್ಯಮ್ಮದೇವಿ, ಶ್ರೀ ಉಡಚಲಮ್ಮ ದೇವಿ, ಶ್ರೀ ಗುಳ್ಳಮ್ಮದೇವಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀ ಚೌಡಮ್ಮದೇವಿ ದೇವಸ್ಥಾನ ಕಳಸಾರೋಹಣ ನಡೆಯಲಿದೆ.

ಧರ್ಮಸಭೆ:

25ರಂದು ಸಂಜೆ ರಂಭಾಪುರಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಾರನಹಳ್ಳಿ ಶ್ರೀ ರಾಮಲಿಂಗೇಶ್ವರ ಮಠ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಶ್ರೀ ಸದ್ಗುರು ಶಿವಕುಮಾರ ಹಾಲಸ್ವಾಮೀಜಿ, ಗೋವಿನಕೋವಿ ಶ್ರೀ ಹಾಲಸ್ವಾಮಿ ಬೃಹನ್ಮಠ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ, ಹೊಟ್ಯಾಪುರ ಹಿರೇಮಠ ಶ್ರೀ ಓಂಕಾರ ಸ್ವಾಮಿ ಮರಿದೇವರು ನೇತೃತ್ವ ವಹಿಸಲಿದ್ದಾರೆ.

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ನ್ಯಾಮತಿ, ಹೊನ್ನಾಳಿ ಅವಳಿ ತಾಲೂಕುಗಳ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ನ್ಯಾಮತಿ ತಾಲೂಕು ತಹಸೀಲ್ದಾರ್‌ ಎಚ್‌.ಗೋವಿಂದಪ್ಪ, ಎಸ್‌.ಪಿ. ವಿಜಯಕುಮಾರ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

26ರಂದು ಸಂಜೆ 7ರಿಂದ ಭದ್ರಾವತಿ ಆರ್‌.ಹರೀಶ್‌ ಅವರ ಸೋನಿ ಮೇಲೋಡಿ ಆರ್ಕೇಸ್ಟ್ರಾದಿಂದ ಮನೋರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪೂಜಾ ಕಾರ್ಯಕ್ರಮಗಳ ಪ್ರಾರಂಭದಿಂದಲೂ ಪ್ರತಿದಿನ ಅನ್ನ ಸಂತರ್ಪಣೆ ನಡೆಯುತ್ತದೆ.